ಸಾರಾಂಶ
ಸಂಪತ್ತೊಂದೇ ಸುಖದ ಮೂಲವೆಂದು ತಿಳಿದವರು ಹಲವಾರು ಜನ. ಆದರೆ ಬದುಕಿಗೆ ಯಾವುದು ಆಧಾರವೋ ಅದುವೇ ನಿಜವಾದ ಸಂಪತ್ತು ಎಂದು ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ರಂಭಾಪುರಿ ಪೀಠದ ಪೌರ್ಣಿಮೆ ಧರ್ಮ ಸಮಾರಂಭದಲ್ಲಿ ಆಶೀರ್ವಚನ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಸಂಪತ್ತೊಂದೇ ಸುಖದ ಮೂಲವೆಂದು ತಿಳಿದವರು ಹಲವಾರು ಜನ. ಆದರೆ ಬದುಕಿಗೆ ಯಾವುದು ಆಧಾರವೋ ಅದುವೇ ನಿಜವಾದ ಸಂಪತ್ತು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯನಿಗೆ ನೀರು, ಅನ್ನ ಒಳ್ಳೆಯ ಮಾತು ಇವು ಅಮೂಲ್ಯ ಸಂಪತ್ತು. ಇವುಗಳನ್ನು ಸಂಪಾದಿಸಿಕೊಂಡು ಬಾಳಿದರೆ ಬದುಕಿನಲ್ಲಿ ತೃಪ್ತಿ ಕಾಣಲು ಸಾಧ್ಯ. ಮನುಷ್ಯನಲ್ಲಿ ಬೆಟ್ಟದಷ್ಟು ಹಣವಿದ್ದರೂ ಅದು ಹಸಿವು ಇಂಗಿಸದು. ಕೋಟಿ ಹಣವಿದ್ದರೂ ಒಂದು ತುತ್ತಿಗೂ ಸರಿಯಾಗದು. ಮನುಷ್ಯ ತಿಳಿದುಕೊಂಡಿರುವ ಸಂಪತ್ತಿಗೆ ಜೀವ ಉಳಿಸುವ ಶಕ್ತಿಯಿಲ್ಲ. ಆ ಭಗವಂತನಿತ್ತ ಸಂಪತ್ತು ಬಾಳಿನ ನಿಜವಾದ ಸಂಪತ್ತು ಎಂದು ಅರಿಯಬೇಕು.ಇನ್ನೊಬ್ಬರಿಗೆ ಉಪಕಾರಿಯಾಗಿ ಬಾಳುವಲ್ಲಿ ಜೀವನದ ಹಿರಿಮೆಯಿದೆ. ಬಯಕೆ ಅನಂತ ಆದರೆ ಬಯಕೆ ಕೈಗೂಡಲಿ ಬಿಡಲಿ ಯತಾರ್ಥ ಧರ್ಮದ ಸೂತ್ರಗಳನ್ನು ಪರಿಪಾಲಿಸಿ ಸುಖಿಗಳಾಗಬೇಕೆಂದು ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟವಾಗಿ ಸಮಾರಂಭದಲ್ಲಿ ಶ್ರೀನಿವಾಸ ಸರಡಗಿ, ತೊನಸನಹಳ್ಳಿ, ಸಂಗೊಳ್ಳಿ, ದೋರನಾಳು, ಎಸಳೂರು ಮತ್ತು ಹಲಕರಟಿ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಬೆಂಗಳೂರಿನ ಮೂರು ಜನ ಜಂಗಮ ವಟುಗಳಿಗೆ ಶಿವದೀಕ್ಷೆ ಅಯ್ಯಾಚಾರ ನೀಡಿ ರಂಭಾಪುರಿ ಶ್ರೀ ಶುಭ ಹಾರೈಸಿದರು. ೨೮ಬಿಹೆಚ್‌ಆರ್ ೨:
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದಲ್ಲಿ ಜಂಗಮ ವಟುಗಳಿಗೆ ಶಿವದೀಕ್ಷೆ ಅಯ್ಯಾಚಾರ ನೀಡಿ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.