ಯುವಜನತೆ ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳಿಗೆ ದಾಸರಾಗಬೇಡಿ

| Published : Oct 28 2025, 12:18 AM IST

ಸಾರಾಂಶ

ಯುವ ಜನತೆ ಕುತೂಹಲ ಅಥವಾ ಆಕರ್ಷಣೆಗೆ ಒಳಗಾಗಿ ಮಾದಕ ದ್ರವ್ಯ ಸೇವನೆ ಮಾಡಿದ್ದರೂ ಸಹ ನಂತರದಲ್ಲಿ ಮಾದಕ ವಸ್ತುಗಳು ಅರಿವಿಗೆ ಬಾರದಂತೆ ತನ್ನತ್ತ ಸೆಳೆದು ದಾಸರನ್ನಾಗಿ ಮಾಡುತ್ತವೆ. ಆದ್ದರಿಂದ ಮಾದಕ ದ್ರವ್ಯ ಸೇವಿಸಿ ಕ್ಷಣಿಕ ಸಂತೋಷ ಪಡೆದು ಜೀವನ ನಾಶ ಮಾಡಿಕೊಳ್ಳಬೇಡಿ ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಎಸ್ ಗುಡದಿನ್ನಿ ಸಲಹೆ ನೀಡಿದರು. ಮಾದಕ ವಸ್ತುಗಳ ಸೇವನೆಗೆ ಉತ್ತೇಜಿಸುವ ಸಂದರ್ಭದಲ್ಲಿ ಬೇಡ ಎಂಬ ಸದೃಢ ಮನಸ್ಥಿತಿಯನ್ನು ರೂಢಿಸಿಕೊಂಡು, ಶೈಕ್ಷಣಿಕ ಪ್ರಗತಿಯ ಜತೆಗೆ ಪಠ್ಯೇತರ ಚಟುವಟಿಕೆಗಾದ ಸಂಗೀತ, ಕ್ರೀಡೆ, ನೃತ್ಯ ಹಾಗೂ ಇತರೆ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮವೆಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಯುವ ಜನತೆ ಕುತೂಹಲ ಅಥವಾ ಆಕರ್ಷಣೆಗೆ ಒಳಗಾಗಿ ಮಾದಕ ದ್ರವ್ಯ ಸೇವನೆ ಮಾಡಿದ್ದರೂ ಸಹ ನಂತರದಲ್ಲಿ ಮಾದಕ ವಸ್ತುಗಳು ಅರಿವಿಗೆ ಬಾರದಂತೆ ತನ್ನತ್ತ ಸೆಳೆದು ದಾಸರನ್ನಾಗಿ ಮಾಡುತ್ತವೆ. ಆದ್ದರಿಂದ ಮಾದಕ ದ್ರವ್ಯ ಸೇವಿಸಿ ಕ್ಷಣಿಕ ಸಂತೋಷ ಪಡೆದು ಜೀವನ ನಾಶ ಮಾಡಿಕೊಳ್ಳಬೇಡಿ ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಎಸ್ ಗುಡದಿನ್ನಿ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ದ್ರವ್ಯ ಸೇವನೆ ಮತ್ತು ದುಷ್ಪರಿಣಾಮಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾದಕ ವಸ್ತುಗಳ ಸೇವನೆಗೆ ಉತ್ತೇಜಿಸುವ ಸಂದರ್ಭದಲ್ಲಿ ಬೇಡ ಎಂಬ ಸದೃಢ ಮನಸ್ಥಿತಿಯನ್ನು ರೂಢಿಸಿಕೊಂಡು, ಶೈಕ್ಷಣಿಕ ಪ್ರಗತಿಯ ಜತೆಗೆ ಪಠ್ಯೇತರ ಚಟುವಟಿಕೆಗಾದ ಸಂಗೀತ, ಕ್ರೀಡೆ, ನೃತ್ಯ ಹಾಗೂ ಇತರೆ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮವೆಂದು ತಿಳಿಸಿದರು.

ಬಿಇಒ ಸೋಮಲಿಂಗೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ. ಶಿವಕುಮಾರ್‌ ಮಾತನಾಡಿದರು. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಾಣೇಶ್ ರಾವ್, ಉಪ ಪ್ರಾಂಶುಪಾಲ ಪುರುಷೋತಮ್ ಎಸ್.ಸಿ., ಶಿಕ್ಷಕರಾದ ಸುಮಾ, ಬಿ.ಎಸ್.ಕಾಂತರಾಜು, ತಹಸೀನ್ ಇರ್ಫಾನ್, ಫ್ರಾನ್ಸಿಸ್ ರೋಶನ್, ನಾಗವೇಣಿ, ದಿವಾಕರ್, ಎಚ್.ಆರ್‌. ತೀರ್ಥಪ್ಪ, ಸುಮಾರಾಣಿ, ಅಂಬುಜಾಕ್ಷಿ, ಗೌರಮ್ಮ, ವೀಣಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.