ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಮಡಿಕೇರಿ ತಾಲೂಕಿನ ವಿವಿಧ ಆಸ್ಪತ್ರೆಗಳ ದುರಸ್ತಿ ಕಾರ್ಯಕ್ಕಾಗಿ 1.5 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ನಾಪೋಕ್ಲು ಆಸ್ಪತ್ರೆಯ ಕೊಠಡಿಗಳು 30- 40 ವರ್ಷಗಳಿಂದ ದುರಸ್ತಿ ಕಾಣದೆ ಉಳಿದಿದ್ದು ಅವುಗಳನ್ನು ಶೀಘ್ರ ದುರಸ್ತಿ ಪಡಿಸಲಾಗುವುದು ಎಂದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಯ ಕೊಠಡಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್ ಪೊನ್ನಣ್ಣ ಶನಿವಾರ ಚಾಲನೆ ನೀಡಿ ಮಾತನಾಡಿದರು.ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಕೊಠಡಿಗಳ ದುರಸ್ತಿಗೆ 65 ಲಕ್ಷ ರು. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಅವರು ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.ಸರ್ಕಾರ ಮತ್ತು ಆರೋಗ್ಯ ಇಲಾಖೆಯಿಂದ ಇದಕ್ಕಾಗಿ 65 ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳು ಇವೆ. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಬಿಡುಗಡೆ ಆಗದಿರುವ ಬಗ್ಗೆ ದೂರುಗಳು ಬಂದಿದ್ದು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. 50 ಲಕ್ಷ ರು. ವೆಚ್ಚದಲ್ಲಿ ಎಕ್ಸರೇ ಯಂತ್ರ ವನ್ನು ಅಳವಡಿಸಲಾಗಿದ್ದು ಅದರ ನಿರ್ವಹಣೆಗೆ ಟೆಕ್ನಿಷಿಯನ್ ವಾರಕ್ಕೆ ಒಂದೇ ದಿನ ಬರುತ್ತಿದ್ದು ಸಮಸ್ಯೆಯಾಗಿದೆ. ವಾರದಲ್ಲಿ ಎರಡು ದಿನ ಟೆಕ್ನಿಷಿಯನ್ ಅನ್ನು ನಿಯೋಜಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ರಾಜ್ಯದಾದ್ಯಂತ ವೈದ್ಯರ ಕೊರತೆ ಇದೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಇದೇ ಸಂದರ್ಭ ಇಂದಿರಾನಗರದ ವಿವೇಕಾನಂದ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ಶಾಸಕರು ನೆರವೇರಿಸಿದರು. 50 ಲಕ್ಷ ರು. ಅನುದಾನದಲ್ಲಿ ಕುಪ್ಪಟ್ಟು- ಕೋಕೇರಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಬಹಳ ದಿನಗಳಿಂದ ರಸ್ತೆ ದುರಸ್ತಿಗೆ ಸ್ಥಳೀಯರು ಕೋರಿಕೆ ಸಲ್ಲಿಸಿದ್ದರು .ಇದೀಗ 50 ಲಕ್ಷ ರು. ಅನುದಾನದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. 10 ಲಕ್ಷ ರು. ಅನುದಾನದಲ್ಲಿ ಸಮುದಾಯ ಭವನವನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದರು. ಈ ಸಂದರ್ಭ ಶಾಸಕ ಪೊನ್ನಣ್ಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಿಗೆ ಇನ್ನಿತರರಿಗೆ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಕೆಡಿಪಿ ಸದಸ್ಯ ಎಂ ಹೆಚ್ ಅಬ್ದುಲ್ ರಹಿಮಾನ್, ಕೆಡಿಪಿ ಸದಸ್ಯ ಬಾಚಮಂಡ ಲವ ಚಿಣ್ಣಪ್ಪ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಕೆ ಎ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಬೊಳ್ಳಂಡ ಶರಿ, ತಾಲೂಕು ಆರೋಗ್ಯಾಧಿಕಾರಿ ಚೇತನ್, ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜೀವನ್, ಪಿಡಬ್ಲ್ಯೂಡಿ ಇಂಜಿನಿಯರ್ ರಘು, ಪ್ರಮುಖರಾದ ಬಿದ್ದಾಟಂಡ ತಮ್ಮಯ್ಯ ಮನ್ಸೂರ್ ಆಲಿ ಎಂ.ಎ, ಕೊಡಗು ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ವೈ ಸಿ ಕತ್ತನಿರ, ಕೊಡಗು ಜಿಲ್ಲಾ ಕಾರ್ಮಿಕ ಸಂಘದ ಉಪಾಧ್ಯಕ್ಷ ಪರವಂಡ ಮಿರ್ಶಾದ್, ಕುಲ್ಲೇಟಿರ ಅರುಣ್ ಬೇಬ, ಸಂಪನ್ ಅಯ್ಯಪ್ಪ, ಕೋಡಿರ ವಿನೋದ್ ನಾಣಯ್ಯ, ಎಂ ಎ ಮನ್ಸೂರ್ ಆಲಿ, ಅಪ್ಪಚೆಟ್ಟೋಳಂಡ ಮಿಥುನ್ ಮಾಚಯ್ಯ, ಸಾಬಾ ತಿಮ್ಮಯ್ಯ, ಇಬ್ರಾಹಿಂ ಹಾಗೂ ಚುನಾಯಿತ ಪ್ರತಿನಿಧಿಗಳು, ಆರೋಗ್ಯ ಕೇಂದ್ರದ ಸಿಬ್ಬಂದಿ ಸಾರ್ವಜನಿಕರು ಉಪಸ್ಥಿತರಿದ್ದರು.