ಸಾರಾಂಶ
ಬಸವಕಲ್ಯಾಣದ ಶಿವಾಜಿ ಸ್ಮಾರಕಕ್ಕೆ ಕಲ್ಯಾಣ-ಕರ್ನಾಟಕ ಮಂಡಳಿಯಿಂದ 1.5 ಕೋಟಿ ರುಪಾಯಿ ಅನುದಾನ ಮಂಜೂರು ಮಾಡಿಸಿದ ವಿಜಯಸಿಂಗ್ ಅವರಿಗೆ ಮರಾಠಾ ಸಮಾಜದಿಂದ ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ನಗರದಲ್ಲಿ ಕಳೆದ 20 ವರ್ಷಗಳ ಹಿಂದೆ ನಿರ್ಮಾಣಗೊಂಡ ಶಿವಾಜಿ ಪಾರ್ಕ್‌ಗೆ ಅನುದಾನ ಇಲ್ಲದೇ ಅಭಿವೃದ್ಧಿ ಆಗಿದಿಲ್ಲ ಮಾಜಿ ಎಂಎಲ್ಸಿ ವಿಜಯಸಿಂಗ್ ಅವರು ಅನುದಾನ ಮಂಜೂರು ಮಾಡಿಸಿ ಸಮಸ್ಯೆ ಬಗೆಹರಿಸಿದಕ್ಕಾಗಿ ಮರಾಠಾ ಸಮಾಜದಿಂದ ಅವರನ್ನು ಸೋಮವಾರ ಅಭಿನಂದಿಸಲಾಯಿತು.ಕಳೆದ 20 ವರ್ಷದ ಈ ಅವಧಿಯಲ್ಲಿ ಎಂ.ಜಿ ಮೂಳೆ, ಬಸವರಾಜ ಪಾಟೀಲ ಅಟ್ಟೂರ, ಮಲ್ಲಿಕಾರ್ಜುನ ಖೂಬಾ, ಬಿ.ನಾರಾಯಣರಾವ, ಶರಣು ಸಲಗರ ಹೀಗೆ ಐದು ಜನ ಶಾಸಕರಾಗಿದ್ದರು. ಅವರು ಈ ಸ್ಮಾರಕದ ಅಭಿವೃದ್ಧಿಗಾಗಿ ಪ್ರಯತ್ನಿಸಿ ಅಲ್ಪ ಸ್ವಲ್ಪ ಕೆಲಸ ಮಾಡಿದರು. ಹೀಗಾಗಿ ಈ ಸಮಸ್ಯೆ ಕಗ್ಗಂಟಾಗಿ ಉಳಿದಿರುವುದನ್ನು ಮಾಜಿ ವಿಧಾನ ಪರಿಷತ ಸದಸ್ಯ ವಿಜಯಸಿಂಗ ಗಂಭೀರವಾಗಿ ತೆಗೆದುಕೊಂಡು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 1.5 ಕೋಟಿ ರುಪಾಯಿ ಅನುದಾನ ಬಿಡುಗಡೆಗೊಳಿಸಿದ್ದಾರೆ.
ಇದಲ್ಲದೇ ಸ್ಮಾರಕದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಕುರಿತು ನೀಲನಕ್ಷೆ ತಯಾರಿಸಿದ್ದು ಅದನ್ನು ವೇದಿಕೆ ಮೇಲೆ ಬಿಡುಗಡೆಗೊಳಿಸಿದರು. ಇದನ್ನು ಸರ್ವರು ಒಪ್ಪಿಕೊಂಡು ವಿಜಯಸಿಂಗ ಕಾರ್ಯಕ್ಕೆ ಅಭಿನಂದಿಸಿದರು.ಈ ಸಂಧರ್ಭದಲ್ಲಿ ಮಾತನಾಡಿದ ವಿಜಯಸಿಂಗ, ವೇದಿಕೆಯ ಮೇಲೆ ನಾವೆಲ್ಲರು ಮಹಾತ್ಮರ ಬಗ್ಗೆ ಒಳ್ಳೆಯ ಮಾತನಾಡುತ್ತೇವೆ ವೇದಿಕೆಯಿಂದ ಇಳಿದ ಕೂಡಲೆ ಎಲ್ಲವು ಮರೆತು ಬಿಡುತ್ತೇವೆ. ಹೀಗಾಗಿ ಅಭಿವೃದ್ಧಿ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿ ಕಾರ್ಯ ರೂಪಕ್ಕೆ ಬರುತ್ತಿಲ್ಲ ಎಲ್ಲರು ಒಗ್ಗಟ್ಟಿನಿಂದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದರು.
ಶಾಸಕ ಶರಣು ಸಲಗರ, ಮಾಜಿ ಶಾಸಕರಾದ ಎಂ.ಜಿ ಮೂಳೆ, ಮಲ್ಲಿಕಾರ್ಜುನ ಖೂಬಾ, ಕಾಂಗ್ರೆಸ್ ಮುಖಂಡರಾದ ಧನರಾಜ ತಾಳಂಪಳ್ಳಿ, ಮಾಲಾ.ಬಿ.ನಾರಾಯಣರಾವ, ನಗರ ಸಭೆ ಮಾಜಿ ಅಧ್ಯಕ್ಷ ಶಹಜಾನ ಮತ್ತು ಅನೀಲ ಭೂಸಾರೆ, ದೀಪಕ ಗಾಯಕವಾಡ, ಸಮಾಜದ ಮುಖಂಡ ವಿ.ಟಿ ಶಿಂಧೆ, ಪ್ರಥ್ವಿಗೀರ ಗೋಸಾಮಿ, ದತ್ತು ಪಾಟೀಲ ಮುಂತಾದವರು ಉಪಸ್ಥಿತರಿದ್ದರು.