ಬ್ಯಾಡಗಿ ಮಾರುಕಟ್ಟೆಗೆ ಮತ್ತೊಮ್ಮೆ 1.5 ಲಕ್ಷ ಚೀಲ ಮೆಣಸಿನಕಾಯಿ ಆವಕ, ದರದಲ್ಲಿ ಸ್ಥಿರತೆ

| Published : Jan 26 2024, 01:47 AM IST

ಬ್ಯಾಡಗಿ ಮಾರುಕಟ್ಟೆಗೆ ಮತ್ತೊಮ್ಮೆ 1.5 ಲಕ್ಷ ಚೀಲ ಮೆಣಸಿನಕಾಯಿ ಆವಕ, ದರದಲ್ಲಿ ಸ್ಥಿರತೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಜ. 25ರಂದು 1.54 ಲಕ್ಷ ಚೀಲ ಮೆಣಸಿನಕಾಯಿ ಆವಕವಾಗಿದೆ. ಎಂದಿನಂತೆ ಕಡ್ಡಿ, ಡಬ್ಬಿ, ಗುಂಟೂರು 3 ತಳಿಗಳು ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಆವಕಿನಲ್ಲಿ ಸ್ವಲ್ಪ ಇಳಿಮುಖವಾದರೂ ಗುರುವಾರ 1.54 ಲಕ್ಷ ಚೀಲ ಮೆಣಸಿನಕಾಯಿ ಆವಕವಾಗಿದ್ದು, ಎಂದಿನಂತೆ ಕಡ್ಡಿ, ಡಬ್ಬಿ, ಗುಂಟೂರು 3 ತಳಿಗಳು ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.ಲಕ್ಷದ ಆಸುಪಾಸಿನಲ್ಲಿದ್ದ ಮೆಣಸಿನಕಾಯಿ ಚೀಲದ ಆವಕ ಚೇತರಿಕೆಯಿಂದ ಕಳೆದ ವಾರ 1,68,489 ಚೀಲಗಳು ಮಾರಾಟಕ್ಕೆ ಲಭ್ಯವಿತ್ತು. ಕಳೆದ ವಾರಕ್ಕಿಂತ ಹೆಚ್ಚಾಗಬಹುದೆಂದು ವರ್ತಕರು ನಿರೀಕ್ಷಿಸಿದ್ದರಾದರೂ ಇಂದು 1,54,769 ಚೀಲಗಳಷ್ಟು ಮೆಣಸಿನಕಾಯಿ ಆವಕವಾಗಿದೆ.

ಸರಾಸರಿ ದರದಲ್ಲಿ ಕಡ್ಡಿತಳಿ ಏರಿಕೆ: ಕಳೆದ ವಾರ ಕಡ್ಡಿತಳಿ ಸರಾಸರಿ ₹37 ಸಾವಿರ (ಪ್ರತಿ ಕ್ವಿಂಟಲ್‌ಗೆ) ಮಾರಾಟವಾಗಿತ್ತಾದರೂ ದರದಲ್ಲಿ ಸ್ವಲ್ಪಮಟ್ಟಿನ ಏರಿಕೆ ಕಂಡುಬಂದಿದ್ದು, 38 ಸಾವಿರಕ್ಕೆ ಮಾರಾಟವಾಗಿದೆ. ಇನ್ನುಳಿದಂತೆ ಡಬ್ಬಿತಳಿ ಸರಾಸರಿ ₹40 ಸಾವಿರ ಹಾಗೂ ಗುಂಟೂರ ₹14 ಸಾವಿರ ಸರಾಸರಿ ದರದಲ್ಲಿ ಬಿಕರಿಗೊಂಡವು. ಗುಣಮಟ್ಟದ ಕಡ್ಡಿತಳಿ ಅತಿ ಹೆಚ್ಚು ₹58 ಸಾವಿರ, ಡಬ್ಬಿತಳಿ ₹56 ಸಾವಿರಕ್ಕೆ ಮಾರಾಟವಾದವು.

400 ಸಮೀಪಿಸಿದ ಖರೀದಾರರ ಸಂಖ್ಯೆ: ಮೆಣಸಿನಕಾಯಿ ಚೀಲದ ಆವಕ ಹೆಚ್ಚಾಗುತ್ತಿದ್ದಂತೆ ಮೆಣಸಿನಕಾಯಿ ಖರೀದಿಸಲು ವರ್ತಕರು ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಕಳೆದ ವಾರ 383ರಷ್ಟಿದ್ದ ಖರೀದಿದಾರರ ಸಂಖ್ಯೆ ಇಂದು 394ಕ್ಕೆ ಏರಿಕೆಯಾಗಿದೆ. ಒಟ್ಟು 297 ಕಮೀಶನ್ ಎಜೆಂಟರ ಅಂಗಡಿಗಳಲ್ಲಿ ಮೆಣಸಿನಕಾಯಿ ಮಾರಾಟಕ್ಕೆ ಲಭ್ಯವಿದ್ದುದಾಗಿ ಮಾರುಕಟ್ಟೆ ಮೂಲಗಳು ದೃಢಪಡಿಸಿವೆ.

ಗುರುವಾರ ಮಾರುಕಟ್ಟೆ ದರ: ಗುರುವಾರ (ಜ. 25) ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹3029 ಗರಿಷ್ಠ ₹58699 ಸರಾಸರಿ ₹38029, ಡಬ್ಬಿತಳಿ ಕನಿಷ್ಠ ₹3269 ಗರಿಷ್ಠ ₹56869 ಸರಾಸರಿ ₹40129, ಗುಂಟೂರು ಕನಿಷ್ಠ ₹1669 ಗರಿಷ್ಠ ₹18109 ಸರಾಸರಿ ₹14589 ಗಳಿಗೆ ಮಾರಾಟವಾಗಿವೆ.