ಬ್ಯಾಡಗಿ: ಗುರುವಾರ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ (ಮಾ.26) 1.50 ಲಕ್ಷ ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ಕಳೆದ ಕೆಲ ವಾರಗಳಿಂದ ಪ್ರತಿವಾರ ಕೇವಲ ಒಂದು ಲಕ್ಷದಿಂದ ಒಂದೂವರೆ ಲಕ್ಷ ಚೀಲಗಳಷ್ಟೇ ಆವಕವಾಗುತ್ತಿದ್ದು ಈ ವರ್ಷದ ಸೀಜನ್ ಮುಗಿಯುವ ಲಕ್ಷಗಳು ಕಾಣಿಸುತ್ತಿದೆ. ಈಗಾಗಲೇ ಮಾರ್ಚ್‌ ಮುಕ್ತಾಯವಾಗುತ್ತಾ ಬಂದಿದ್ದು ಆವಕದಲ್ಲಿಯೂ ಕ್ರಮೇಣ ಇಳಿಕೆ ಕಂಡು ಬರುತ್ತಿದೆ. ಕಳೆದ ಸೋಮವಾರವು ಸಹ 1.68 ಲಕ್ಷ ಮೆಣಸಿನಕಾಯಿ ಚೀಲ ಆವಕಾಗಿದ್ದವು ಆದರೆ ಅದಕ್ಕೆ 18 ಸಾವಿರ ಕಮ್ಮಿ ಚೀಲಗಳು ಆವಕಾಗಿವೆ.ದರದಲ್ಲಿ ಸ್ಥಿರತೆ: ಪ್ರಸಕ್ತ ವರ್ಷ ಆವಕ ಕಮ್ಮಿ ಆದರೂ ಸಹ ಗಮನಾರ್ಹ ಸಂಗತಿಯೆಂದರೆ, ದರದಲ್ಲಿ ಪ್ರತಿವಾರ ಸ್ಥಿರತೆ ಕಂಡು ಬರುತ್ತಿದೆ. ಈ ವಾರವು ಸಹ ಮೂರು ತಳಿಯ ಮೆಣಸಿನಕಾಯಿ ದರದಲ್ಲಿ ಸ್ಥಿರತೆ ಕಂಡು ಬಂದಿದೆ. ಇದರಿಂದ ಗುಣಮಟ್ಟದ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಮುಂದುವರೆದಿದೆ.ಗುರುವಾರ ಮಾರುಕಟ್ಟೆ ದರ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ ಒಟ್ಟು 1.50.861 ಚೀಲಗಳು ಆವಕಾಗಿದ್ದು, ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹ 4109 ಗರಿಷ್ಠ ₹ 62899 ಸರಾಸರಿ 47509, ಡಬ್ಬಿತಳಿ ಕನಿಷ್ಠ 5119 ಗರಿಷ್ಠ 62666 ಸರಾಸರಿ 49829, ಗುಂಟೂರು ಕನಿಷ್ಠ 1409 ಗರಿಷ್ಠ 17809 ಸರಾಸರಿ 13129 ರು.ಗಳಿಗೆ ಮಾರಾಟವಾಗಿವೆ.