ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಸಹ ಬಾಕಿ ಇಲ್ಲದಂತೆ ಮೂಲಭೂತ ಸೌಕರ್ಯ ಒದಗಿಸುವುದಲ್ಲದೆ, ಕ್ಷೇತ್ರದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾರ್ಯ ನಡೆಸಿ ಒಂದು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಶ್ರಮಿಸುತ್ತೇನೆ ಎಂದು ಶಾಸಕ ದರ್ಶನ್ ದ್ರುವನಾರಾಯಣ ಹೇಳಿದರು.ತಾಲೂಕಿನ ಹೊರಳವಾಡಿ, ಹೊರಳವಾಡಿ ಹೊಸೂರು, ಗೋಳೂರು, ಬದನವಾಳು, ಹೆಡತಲೆ, ಹೆಮ್ಮರಗಾಲ, ಹಂಪಾಪುರ, ಗ್ರಾಮಗಳಲ್ಲಿ 1.84 ಕೋಟಿ ರೂ. ವೆಚ್ಚದ ಸಿ.ಸಿ. ರಸ್ತೆ, ಚರಂಡಿ, ಸಮುದಾಯ ಭವನ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ 25 ಕೋಟಿ ರೂ. ವಿಶೇಷ ಅನುದಾನ ನೀಡಿದ್ದು, 20 ಕೋಟಿ ರೂ.ಗಳನ್ನು ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ನಡೆಸಲು ಮೀಸಲಿರಿಸಲಾಗಿದೆ. ಅನುದಾನದಲ್ಲಿ ಹೆಮ್ಮರಗಾಲ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ, ಹೊರಳವಾಡಿ ಹೊಸೂರು ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಗೋಳೂರು ಹಾಗೂ ಬದನವಾಳು ಗ್ರಾಮಗಳಲ್ಲಿ ತಲಾ 20 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಹೆಡತಲೆ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ರಥದ ಬೀದಿ ಅಭಿವೃದ್ಧಿ ಕಾಮಗಾರಿ, ಗೋಳೂರು ಗ್ರಾಮದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಕಮ್ಮಾರ ಸಮುದಾಯ ಭವನ, ಹಂಪಾಪುರ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಟೀಕೆ ಮಾಡುತ್ತಿದ್ದರೂ, ಕಾಂಗ್ರೆಸ್‌ಸರ್ಕಾರ ಜನರಿಗೆ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವ ಮೂಲಕ ಸೂಕ್ತ ಉತ್ತರ ನೀಡಿದೆ ಎಂದು ಹೇಳಿದರು.
ಕೌಲಂದೆ ಭಾಗ ಹಸಿರೀಕರಣಕ್ಕೆ ಕ್ರಮನನ್ನ ತಂದೆ ಧ್ರುವನಾರಾಯಣ ಅವರಿಗೆ ಕೌಲಂದೆ ಹೋಬಳಿ ಬರಡು ಪ್ರದೇಶವಾಗಿರುವುದರಿಂದ ಈ ಭಾಗವನ್ನು ಏತ ನೀರಾವರಿ ಯೋಜನೆ ಜಾರಿಗೊಳಿಸುವ ಮೂಲಕ ಹಸರೀಕರಣಗೊಳಿಸಬೇಕು ಎಂಬ ಆಸೆ ಇತ್ತು. ಆಸೆಯನ್ನು ನೆನೆಸು ಮಾಡುವ ಸಲುವಾಗಿ 90 ಕೋಟಿ ರೂ. ವೆಚ್ಚದಲ್ಲಿ ದೇವನೂರು ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಅನುದಾನ ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಂದ ಅತಿ ಹೆಚ್ಚು ಅನುದಾನ ಮಂಜೂರು ಮಾಡಿಸಿ ಏತ ನೀರಾವರಿ ಯೋಜನೆ ಜಾರಿಗೊಳಿಸುವ ಮೂಲಕ ಈ ಭಾಗವನ್ನು ಹಸರೀಕರಣಗೊಳಿಸಲು ಬದ್ಧನಾಗಿದ್ದೇನೆ ಎಂದರು.
ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಜಿಪಂ ಮಾಜಿ ಸದಸ್ಯೆ ಲತಾ ಸಿದ್ದಶೆಟ್ಟಿ, ಗ್ರಾಪಂ ಸದಸ್ಯ ಮುದ್ದುಮಾದಶೆಟ್ಟಿ, ನವೀನ, ರಂಗದಾಸ್, ಮುಖಂಡರಾದ ನಾಗರಾಜಯ್ಯ, ದೊರೆಸ್ವಾಮಿ ನಾಯಕ, ಶಿವಕುಮಾರ್, ಗೋಳೂರು ಮಹದೇವಸ್ವಾಮಿ, ಜಯಮಾಲಾ ಬೀರೇಗೌಡ, ರಂಗಸ್ವಾಮಿ, ವಿಜಯ್ ಕುಮಾರ್, ಶ್ರೀನಿವಾಸಮೂರ್ತಿ, ಎನ್.ಎಂ. ಮಂಜುನಾಥ್, ಎನ್.ಎಸ್. ಮಾದಪ್ಪ, ಶಿವಪ್ಪದೇವರು, ಕಳಲೆ ರಾಜೇಶ, ಮಹೇಂದ್ರ, ಕೆ.ಆರ್.ಐ.ಡಿ.ಎಲ್. ಎಂಜಿನಿಯರ್ ಶರಣ್, ಪುರುಷೋತ್ತಮ, ಪಿಡಿಒಗಳಾದ ಕರಿಯಪ್ಪ, ರಾಜಶೇಖರ್ ಮೊದಲಾದವರು ಇದ್ದರು.