ನಯಾನಗರ-ಚಿಕ್ಕಮುಳಕೂರ ಕೃಷಿ ಸಹಕಾರ ಸಂಘಕ್ಕೆ ₹1.85 ಲಕ್ಷ ಲಾಭ

| Published : Sep 11 2024, 01:05 AM IST

ಸಾರಾಂಶ

20 ವರ್ಷಗಳಿಂದ ಸೊಸೈಟಿಯು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರ್ಥಿಕವಾಗಿ ಸಬಲರನ್ನಾಗಿಸಲು ಪ್ರಾಮಾಣಿಕ ಪ್ರಯತ್ನಿ ಮಾಡಲಾಗುತ್ತಿದ್ದು, ಗ್ರಾಹಕರು ಸಂಘದ ಸದುಪಯೋಗ ಪಡೆಯಬೇಕೆಂದು ನಯಾನಗರ-ಚಿಕ್ಕಮುಳಕೂರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಮುದಕಪ್ಪ ತೋಟಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

20 ವರ್ಷಗಳಿಂದ ಸೊಸೈಟಿಯು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರ್ಥಿಕವಾಗಿ ಸಬಲರನ್ನಾಗಿಸಲು ಪ್ರಾಮಾಣಿಕ ಪ್ರಯತ್ನಿ ಮಾಡಲಾಗುತ್ತಿದ್ದು, ಗ್ರಾಹಕರು ಸಂಘದ ಸದುಪಯೋಗ ಪಡೆಯಬೇಕೆಂದು ನಯಾನಗರ-ಚಿಕ್ಕಮುಳಕೂರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಮುದಕಪ್ಪ ತೋಟಗಿ ಹೇಳಿದರು.

ತಾಲೂಕಿನ ನಯಾನಗರ ಗ್ರಾಮದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ 20ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಸಂಘಗಳು ರೈತಪರ ಕೆಲಸ ನಿರ್ವಹಿಸುತ್ತಿದ್ದು, ಇದರ ಸದ್ಬಳಕೆ ಮಾಡಿಕೊಂಡು, ರೈತರು ಪಡೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಸಂಸ್ಥೆಗಳು ಪ್ರಗತಿಪಥದತ್ತ ಸಾಗಲು ಸಾಧ್ಯವೆಂದರು.

ಸಹಕಾರಿಯು 430 ಸದಸ್ಯರನ್ನು ಹೊಂದಿದ್ದು, ₹3 ಕೋಟಿ ದುಡಿಯುವ ಬಂಡವಾಳ, ₹2 ಕೋಟಿ 36 ಲಕ್ಷ ವಿವಿಧ ಸಾಲ ನೀಡಿದ್ದು, ₹1.85 ಲಕ್ಷ ಲಾಭ ಗಳಿಸಿದೆ.ಸಹಕಾರಿಯ ಬೆಳವಣಿಗೆಗೆ ಸಿಬ್ಬಂದಿಯ ಪ್ರಾಮಾಣಿಕ ಸೇವಾ ಮನೋಭಾವನೆಯೇ ಕಾರಣ ಎಂದು ಹೇಳಿದರು.

ವೇದಿಕೆ ಮೇಲೆ ನಿರ್ದೇಶಕರಾದ ಜಗದೀಶ ಅಡಕಿ, ಭೀಮಪ್ಪ ಕರಿದೇಮಣ್ಣವರ, ಬಶೆಟ್ಟೆಪ್ಪ ಅಡಕಿ, ಬಸಪ್ಪ ತೋಟಗಿ, ಬಸನಗೌಡ ಸಂಕನ್ನವರ, ಪಾರವ್ವ ತೋಟಗಿ, ಸುಮಿತ್ರಾ ಹಂಪಿಹೊಳಿ, ಈರಪ್ಪ ಸಂಗೊಳ್ಳಿ, ಹಣಮಂತಪ್ಪ ಕಾಳೆ, ಬ್ಯಾಂಕ ನಿರೀಕ್ಷಕ ರಾಜಶೇಖರ ಗೂಳಣ್ಣವರ, ಸಲಹಾ ಸಮಿತಿಯ ಬಾಲಪ್ಪ ಉಳ್ಳಿಗೇರಿ, ವೆಂಕಟೇಶ ಪೂಜೇರ, ಮಲ್ಲನಗೌಡ ಪಾಟೀಲ ಇತರರು ಇದ್ದರು. ಮುಖ್ಯ ಕಾರ್ಯನಿರ್ವಾಹಕ ದುಂಡಪ್ಪ ಕಾಲಗಗ್ಗರಿ ಸ್ವಾಗತಿಸಿ, ವಂದಿಸಿದರು.