ಸಾರಾಂಶ
ನರಸಿಂಹರಾಜಪುರ: ಸಿಪ್ಪೆ ತೆಗೆದ ಒಂದು ತೆಂಗಿನಕಾಯಿ ಅಬ್ಬಬ್ಬಾ ಎಂದರೆ 600 ರಿಂದ 700 ಗ್ರಾಂ ತೂಗ ಬಹುದು. ಆದರೆ, ತಾಲೂಕಿನ ಬಿ.ಎಚ್.ಕೈಮರದ ಎಂ.ವಿ.ರಾಜೇಂದ್ರಕುಮಾರ್ ಅವರ ತೋಟದಲ್ಲಿ ಬೆಳೆದಈ ತೆಂಗಿನಕಾಯಿ1 ಕೆ.ಜಿ.100 ಗ್ರಾಂ ತೂಕವಿದ್ದು ದಾಖಲೆ ತೂಕ ಹೊಂದಿದೆ.

ಈ ಬಗ್ಗೆ ಬಿ.ಎಚ್.ಕೈಮರದ ಎಂ.ವಿ.ರಾಜೇಂದ್ರಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾನ್ಯವಾಗಿ ನಮ್ಮ ತೋಟದಲ್ಲಿ 550 ಗ್ರಾಂ ನಿಂದ 600 ಗ್ರಾಂ ತೂಕದ ತೆಂಗಿನಕಾಯಿ ಬರುತ್ತಿತ್ತು. ತಿಪಟೂರು, ಅರಸಿಕೆರೆ, ಚೆನ್ನರಾಯಪಟ್ಟಣ, ಚಿಕ್ಕನಾಯಕನ ಹಳ್ಳಿ ಭಾಗದಲ್ಲಿ ಒಂದು ತೆಂಗನಕಾಯಿ 650 ರಿಂದ 700 ಗ್ರಾಂ ತೂಕ ಬರಲಿದೆ. ಅಪರೂಪ ಎಂಬಂತೆ ಇದೇ ಮೊದಲ ಬಾರಿಗೆ ನಮ್ಮ ತೆಂಗಿನತೋಟದ ಒಂದು ಮರದಲ್ಲಿ ಬಿಟ್ಟ ಎಲ್ಲಾ ತೆಂಗಿನಕಾಯಿಗಳು ಉತ್ತಮ ತೂಕ ಬಂದಿದೆ. ಪ್ರತಿ ತೆಂಗಿನಕಾಯಿಯೂ 700 ರಿಂದ 800 ಗ್ರಾಮ್ ತೂಕ ಬಂದಿದೆ. ಆದರೆ, ಒಂದು ತೆಂಗಿನಕಾಯಿ ಮಾತ್ರ 1 ಕೆ.ಜಿ.100 ಗ್ರಾಂ ತೂಕ ಬಂದಿದೆ ಎಂದರು. ಪ್ರಸ್ತುತ 1 ಕೆ.ಜಿ.ತೆಂಗಿನಕಾಯಿ ಬೆಲೆಯೇ ₹80 ರು. ಇದೆ. ಆ ಪ್ರಕಾರ ಈ ತೆಂಗನಕಾಯಿ ಬೆಲೆ ₹80 ರು. ಮೀರಿದೆ ಎಂದರು.