ಇಬ್ಬರಿಂದ 10 ಬೈಕ್ ಜಪ್ತಿ

| Published : Mar 10 2025, 12:19 AM IST

ಸಾರಾಂಶ

ಆಸ್ಪತ್ರೆ, ಮನೆ ಸೇರಿದಂತೆ ವಿವಿಧೆಡೆ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಬಡಾವಣೆ ಠಾಣೆ ಪೊಲೀಸರು ಬಂಧಿಸಿ, ₹2.50 ಲಕ್ಷ ಮೌಲ್ಯದ ಹೀರೋ ಸ್ಪ್ಲೆಂಡರ್ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ದಾವಣಗೆರೆ: ಆಸ್ಪತ್ರೆ, ಮನೆ ಸೇರಿದಂತೆ ವಿವಿಧೆಡೆ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಬಡಾವಣೆ ಠಾಣೆ ಪೊಲೀಸರು ಬಂಧಿಸಿ, ₹2.50 ಲಕ್ಷ ಮೌಲ್ಯದ ಹೀರೋ ಸ್ಪ್ಲೆಂಡರ್ ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ವಿಜಯ ನಗರ ಜಿಲ್ಲೆ ಕೂಡ್ಲಿಗೆ ತಾಲೂಕಿನ ಸೂಲದಹಳ್ಳಿ ನಿವಾಸಿ, ಗಾರೆ ಕೆಲಸಗಾರ ಎಂ.ಗಂಗರಾಜು ಅಲಿಯಾಸ್ ಎಮ್ಮೆ ಗಂಗ (27) ಹಾಗೂ ಕೂಡ್ಲಿಗಿ ತಾಲೂಕಿನ ಕಾನಾ ಹೊಸಹಳ್ಳಿಯ ಗಾರೆ ಕೆಲಸಗಾರ ಕೆ.ಪಿ.ಓಮೇಶ ಆರೋಪಿಗಳು. ದಾವಣಗೆರೆ ರೈಲ್ವೆ ನಿಲ್ದಾಣದ ಬಳಿ ಮಾ.4ರಂದು ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಆರೋಪಿಗಳು ಸುತ್ತಾಡುತ್ತಿದ್ದರು. ಆಗ ಗಸ್ತಿನಲ್ಲಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಬೈಕ್ ಕಳವು ವಿಚಾರ ಬಾಯಿ ಬಿಟ್ಟಿದ್ದಾರೆ.

ಶಾಬನೂರು ಗ್ರಾಮದ ವಾಸಿ ಎಚ್.ಮಂಜುನಾಥ ಎಂಬುವರು ಜ.31ರಂದು ತಮ್ಮ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ ಕಳೆದ ಡಿ.10ರಂದು ರಾತ್ರಿ 10.30ರ ವೇಳೆ ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ಬಳಿ ನಿಲ್ಲಿಸಿದ್ದು, ಬೆಳಿಗ್ಗೆ ವಾಪಾಸ್ಸಾದಾಗ ಇರಲಿಲ್ಲ. ಬೈಕ್ ನಿಲ್ಲಿಸಿದ್ದ ಜಾಗದಲ್ಲಿ ಇರಲಿಲ್ಲ. ಈ ಬಗ್ಗೆ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿ, ತಮ್ಮ ಬೈಕ್ ಹುಡುಕಿ ಕೊಡುವಂತೆ ಮನವಿ ಮಾಡಿದ್ದರು.

ಬೈಕ್ ಕಳ್ಳರ ಪತ್ತೆಗಾಗಿ ಎಎಸ್ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿ ಶರಣ ಬಸವೇಶ್ವರ ಭೀಮರಾವ್ ಮಾರ್ಗದರ್ಶನದಲ್ಲಿ ಬಡಾವಣೆ ಠಾಣೆ ಎಸ್‌ಐ, ಸಿಬ್ಬಂದಿ ಗಸ್ತು ತಿರುಗುವಾಗ ಮಾ.5ರಂದು ಮಧ್ಯಾಹ್ನ ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಅನುಮಾನಾಸ್ಪದವಾಗಿ ಸುತ್ತುತ್ತಿದ್ದ ಆರೋಪಿಗಳನ್ನು ಹಿಡಿದು, ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳಾದ ಕೂಡ್ಲಿಗಿ ತಾಲೂಕಿನವರಾದ ಎಂ.ಗಂಗರಾಜು ಅಲಿಯಾಸ್ ಎಮ್ಮೆ ಗಂಗ ಹಾಗೂ ಕೆ.ಪಿ.ಓಮೇಶ ನೀಡಿದ ಮಾಹಿತಿ ಆದರಿಸಿ, 2.50 ಲಕ್ಷ ಮೌಲ್ಯದ 10 ಬೈಕ್‌ಗಳನ್ನು ಜಪ್ತು ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳು ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್ ಗಳನ್ನೇ ಕಳವು ಮಾಡಿದ್ದು, ವಿಜಯ ನಗರ ಜಿಲ್ಲೆ ಕೊಟ್ಟೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೇಸ್ ಸಹ ಇವೆ. ಬಡಾವಣೆ ಠಾಣೆ ಇನ್ಸಪೆಕ್ಟರ್ ಎಂ.ಆರ್.ಚೌಬೆ, ಪಿಎಸ್‌ಐಗಳಾದ ಬಿ.ಆರ್‌.ನಾಗರಾಜ, ಲತಾ ವಿ.ತಾಳೇಕರ, ಜಿ.ಎಲ್‌.ಅನ್ನಪೂರ್ಣಮ್ಮ, ಎಎಸ್‌ಐ ತಿಪ್ಪೇಸ್ವಾಮಿ, ಸಿಬ್ಬಂದಿಯಾದ ಧೃವ, ಡಿ.ಬಸರಾಜ,

ರಾಮಾಂಜನೇಯ ಕೊಂಡಿ, ಎಸ್ಪಿ ಕಚೇರಿ ಸಿಬ್ಬಂದಿಯಾದ ಶಿವಕುಮಾರ, ರಾಮಚಂದ್ರ ಬಿ.ಜಾಧವ್‌ ಕಾರ್ಯವನ್ನು ಎಸ್ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ. - - -

-9ಕೆಡಿವಿಜಿ5:

ದಾವಣಗೆರೆ ಬಡಾವಣೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡ ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿ, ₹2.5 ಲಕ್ಷ ಮೌಲ್ಯದ 10 ಬೈಕ್ ಜಪ್ತಿ ಮಾಡಿದರು.