ಕಾಡಾನೆ ದಾಳಿಗೆ ನೆಲಕ್ಕುರುಳಿದ ೧೦ ತೆಂಗಿನ ಮರ

| Published : Feb 23 2025, 12:34 AM IST

ಸಾರಾಂಶ

ತಾಲೂಕಿನ ಆಲತ್ತೂರು ಗ್ರಾಮದ ರೈತರ ತೆಂಗಿನ ತೋಟಕ್ಕೆ ಕಾಡಾನೆಯೊಂದು ದಾಳಿ ಇಟ್ಟು, ೧೦ ತೆಂಗಿನ ಮರ ಹಾಗೂ ಕಲ್ಲು ಕಂಬಗಳನ್ನು ಮುರಿದು ನಾಶ ಪಡಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಗ್ರಾಮದ ತಿಮ್ಮೇಗೌಡ ಪತ್ನಿ ಸಣ್ಣಮ್ಮಗೆ ಸೇರಿದ ತೆಂಗಿನ ತೋಟಕ್ಕೆ ಕಾಡಾನೆ ದಾಳಿ ಇಟ್ಟು, ಫಸಲಿಗೆ ಬಂದ ತೆಂಗಿನ ಮರಗಳನ್ನು ಮುರಿದು ಹಾಕಿವೆ. ಜೊತೆಗೆ ಜಮೀನಿಗೆ ಹಾಕಿದ್ದ ನಾಲ್ಕೈ ದು ಕಲ್ಲಿನ ಕಂಬಗಳನ್ನು ತುಂಡು ಮಾಡಿವೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಆಲತ್ತೂರು ಗ್ರಾಮದ ರೈತರ ತೆಂಗಿನ ತೋಟಕ್ಕೆ ಕಾಡಾನೆಯೊಂದು ದಾಳಿ ಇಟ್ಟು, ೧೦ ತೆಂಗಿನ ಮರ ಹಾಗೂ ಕಲ್ಲು ಕಂಬಗಳನ್ನು ಮುರಿದು ನಾಶ ಪಡಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಗ್ರಾಮದ ತಿಮ್ಮೇಗೌಡ ಪತ್ನಿ ಸಣ್ಣಮ್ಮಗೆ ಸೇರಿದ ತೆಂಗಿನ ತೋಟಕ್ಕೆ ಕಾಡಾನೆ ದಾಳಿ ಇಟ್ಟು, ಫಸಲಿಗೆ ಬಂದ ತೆಂಗಿನ ಮರಗಳನ್ನು ಮುರಿದು ಹಾಕಿವೆ. ಜೊತೆಗೆ ಜಮೀನಿಗೆ ಹಾಕಿದ್ದ ನಾಲ್ಕೈ ದು ಕಲ್ಲಿನ ಕಂಬಗಳನ್ನು ತುಂಡು ಮಾಡಿವೆ.

ಸಣ್ಣಮ್ಮರ ಪುತ್ರ ಟಿ. ಶಾಂತೇಶ್‌ ಮಾತನಾಡಿ, ಕಾಡಾನೆ ದಾಳಿಗೆ ಫಲಕ್ಕೆ ಬಂದಿದ್ದ ತೆಂಗಿನ ಸಸಿ ನಾಶ ಮಾಡಿವೆ, ಅಲ್ಲದೆ ಕಲ್ಲು ಕಂಬ ಮುರಿದು ಹಾಕಿವೆ ಇದು ರೈತರಿಗೆ ತುಂಬಲಾರದ ನಷ್ಟ ಎಂದಿದ್ದಾರೆ.

ಅರಣ್ಯ ಇಲಾಖೆ ಭಿಕ್ಷೆಯ ರೀತಿಯಲ್ಲಿ ಕೊಡುವ ಪರಿಹಾರ, ಫಲ ನೀಡುವ ತೆಂಗಿನ ಮರ ಕೊಡಲು ಸಾಧ್ಯವಿಲ್ಲ. ಕಲ್ಲು ಕಂಬ ತಂದು ನೆಡಬಹುದು ಆದರೆ ತೆಂಗಿನ ಮರ ಬೆಳೆಸಲು ವರ್ಷಾನುಗಟ್ಟಲೇ ಬೇಕು ಎಂದಿದ್ದಾರೆ.

ಅರಣ್ಯ ಇಲಾಖೆ ಕಾಡಾನೆಗಳ ಹಾವಳಿ ತಡೆಗಟ್ಟಲು ವಿಫಲವಾಗಿದೆ. ಕಾಡಾನೆ ದಾಳಿ ಮಾಡಿವೆ ಎಂದರೆ ಅರಣ್ಯ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿ ಹೋಗುತ್ತಾರೆಯೇ ಹೊರತು, ಕಾಡಾನೆ ಹಾವಳಿ ತಡೆಗಟ್ಟುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಅರಣ್ಯ ಇಲಾಖೆ ನೀಡುವ ಪರಿಹಾರ ಬೇಡವೇ ಬೇಡ, ಕಾಡಾನೆಗಳ ಹಾವಳಿ ತಪ್ಪಿಸದರೆ ಅರಣ್ಯ ಇಲಾಖೆಗೆ ನೂರೊಂದು ನಮಸ್ಕಾರ ಹಾಕುತ್ತೇವೆ ಎಂದು ನೊಂದ ರೈತರು ಹೇಳಿದ್ದಾರೆ.