೩ ವರ್ಷಗಳಿಂದ ಸ್ಥಗಿತಗೊಂಡಿದ್ದ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿಗೆ ಸರಕಾರದಿಂದ ₹10 ಕೋಟಿ ಅನುದಾನ ಮಂಜೂರಾಗಿದ್ದು, ಹಣ ಬಿಡುಗಡೆಗೆ ಶ್ರಮಿಸಿದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರನ್ನು ರಬಕವಿಯಲ್ಲಿ ಪಕ್ಷಭೇದ ಮರೆತು ಎಲ್ಲರೂ ಸೇರಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

೩ ವರ್ಷಗಳಿಂದ ಸ್ಥಗಿತಗೊಂಡಿದ್ದ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿಗೆ ಸರಕಾರದಿಂದ ₹10 ಕೋಟಿ ಅನುದಾನ ಮಂಜೂರಾಗಿದ್ದು, ಹಣ ಬಿಡುಗಡೆಗೆ ಶ್ರಮಿಸಿದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರರನ್ನು ರಬಕವಿಯಲ್ಲಿ ಪಕ್ಷಭೇದ ಮರೆತು ಎಲ್ಲರೂ ಸೇರಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಕೊಣ್ಣೂರ, ಬರುವ ವರ್ಷದೊಳದಾಗಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದ್ದು, ಗುತ್ತಿಗೆದಾರರಿಗೆ ಸಮರ್ಪಕವಾಗಿ ವೇತನ ದೊರಕದಿರುವುದು ಗಮನಕ್ಕೆ ಬಂದಿದೆ. ಎಲ್ಲ ತೊಂದರೆ ನಿವಾರಿಸಿ ಸುಗಮವಾಗಿ ಸೇತುವೆ ಕಾಮಗಾರಿ ಮುಕ್ತಾಯವಾಗುವವರೆಗೂ ನಿಮ್ಮೊಂದಿಗಿರುವುದಾಗಿ ಭರವಸೆ ನೀಡಿದರು.

ಈ ವೇಳೆ ಮಹಾದೇವ ದೂಪದಾಳ, ಸಂಜಯ ಜೋತಾವರ, ಬಸವರಾಜ ತೆಗ್ಗಿ, ನೀಲಕಂಠ ಮುತ್ತೂರ, ಚಂದ್ರು ಬಕನೆತ್ತಿ, ಸದಾಶಿವ ಖವಾಸಿ, ಶಿವಾನಂದ ಕಡಕೋಳ, ಮೊಹ್ಮದ್ ಝಾರೆ, ಆನಂದ ಜುಗಳಿ, ರವಿ ಗಡಾದ, ಇಂದ್ರಜೀತ ಲಾಳಕೆ, ಸಂಜಯ ತೇಲಿ, ಆನಂದ ಜುಗಳಿ ಸೇರಿದಂತೆ ಅನೇಕರಿದ್ದರು. ಈ ಕಾರ್ಯಕ್ರಮದಲ್ಲಿ ಕೆಲವು ಬಿಜೆಪಿಯ ಕೆಲ ಮುಖಂಡರು, ನಗರ ಸೇವಕರಿರುವುದು ಅಚ್ಚರಿಗೆ ಕಾರಣವಾಯಿತು.