ಅಮರ ಪ್ರೇಮಿ ಅರುಣ್‌, ಏಳುಮಲೆ, ನಡುಬೆಟ್ಟು ಅಪ್ಪಣ್ಣ ಸೇರಿದಂತೆ ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವ 2026ಕ್ಕೆ10 ಚಲನಚಿತ್ರಗಳ ಅಧಿಕೃತ ಆಯ್ಕೆಯನ್ನು ಘೋಷಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಅಮರ ಪ್ರೇಮಿ ಅರುಣ್‌, ಏಳುಮಲೆ, ನಡುಬೆಟ್ಟು ಅಪ್ಪಣ್ಣ ಸೇರಿದಂತೆ ಅಮೆರಿಕದಲ್ಲಿ ನಡೆಯಲಿರುವ ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವ 2026ಕ್ಕೆ10 ಚಲನಚಿತ್ರಗಳ ಅಧಿಕೃತ ಆಯ್ಕೆಯನ್ನು ಘೋಷಿಸಲಾಗಿದೆ.

ಅಲ್ಲದೆ, ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಮೂರು ಅತ್ಯುನ್ನತ ಚಲನಚಿತ್ರಗಳಿಗೆ ನಗದು ಬಹುಮಾನ ಮತ್ತು ಕನ್ನಡ ಚಿತ್ರರಂಗದ ದಿಗ್ಗಜರ ನೆನಪಿಗಾಗಿ ಅವರ ಹೆಸರಲ್ಲಿ ಏಳು ವಿಶೇಷ ಪ್ರಶಸ್ತಿಗಳನ್ನು ಪರಿಚಯಿಸಲು ಚಲನಚಿತ್ರೋತ್ಸವ ಸಮಿತಿ ನಿರ್ಧರಿಸಿದೆ.

ಅಕ್ಕ ವಿಶ್ವ ಕನ್ನಡ ಸಮ್ಮೇಳನದ ರಜತ ಮಹೋತ್ಸವದ ಅಂಗವಾಗಿ ಈ ಚಲನಚಿತ್ರೋತ್ಸವವನ್ನು ಆಯೋಜಿಸಲಾಗುತ್ತಿದೆ. ಆಯ್ಕೆಯಾದ ಎಲ್ಲಾ 10 ಚಿತ್ರಗಳನ್ನು ಸೆ.4ರಿಂದ 6ರವರೆಗೆ ಫಿಲಿಡೆಲ್ಫಿಯಾದಲ್ಲಿ ಪ್ರದರ್ಶಿಸಲಾಗುವುದು. ವಿಜೇತರನ್ನು ಸೆ.27ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಘೋಷಿಸಲಾಗುವುದು. ಅಧಿಕೃತವಾಗಿ ಆಯ್ಕೆಯಾದ ಎಲ್ಲಾ ಚಲನಚಿತ್ರಗಳಿಗೆ ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ಅತ್ಯುತ್ತಮ ಚಿತ್ರಗಳಿಗೆ ನಗದು ಬಹುಮಾನ:

ಇನ್ನು, ಆಯ್ಕೆಯಾದ ಅತ್ಯುತ್ತಮ ಮೂರು ಚಲನಚಿತ್ರಗಳಿಗೆ ಮಾತ್ರ ನಗದು ಬಹುಮಾನ ನೀಡಲಾಗುವುದು. ಉಳಿದ ಪ್ರಶಸ್ತಿ ವಿಭಾಗಗಳ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ತಿಳಿಸಲಾಗಿದೆ. ಅಕ್ಕ ಸಿನಿಗನ್ನಡ ಚಲನಚಿತ್ರೋತ್ಸವದ ಮೂಲಕ ಕನ್ನಡ ಚಲನಚಿತ್ರಗಳಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನದ ಅವಕಾಶ ದೊರೆಯಲಿದ್ದು, ಆಯ್ಕೆಯಾದ ಎಲ್ಲಾ ಚಿತ್ರತಂಡಗಳಿಗೆ ಶುಭಾಶಯ ಕೋರಲಾಗಿದೆ.

ಬಾಕ್ಸ್

ಆಯ್ಕೆಯಾದ 10 ಚಲನಚಿತ್ರಗಳು

* ಅಮರ ಪ್ರೇಮಿ ಅರುಣ್

* ಏಳುಮಲೆ* ನಡುಬೆಟ್ಟು ಅಪ್ಪಣ* ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು* ಪಿಡಾಯಿ* ಬಿಳಿ ಚುಕ್ಕಿ ಹಳ್ಳಿ ಹಕ್ಕಿ* ಮಹಿಮಾ* ಶ್ರೀ ಜಗನ್ನಾಥನ ದಾಸರು - ಭಾಗ 2* ಕ್ಷಮೆ ಇರಲಿ ತಂದೆ* 4 ಬೈ 4ಬಾಕ್ಸ್ ಕನ್ನಡ ಚಿತ್ರರಂಗದ ದಿಗ್ಗಜರ ಹೆಸರಿನಲ್ಲಿ ಏಳು ಪ್ರಶಸ್ತಿಗಳು* ಅತ್ಯುತ್ತಮ ನಟ – ಡಾ. ವಿಷ್ಣುವರ್ಧನ್ ಪ್ರಶಸ್ತಿ

* ಅತ್ಯುತ್ತಮ ನಟಿ – ಬಿ. ಸರೋಜಾದೇವಿ ಪ್ರಶಸ್ತಿ* ಅತ್ಯುತ್ತಮ ಖಳನಟ – ತೂಗುದೀಪ ಶ್ರೀನಿವಾಸ್ ಪ್ರಶಸ್ತಿ* ಅತ್ಯುತ್ತಮ ನಿರ್ದೇಶಕ – ಶಂಕರ ನಾಗ್ ಪ್ರಶಸ್ತಿ* ಅತ್ಯುತ್ತಮ ಸಂಗೀತ ಸಂಯೋಜಕ – ರಾಜನ್–ನಾಗೇಂದ್ರ ಪ್ರಶಸ್ತಿ* ಅತ್ಯುತ್ತಮ ಗಾಯಕ – ಬಿ.ಪಿ. ಶ್ರೀನಿವಾಸ್ ಪ್ರಶಸ್ತಿ* ಅತ್ಯುತ್ತಮ ಗಾಯಕಿ – ಎಸ್. ಜಾನಕಿ ಪ್ರಶಸ್ತಿ