ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ವಿವಿಧ ಕಡೆ ಪಾದಚಾರಿ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಗುರುವಾರ ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 5.10 ಕಿ.ಮೀ, ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 2.20 ಕಿಮೀ, ಉತ್ತರ ಪಾಲಿಕೆಯಲ್ಲಿ 1.20 ಕಿ.ಮೀ ಸೇರಿದಂತೆ 8.40 ಕಿ.ಮೀ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಲಾಗಿದೆ.ದಕ್ಷಿಣ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ವಿಭಾಗದ ಬೇಗೂರು ಮುಖ್ಯರಸ್ತೆಯಲ್ಲಿ (ಬೊಮ್ಮನಹಳ್ಳಿ ಸಿಗ್ನಲ್‌ನಿಂದ ಮೈಕೋ ಲೇಔಟ್ 16ನೇ ಮೇನ್ ರಸ್ತೆಯವರೆಗೆ) 2.60 ಕಿ.ಮೀ. ಪಾದಚಾರಿ ಮಾರ್ಗವನ್ನು ತೆರವುಗೊಳಿಸಿರುವುದಲ್ಲದೆ 2.50 ಕಿ.ಮೀ.ರಷ್ಟು ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಲಾಗಿದೆ.
ಪಶ್ಚಿಮ ಪಾಲಿಕೆ: ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದ್ದು, 2.2 ಕಿ.ಮೀ.ನಷ್ಟು (ಬಸವನಗುಡಿ ವಿಭಾಗ) ಒತ್ತುವರಿ ತೆರವು ನಡೆಸಲಾಗಿದೆ ಬಸವನಗುಡಿ ವಿಭಾಗದಲ್ಲಿ ಅರಳುಮಲ್ಲಿಗೆ ಪಾರ್ಥಸಾರಥಿ ರಸ್ತೆಯಲ್ಲಿ ಸೀತಾ ವೃತ್ತದಿಂದ ನೆಹರೂ ರಸ್ತೆಯವರೆಗೆ 1 ಕಿ.ಮೀ. ಹಾಗೂ ಶ್ರೀನಗರ ಬಸ್ ನಿಲ್ದಾಣ ರಸ್ತೆಯಲ್ಲಿ ಶ್ರೀನಗರ ಬಸ್ ನಿಲ್ದಾಣದಿಂದ ನೆಹರೂ ರಸ್ತೆಯವರೆಗೆ 1.2 ಕಿ.ಮೀ, ಗೋವಿಂದರಾಜನಗರ ವಿಭಾಗದ ವಿಜಯನಗರ ಫುಡ್ ಸ್ಟ್ರೀಟ್ ನಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದೆ.ಉತ್ತರ ಪಾಲಿಕೆ ಸರ್ವಜ್ಞನಗರ ವಿಭಾಗದಲ್ಲಿ ಎಚ್‌ಆರ್‌ಬಿಆರ್ 2ನೇ ಬ್ಲಾಕ್, 5ನೇ ಮುಖ್ಯ ರಸ್ತೆ (ಕುಲಪ್ಪ ಸರ್ಕಲ್‌ನಿಂದ ರಾಜ್‌ಕುಮಾರ್ ಪಾರ್ಕ್‌ವರೆಗೆ)1.10 ಕಿ.ಮೀ ಪಾದಚಾರಿ ರಸ್ತೆ ಒತ್ತುವರಿ ತೆರವು ಮಾಡಲಾಗಿದೆ.
