ಆರ್ಯ ಈಡಿಗ ವಸತಿ ನಿಲಯಕ್ಕೆ 10 ಲಕ್ಷ ಅನುದಾನ

| Published : Aug 21 2024, 12:38 AM IST

ಸಾರಾಂಶ

ಆರ್ಯ ಈಡಿಗ ವಸತಿ ನಿಲಯಕ್ಕೆ 10 ಲಕ್ಷ ಅನುದಾನ

ಕನ್ನಡಪ್ರಭವಾರ್ತೆ ಪಾವಗಡ

ಆರ್ಯ ಈಡಿಗ ಸಮುದಾಯದ ಬಗ್ಗೆ ಅಪಾರ ಗೌರವ ಹೊಂದಿದ್ದು ಸಮಾಜದ ಹಾಸ್ಟೆಲ್ ಅಭಿವೃದ್ಧಿಗೆ ಇನ್ನೂ 10 ಲಕ್ಷ ರು. ಹಣ ಬಿಡುಗಡೆಗೊಳಿಸುವುದಾಗಿ ಶಾಸಕ ಎಚ್‌.ವಿ.ವೆಂಕಟೇಶ್‌ ಭರವಸೆ ನೀಡಿದರು.

ತಾಲೂಕು ಆರ್ಯ ಈಡಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ನಗರದ ಈಡಿಗ ಸಮುದಾಯ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ, ಶ್ರೀ ನಾರಾಯಣ ಗುರುಗಳ 170ನೇ ಜಯಂತ್ಯುತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಈಡಿಗ ಸಮಾಜ ಶ್ರಮಜೀವಿಗಳು ಕಷ್ಟಪಟ್ಟು ಕೆಲಸ ಹಾಗೂ ವ್ಯವಸಾಯ ಹಾಗೂ ವ್ಯಾಪಾರ ವಹಿವಾಟುಗಳ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ. ಇಲ್ಲಿನ ಈಡಿಗರ ಹಾಸ್ಟೆಲ್ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಯಡಿ ಶೀಘ್ರ 10ಲಕ್ಷ ರು. ಹಣ ಬಿಡುಗಡೆ ಕಲ್ಪಿಸಿಕೊಡುವ ಭರವಸೆ ನೀಡಿದರು.

ಇನ್ನೂ ಶ್ರೀ ನಾರಾಯಣ ಗುರೂಜಿ ನೀಡಿದ ಸಂದೇಶ ಹಾಗೂ ತತ್ವ ಸಿದ್ಧಾಂತದ ಬಗ್ಗೆ ವಿವರಿಸಿ, ಅವರ ಅದರ್ಶ ಪಾಲಿಸುವ ಮೂಲಕ ಪರೋಪಕಾರ,ಭಕ್ತಿ ಮಾರ್ಗ ಹಾಗೂ ಕಷ್ಟದಲ್ಲಿದ್ದವರಿಗೆ ನೆರವಿನ ಕುರಿತು ವಿವರಿಸಿದರು.

ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಈಡಿಗ ಸಮುದಾಯ ಶ್ರಮಜೀವನದ ಒಂದು ಮಾದರಿ ಸಮಾಜ. ಇತರೆ ಎಲ್ಲಾ ವರ್ಗದವರಂತೆ ತಾವು ಸಹ ಸ್ವಾಭಿಮಾನದ ಬದುಕು ಕಟ್ಟಿಕೊಂಡವರು. ತಮ್ಮ ಮಕ್ಕಳಿಗೆ ಬರೀ ಆಸ್ತಿಯನ್ನು ಮಾಡದೇ ವಿದ್ಯಾವಂತರನ್ನಾಗಿ ರೂಪಿಸಬೇಕು. ಆಸ್ತಿಗಿಂತ ವಿದ್ಯೆ ಮುಖ್ಯ. ವಿದ್ಯೆ ಯಾರಿಂದಲೂ ಕಸಿಯಲು ಸಾಧ್ಯವಿಲ್ಲ ಎಂದ ಅವರು, ಆರ್ಯ ಈಡಿಗ ಸಮಾಜದ ಬಗ್ಗೆ ಅತ್ಯಂತ ಗೌರವವಿದ್ದು ಅಭಿವೃದ್ದಿಗೆ ಸದಾ ಸಹಕರವಿದೆ ಎಂದರು.

ಶ್ರೀ ನಾರಾಯಣ ಗುರುಗಳ ಆದರ್ಶ ಹಾಗೂ ಎಲ್ಲಾ ವರ್ಗದ ಸಮಸ್ತ ಸಮಾಜಕ್ಕೆ ನೀಡಿದ ಸಂದೇಶ ಸ್ಮರಿಸಿದರು.

ತಹಸೀಲ್ದಾರ್‌ ವರದರಾಜ್‌, ತಾಲೂಕು ಬ್ಲಾಕ್ ಕಾಂಗ್ರೆಸ್ ನಗರಾಧ್ಯಕ್ಷ ಸುದೇಶ್ ಬಾಬು, ಜಿಲ್ಲಾ ಕಾರ್ಯದರ್ಶಿ ಶಿವಣ್ಣ, ಕೆಪಿಎಸ್ಸಿ ಮಾಜಿ ಸದಸ್ಯ ಲಕ್ಷ್ಮಿನರಸಿಂಹಯ್ಯ, ಸಂಘದ ಅಧ್ಯಕ್ಷ ವೀರಾಂಜನೇಯ, ಮಾರುತೀಶ್‌, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆಂಜನೇಯಲು, ತಿಮ್ಮಮ್ಮನಹಳ್ಳಿ ರವಿಕುಮಾರ್, ಡಿವೈಎಸ್ಪಿ ರಾಮಕೃಷ್ಣಪ್ಪ ,ಗುತ್ತಿಗೆದಾರರಾದ ರಾಮಕೃಷ್ಣಪ್ಪ, ಪಾವಗಡದ ಷಾಬಾಬು, ಗಂಗಪ್ಪ, ಹನುಮೇಶ್, ಅಂಜಿ ಗೌಡ, ಸೋಮು, ಮಾರುತಿ, ಮಹೇಶ, ರಾಘವೇಂದ್ರ, ಪಾಂಡು ಮುಂತಾದವರು ಹಾಜರಿದ್ದರು.