ಶಿರಾ: ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ೨೦೨೬ಕ್ಕೆ ಸಂಬಂಧಿಸಿದಂತೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಶೇ. ೧೦೦ ರಷ್ಟು ಗಣತಿ ನಮೂನೆಗಳನ್ನು ವಿತರಿಸಿದ್ದು, ಶೇ. ೯೦.೧೯ ರಷ್ಟು ಅಂದರೆ ೨೦೮೧೫೧ ಗಣತಿ ನಮೂನೆಗಳನ್ನು ಬಿ.ಎಲ್.ಓ ಆಪ್ ನಲ್ಲಿ ಗಣಕೀಕರಣಗೊಳಿಸಲಾಗಿದೆ. ಬಾಕಿ ಇರುವ ಗಣತಿ ನಮೂನೆಗಳನ್ನು ಗಣಕೀಕರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಕೆ.ರುದ್ರೇಶ್ ಅವರು ಮಾಹಿತಿ ನೀಡಿದರು.

ಶಿರಾ ನಗರಸಭೆ ಕಛೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-೨೦೨೬ (ಎಸ್.ಐ.ಆರ್) ಸಂಬಂಧದಲ್ಲಿ ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ಎಸ್.ಐ.ಆರ್. ಪ್ರಕ್ರಿಯೆಯ ಬಗ್ಗೆ ರಾಜಕೀಯ ಪಕ್ಷದ ಪ್ರತಿನಿಧಿಗಳಗೆ ಸಭೆ ನಡೆಸಿ ಮಾಹಿತಿ ನೀಡಿ. ಇಲ್ಲಿಯವರೆಗೆ ೧೩೪೯೮ ಸಂಗ್ರಹಿಸಲಾಗದ ಗಣತಿ ನಮೂನೆಗಳನ್ನು ಬಿ.ಎಲ್.ಒ ಆಪ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಗೈರು ಮತದಾರರು, ವಿಳಾಸ ಬದಲಾವಣೆ, ಮರಣ ಹೊಂದಿರುವ, ಡೂಪ್ಲೀಕೇಟ್ ಪಟ್ಟಿಯನ್ನು ಬಿ.ಎಲ್ಒ ರವರಿಂದ ಪಡೆದು ಪರಿಶೀಲಿಸಿ ಮತದಾರರು ಲಭ್ಯವಿದ್ದಲ್ಲಿ ಬಿ.ಎಲ್.ಒ ರವರಿಗೆ ಮಾಹಿತಿ ನೀಡುವುದು. ೧೨೦೦ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಿ ಹೆಚ್ಚುವರಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಅದರ ಬಗ್ಗೆ ಆ. ೮ ರಂದು ಸಭೆ ಕರೆದು ಮಾಹಿತಿ ನೀಡಲಾಗುವುದು ಎಂದರು. ಸಭೆಯಲ್ಲಿ ಚುನಾವಣಾ ವಿಷಯ ನಿರ್ವಾಹಕರಾದ ಬಷೀರ್.ಎಂ, ವಿನೋದ್ ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಜರಿದ್ದರು.