ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್‌ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಜೂ.30 ರಿಂದಲೇ ಎನುಮೆರೇಷನ್ ಫಾರ್ಮ್‌ಗಳೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
- ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾಹಿತಿ । ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯ ಬಿರುಸು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್‌ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಜೂ.30 ರಿಂದಲೇ ಎನುಮೆರೇಷನ್ ಫಾರ್ಮ್‌ಗಳೊಂದಿಗೆ ಮತದಾರರ ಮನೆ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.ಈ ಮಾಹಿತಿ ಸಂಗ್ರಹ ಹಾಗೂ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆಯು ಜೂ.30 ರಿಂದ ಜುಲೈ 29 ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಜೂನ್ 16 ರವರೆಗೆ ಒಟ್ಟು 14,99,282 ಮತದಾರರಿದ್ದು, ಬಿಎಲ್ಒಗಳಿಗೆ ಅಗತ್ಯವಿರುವ ಎಲ್ಲ ಫಾರ್ಮ್‌ಗಳನ್ನು ಮುದ್ರಿಸಿ ವಿತರಿಸಲಾಗಿದೆ ಎಂದಿದ್ದಾರೆ.
ಗಣಕೀಕರಣ ಪ್ರಗತಿ:ಜಿಲ್ಲೆಯ ಒಟ್ಟು 14,99,282 ಮತದಾರರ ಪೈಕಿ ಇಂದಿನವರೆಗೆ ಬಿಎಲ್ಒಗಳು ಒಟ್ಟು 14,99,282 ಎನುಮೆರೇಷನ್ ನಮೂನೆಗಳನ್ನು ವಿತರಿಸಿದ್ದು, ಈ ಪೈಕಿ 6,62,497 ನಮೂನೆಗಳನ್ನು ಗಣಕೀಕರಿಸಲಾಗಿದೆ.
ಕ್ಷೇತ್ರವಾರು ವಿವರ:103-ಜಗಳೂರು: ಒಟ್ಟು 2,00,836 ಮತದಾರರಿದ್ದು, ಬಿಎಲ್ಒಗಳಿಂದ ಎಲ್ಲಾ 2,00,836 ನಮೂನೆಗಳನ್ನು ವಿತರಿಸಲಾಗಿದ್ದು, 88,389 ನಮೂನೆಗಳನ್ನು ಗಣಕೀಕರಿಸಲಾಗಿದೆ. 105-ಹರಿಹರ: ಒಟ್ಟು 2,11,023 ಮತದಾರರಿದ್ದು, ಎಲ್ಲಾ 2,11,023 ನಮೂನೆಗಳನ್ನು ವಿತರಿಸಲಾಗಿದ್ದು, 1,21,595 ನಮೂನೆಗಳನ್ನು ಗಣಕೀಕರಿಸಲಾಗಿದೆ. 106-ದಾವಣಗೆರೆ ಉತ್ತರ: ಒಟ್ಟು 2,58,718 ಮತದಾರರಿದ್ದು, 2,58,718 ನಮೂನೆಗಳನ್ನು ವಿತರಿಸಲಾಗಿದ್ದು, 52,954 ನಮೂನೆಗಳನ್ನು ಗಣಕೀಕರಿಸಲಾಗಿದೆ. 107-ದಾವಣಗೆರೆ ದಕ್ಷಿಣ: ಒಟ್ಟು 2,27,996 ಮತದಾರರಿದ್ದು, 2,27,996 ನಮೂನೆಗಳನ್ನು ವಿತರಿಸಲಾಗಿದ್ದು, 54,815 ನಮೂನೆಗಳನ್ನು ಗಣಕೀಕರಿಸಲಾಗಿದೆ. 108-ಮಾಯಕೊಂಡ: ಒಟ್ಟು 1,97,048 ಮತದಾರರಿದ್ದು, ಎಲ್ಲ 1,97,048 ನಮೂನೆಗಳನ್ನು ವಿತರಿಸಲಾಗಿದ್ದು, 1,37,307 ನಮೂನೆಗಳನ್ನು ಗಣಕೀಕರಿಸಲಾಗಿದೆ. 109-ಚನ್ನಗಿರಿ: ಒಟ್ಟು 2,03,628 ಮತದಾರರಿದ್ದು, ಎಲ್ಲ 2,03,628 ನಮೂನೆಗಳನ್ನು ವಿತರಿಸಲಾಗಿದ್ದು, 1,13,236 ನಮೂನೆಗಳನ್ನು ಗಣಕೀಕರಿಸಲಾಗಿದೆ. 110-ಹೊನ್ನಾಳಿ: ಒಟ್ಟು 2,00,033 ಮತದಾರರಿದ್ದು, 2,00,033 ನಮೂನೆಗಳನ್ನು ವಿತರಿಸಲಾಗಿದ್ದು, 94201 ನಮೂನೆಗಳ ಗಣಕೀಕರಿಸಲಾಗಿದೆ.
ಸ್ಥಳಾಂತರ, ಮರಣ ಹಾಗೂ ದ್ವಿಪತಿ ಮತದಾರರ ಗುರುತಿಸುವಿಕೆ ಪ್ರಗತಿ:ಮನೆ ಮನೆಗಳಿಗೆ ಭೇಟಿ ಸಂದರ್ಭದಲ್ಲಿ ಜುಲೈ 12ರವರೆಗೆ ಜಿಲ್ಲೆಯಾದ್ಯಂತ ಒಟ್ಟು 10,422 ಮತದಾರರನ್ನು ಸ್ಥಳಾಂತರ, ವಲಸೆ, ಮರಣ, ದ್ವಿಪತಿ ಸೇರಿದಂತೆ ಇತರೆ ಕಾರಣಗಳಿಗಾಗಿ ಗುರುತಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 146 ನಮೂನೆಗಳು ಸಂಗ್ರಹವಾಗದೆ ಉಳಿದಿದ್ದು, 3,999 ಶಾಶ್ವತ ವಲಸೆ, 4,542 ಮರಣ ಪ್ರಕರಣ, 1678 ದ್ವಿಪ್ರತಿ ನಮೂನೆಗಳು ಹಾಗೂ 57 ಇತರೆ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಕ್ಷೇತ್ರವಾರು ವಿವರ:ಜಗಳೂರು ಕ್ಷೇತ್ರದಲ್ಲಿ ಒಟ್ಟು 993 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 12 ಸಂಗ್ರಹವಾಗದ, 471 ಶಾಶ್ವತ ವಲಸೆ, 321 ಮರಣ, 182 ದ್ವಿಪ್ರತಿ ಹಾಗೂ 7 ಇತರೆ ಪ್ರಕರಣಗಳಿವೆ. ಹರಿಹರ ಕ್ಷೇತ್ರದಲ್ಲಿ ಒಟ್ಟು 1542 ಪ್ರಕರಣಗಳು ಪತ್ತೆಯಾಗಿದ್ದು, 12 ಸಂಗ್ರಹವಾಗದ, 409 ಶಾಶ್ವತ ವಲಸೆ, 824 ಮರಣ, 294 ದ್ವಿಪ್ರತಿ ಮತ್ತು 3 ಇತರೆ ಪ್ರಕರಣಗಳಿವೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಒಟ್ಟು 1445 ಪ್ರಕರಣಗಳಿದ್ದು, 21 ಸಂಗ್ರಹವಾಗದ, 493 ಶಾಶ್ವತ ವಲಸೆ, 748 ಮರಣ, 174 ದ್ವಿಪ್ರತಿ ಹಾಗೂ 9 ಇತರೆ ಪ್ರಕರಣಗಳಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 1059 ಪ್ರಕರಣಗಳಿದ್ದು, 35 ಸಂಗ್ರಹವಾಗದ, 305 ಶಾಶ್ವತ ವಲಸೆ, 443 ಮರಣ, 268 ದ್ವಿಪ್ರತಿ ಹಾಗೂ 8 ಇತರೆ ಪ್ರಕರಣಗಳಿವೆ.
ಮಾಯಕೊಂಡ ಕ್ಷೇತ್ರದಲ್ಲಿ ಒಟ್ಟು 2002 ಪ್ರಕರಣಗಳಿದ್ದು, 25 ಸಂಗ್ರಹವಾಗದ, 775 ಶಾಶ್ವತ ವಲಸೆ, 901 ಮರಣ, 291 ದ್ವಿಪ್ರತಿ ಹಾಗೂ 10 ಇತರೆ ಪ್ರಕರಣಗಳಿವೆ. ಚನ್ನಗಿರಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ 1769 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 26 ಸಂಗ್ರಹವಾಗದ, 834 ಶಾಶ್ವತ ವಲಸೆ, 591 ಮರಣ, 301 ದ್ವಿಪ್ರತಿ ಹಾಗೂ 17 ಇತರೆ ಪ್ರಕರಣಗಳು ಸೇರಿವೆ. ಹೊನ್ನಾಳಿ ಕ್ಷೇತ್ರದಲ್ಲಿ ಒಟ್ಟು 1612 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 15 ಸಂಗ್ರಹವಾಗದ, 712 ಶಾಶ್ವತ ವಲಸೆ, 714 ಮರಣ, 168 ದ್ವಿಪ್ರತಿ ಹಾಗೂ 03 ಇತರೆ ಪ್ರಕರಣಗಳು ಒಳಗೊಂಡಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.- - -
-12ಕೆಡಿವಿಜಿ36: ಜಿ.ಎಂ.ಗಂಗಾಧರ ಸ್ವಾಮಿ