ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ: ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಮಹಾತ್ಮಾ ಗಾಂಧೀಜಿ ಅವರು ಬಂದು 100 ವರ್ಷ ಸಂದ ಹಿನ್ನಲೆಯಲ್ಲಿ ಕಾಂಗ್ರೆಸ್‌ನಿಂದ ಆ.2ರಂದು ಬೆಳಿಗ್ಗೆ 8.30 ಗಾಂಧಿ ವೃತ್ತದಿಂದ ಕಾಂಗೆಸ್ ಕಚೇರಿವರೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಗಾಂಧೀಜಿ ವೃತ್ತಕ್ಕೆ ಆಗಮಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ್ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ:
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಮಹಾತ್ಮಾ ಗಾಂಧೀಜಿ ಅವರು ಬಂದು 100 ವರ್ಷ ಸಂದ ಹಿನ್ನಲೆಯಲ್ಲಿ ಕಾಂಗ್ರೆಸ್‌ನಿಂದ ಆ.2ರಂದು ಬೆಳಿಗ್ಗೆ 8.30 ಗಾಂಧಿ ವೃತ್ತದಿಂದ ಕಾಂಗೆಸ್ ಕಚೇರಿವರೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಗಾಂಧೀಜಿ ವೃತ್ತಕ್ಕೆ ಆಗಮಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ್ ಹೇಳಿದರು.ಪಟ್ಟಟದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು. ನಗರದ ಬಜಾರದಲ್ಲಿರುವ ಮಹಾತ್ಮಾಗಾಂಧೀಜಿ ವೃತ್ತಕ್ಕೆ ಎಲ್ಲರೂ ಆಗಮಿಸಬೇಕು. ಅಲ್ಲಿ ಗಾಂಧೀಜಿ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಗುವುದು. ಪಾದಯಾತ್ರೆ ಗಾಂಧಿ ವೃತ್ತದಿಂದ ಮಹಾವೀರ, ಅಂಬೇಡ್ಕರ, ಬಸವೇಶ್ವರ ವೃತ್ತದ ಮಾರ್ಗವಾಗಿ ಕಾಂಗ್ರೆಸ್ ಕಾರ್ಯಾಲಯ ತಲುಪಲಿದೆ. ಕಾರ್ಯಾಯದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖಂಡರು, ಕಾರ್ಯಕರ್ತರು ಆಗಮಿಸುವಂತೆ ಮನವಿ ಮಾಡಿದರು.
ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಇಲಿಯಾಸ ಬೊರಾಮಣಿ, ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ ಮಾತನಾಡಿದರು. ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಹಾಂಗೀರ್ ಸೌದಾಗರ್, ಕಾಂಗ್ರೆಸ್ ಮುಖಂಡರಾದ ಭೀಮಣ್ಣ ಕೌಲಗಿ, ಜೆಟ್ಟೆಪ್ಪ ರವಳಿ, ಸದಾಶಿವ ಪ್ಯಾಟಿ, ಧರ್ಮರಾಜ ವಾಲಿಕಾರ, ರಮೇಶ ಕಲ್ಯಾಣಿ, ಮಲ್ಲಪ್ಪ ಮಡ್ಡಿಮನಿ, ರೈಸ್ ಅಷ್ಟೆಕರ್, ನೀಲಕಂಠ ರೂಗಿ, ಸಾಮಾಜಿಕ ಜಾಲತಾಣದ ಸಂಚಾಲಕ ಸಂತೋಷ ಪರಸೆನವರ,ಶ್ರೀಕಾಂತ ಕುಡಿಗನೂರ ಹಾಗೂ ಮಹಿಳಾ ಮುಖಂಡರಾದ ಸುಗಂಧಾ ಬಿರಾದಾರ, ಫಿರೋಜ್ ಸೋನಾವನೆ ಸೇರಿದಂತೆ ಇತರರು ಇದ್ದರು.