ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಹೆಣ್ಣು ಮಕ್ಕಳ ಅಪಹರಣ/ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಒಂದೂವರೆ ವರ್ಷದಲ್ಲಿ ಅಪಹರಣ, ನಾಪತ್ತೆಯಾದ ಹೆಣ್ಣು ಮಕ್ಕಳ ಪೈಕಿ ಸುಮಾರು 21ಕ್ಕೂ ಅಧಿಕ ಮಕ್ಕಳು ಈವರೆಗೆ ಪತ್ತೆಯಾಗಿಲ್ಲ.

- 50 ಮಂದಿ ಈವರೆಗೂ ಪತ್ತೆ ಇಲ್ಲ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಹೆಣ್ಣು ಮಕ್ಕಳ ಅಪಹರಣ/ ನಾಪತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ ಒಂದೂವರೆ ವರ್ಷದಲ್ಲಿ ಅಪಹರಣ, ನಾಪತ್ತೆಯಾದ ಹೆಣ್ಣು ಮಕ್ಕಳ ಪೈಕಿ ಸುಮಾರು 21ಕ್ಕೂ ಅಧಿಕ ಮಕ್ಕಳು ಈವರೆಗೆ ಪತ್ತೆಯಾಗಿಲ್ಲ.

ಪ್ರವಾಸಕ್ಕೆಂದು ಚಿಕ್ಕಮಗಳೂರಿಗೆ ಆಗಮಿಸಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ನಾಪತ್ತೆಯಾಗಿ ಮೂರು ದಿನ ಬಳಿಕ ಶವವಾಗಿ ಸಿಕ್ಕಿದ್ದಾಳೆ. ಇದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ.

ಇದರೊಂದಿಗೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ನಾಪತ್ತೆ ಮತ್ತು ಆಪಹರಣ ಪ್ರಕರಣಗಳ ಅಂಕಿ ಸಂಖ್ಯೆಗಳು ಗಮನಿಸಿದರೆ, ನಿಜಕ್ಕೂ ಚಿಕ್ಕಮಗಳೂರು ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಸುರಕ್ಷಿತವೇ ಎಂಬ ಪ್ರಶ್ನೆ ಮೂಡಲಿದೆ.

3 ವರ್ಷದಲ್ಲಿ 1011 ನಾಪತ್ತೆ, ಅಪರಣ ಪ್ರಕರಣ

ಕಳೆದ ಮೂರು ವರ್ಷದ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 823 ಮಹಿಳೆಯರು ಹಾಗೂ 188 ಹೆಣ್ಣು ಮಕ್ಕಳು ಸೇರಿದಂತೆ ಬರೋಬ್ಬರಿ 1,011 ಮಂದಿ ಅಪಹರಣ/ ನಾಪತ್ತೆಯಾದ ಪ್ರಕರಣ ದಾಖಲಾಗಿವೆ. ಈ ಪೈಕಿ 50 ಪ್ರಕರಣಗಳು ಈವರೆಗೆ ಪತ್ತೆಯಾಗಿಲ್ಲ. ಅವರು ಎಲ್ಲಿದ್ದಾರೆ ಎಂಬ ಮಾಹಿತಿಯೂ ಪೊಲೀಸರಿಗೆ ಇಲ್ಲ. ಅಂದರೆ ಈ ಮಕ್ಕಳ ನಾಪತ್ತೆ ಪ್ರಕರಣ ಭೇದಿಸಲು ಪೊಲೀಸರು ವಿಫಲವಾಗಿದ್ದಾರೆ.

ಈ ರೀತಿ ಅಪಹರಣವಾದ ಮಕ್ಕಳನ್ನು ಭಿಕ್ಷಾಟನೆ, ಮಹಿಳೆಯರನ್ನು ಮುಂಬೈ, ದೆಹಲಿ ಸೇರಿದಂತೆ ಮೊದಲಾದ ರಾಜ್ಯಗಳಿಗೆ ಇನ್ನಿತರ ಕೆಲಸಗಳಿಗೆ ಬಲವಂತವಾಗಿ ಭಿಕ್ಷಾಟನೆಗೆ ದೂಡಲಾಗುತ್ತದೆ. ಜತೆಗೆ ಒತ್ತಾಯ ಪೂರ್ವಕ ದುಡಿಮೆ, ಲೈಂಗಿಕ ದೌರ್ಜನ್ಯ, ಲೈಂಗಿಕ ವೃತ್ತಿ, ಅಂಗಾಂಗ ಕಸಿಯುವಂಥ ಕಾರ್ಯಗಳಿಗೆ ಬಳಸಲಾಗುತ್ತದೆ ಎನ್ನಲಾಗಿದೆ.

-- ಬಾಕ್ಸ್‌ --

ಕಳೆದ ಮೂರು ವರ್ಷದಲ್ಲಿ ಮಹಿಳೆಯರ ನಾಪತ್ತೆ, ಅಪಹರಣ ಪ್ರಕರಣದ ವಿವರ

ವರ್ಷಪ್ರಕರಣ ಸಂಖ್ಯೆಪತ್ತೆ ಸಂಖ್ಯೆಬಾಕಿ ಸಂಖ್ಯೆ

20232692672

20242392372

20252292218

2026(ಫೆ.20)866917

ಒಟ್ಟು82379429

---ಬಾಕ್ಸ್‌---

ಮೂರು ವರ್ಷದ ಜಿಲ್ಲೆಯ ಹೆಣ್ಣು ಮಕ್ಕಳ ನಾಪತ್ತೆ, ಅಪಹರಣ ಪ್ರಕರಣದ ವಿವರ

ವರ್ಷಪ್ರಕರಣ ಸಂಖ್ಯೆಪತ್ತೆ ಸಂಖ್ಯೆಬಾಕಿ ಸಂಖ್ಯೆ

202353530

202454540

2025745915

2026(ಫೆ.20)716

ಒಟ್ಟು18816721

---ಬಾಕ್--ಸ್‌

ನಿಯಂತ್ರಣಕ್ಕೆ ಕ್ರಮಗಳೇನು?ಮಕ್ಕಳ ಅಪಹರಣ ಪ್ರಕರಣಗಳು ವರದಿಯಾದ ಕೂಡಲೇ ವಿಳಂಬ ಮಾಡದೆ ಎಫ್ಐಆರ್ ದಾಖಲಿಸಲಾಗುತ್ತಿದೆ. ಕೂಡಲೇ ರಾಜ್ಯದ ಎಲ್ಲಾ ಠಾಣೆಗಳಿಗೆ ಪ್ರಕರಣದ ಆರೋಪಿ ಮತ್ತು ಅಪಹರಿಸಿರುವ ಮಗುವಿನ ಬಗ್ಗೆ ಯಾವುದೇ ಸುಳಿವು ದೊರೆತರೆ ಮಾಹಿತಿ ಪಡೆಯಲು ಪಾಲಕರ ಒಪ್ಪಿಗೆ ಮೇರೆಗೆ ಪತ್ರಿಕಾ ಪ್ರಕಟಣೆ, ದೂರದರ್ಶನ, ಆಕಾಶವಾಣಿಯಲ್ಲಿ ಪ್ರಕಟಣೆ ಹೊರಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ರಾಜ್ಯದ ಗಡಿ ಪ್ರದೇಶಗಳಲ್ಲಿ ಮತ್ತು ಬಸ್ -ರೈಲ್ವೆ ನಿಲ್ದಾಣಗಳಲ್ಲಿ ಪತ್ರಗಳನ್ನು, ಫೋಟೋ ಅಂಟಿಸಿ ಕ್ರಮ ಕೈಗೊಳ್ಳ ಲಾಗುತ್ತಿದೆ. ರೀಜನಲ್ ಪಾಸ್‌ಪೋರ್ಟ್ ಆಫೀಸ್‌ಗೆ ನವಜಾತ ಮಕ್ಕಳಿಗೆ ಪಾಸ್ ಪೋರ್ಟ್‌ ಅರ್ಜಿ ಸಲ್ಲಿಸಿರುವ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.

ಲುಕ್‌ಔಟ್ ನೋಟಿಸ್ ನೀಡುವುದು, ಅಕ್ಕ-ಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ಮಕ್ಕಳ ಕುರಿತು ಹುಡುಕಾಟ ನಡೆಸಲಾಗುತ್ತದೆ. ಅಧಿಕಾರಿಗಳ ತಂಡ ರಚಿಸಿ ಎಲ್ಲಾ ಕಡೆ ಹುಡುಕಾಟ ನಡೆಸುವುದು, ಅಕ್ಕ-ಪಕ್ಕದ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅಪರಿಚಿತ ಶವಗಳ ಯುಡಿಆರ್‌ ಪ್ರಕರಣ ಪರಿಶೀಲಿಸುವುದು, ಜಿಲ್ಲಾ ಅಪರಾಧ ದಾಖಲಾತಿ ವಿಭಾಗಗಳಲ್ಲಿನ ವರದಿ ಪರಿಶೀಲಿಸುವುದು, ದಿನಪತ್ರಿಕೆ ಮತ್ತು ದೂರದರ್ಶನದಲ್ಲಿ ಕಾಣೆಯಾದ ಮಕ್ಕಳ ಭಾವಚಿತ್ರ ಪ್ರಸಾರ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.