ನಾಡು ಕಂಡ ಅಪರೂಪದ ರಾಜಕಾರಣಿಗಳಲ್ಲಿ ಬಿ.ರಾಚಯ್ಯ ಅವರು ಒಬ್ಬರು. ತಾವು ನಿರ್ವಹಿಸಿದಂಥ ಖಾತೆಗಳಿಗೆ ನ್ಯಾಯ ಕಲ್ಪಿಸುವ ಜೊತೆಗೆ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ಚಾಮರಾಜನಗರದಿಂದ ಬೀದರ್‌ವರೆಗೆ ಬಡವರಿಗೆ ಹಾಗೂ ಎಲ್ಲಾ ವರ್ಗದವರಿಗೂ ಜಮೀನು ಹಾಗೂ ಆಶ್ರಯ ಮನೆಗಳನ್ನು ಹಂಚಿಕೆ ಮಾಡುವ ಮೂಲಕ ಅವರ ಬದುಕಿಗೆ ದಾರಿ ದೀಪವಾಗಿದ್ದರು, ಅರಣ್ಯ ಹಾಗೂ ಕಂದಾಯ ಇಲಾಖೆಯ ಸಚಿವರಾಗಿ ಬಡವರು ಹಾಗೂ ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಆಲೂರು ಗ್ರಾಮದಲ್ಲಿರುವ ಬಿ. ರಾಚಯ್ಯನವರ ಸ್ಮಾರಕದಲ್ಲಿ ಮಾಜಿ ರಾಜ್ಯಪಾಲ ದಿ. ಬಿ.ರಾಚಯ್ಯ ಅವರ ೧೦೪ನೇ ಜನ್ಮ ದಿನೋತ್ಸವವನ್ನು ಸೋಮವಾರ ಆಚರಣೆ ಮಾಡಲಾಯಿತು.ಬಿ. ರಾಚಯ್ಯ ಅವರ ಸ್ಮಾರಕಕ್ಕೆ ವಿಶೇಷ ಹೂವುಗಳಿಂದ ಶೃಂಗರಿಸಿ, ದಿ. ಗೌರಮ್ಮ ಮತ್ತು ಬಿ.ರಾಚಯ್ಯ ಭಾವಚಿತ್ರಕ್ಕೆ ಮಕ್ಕಳಾದ ಎ.ಆರ್.ಕೃಷ್ಣಮುರ್ತಿ, ಎ. ಆರ್. ಬಾಲರಾಜು ಹಾಗೂ ಹೆಣ್ಣುಮಕ್ಕಳು ಮತ್ತು ಕುಟುಂಬಸ್ಥರು, ಅಭಿಮಾನಿಗಳು, ಹಿತೈಷಿಗಳು ಪೂಜೆ ಸಲ್ಲಿಸಿ, ಪುಷ್ಪ ನಮನ ಅರ್ಪಿಸಿದರು. ನೂರಾರು ಸಂಖ್ಯೆಯಲ್ಲಿ ರಾಚಯ್ಯ ಅವರ ಅಭಿಮಾನಿಗಳು, ಹಿತೈಷಿಗಳು ಭಾಗವಹಿಸಿದ್ದರು.
ಜನಪದ ಕಲಾವಿದ ಸಿ.ಎಂ. ನರಸಿಂಹಮೂರ್ತಿ ಮತ್ತು ತಂಡದವರಿಂದ ಭಾವಗೀತೆ ಹಾಗೂ ಭಕ್ತಿಗೀತೆಗಳ ಕಾರ್ಯಕ್ರಮ ಜನ್ಮದಿನೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಬಿ. ರಾಚಯ್ಯ ಅವರ ಪುತ್ರರಾದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮುರ್ತಿ, ಬಿ.ರಾಚಯ್ಯ ಅವರ ಜನ್ಮ ದಿನವನ್ನು ಕಳೆದ ೨೫ ವರ್ಷಗಳಿಂದ ಅವರ ಸ್ಮಾರಕದಲ್ಲಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಅವರ ಪುಣ್ಯ ಭೂಮಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ. ಯಾವುದೇ ಆಹ್ವಾನ ವಿಲ್ಲದೇ ಅವರ ಜನ್ಮ ದಿನ ಆ. ೧೦, ಪುಣ್ಯ ಸ್ಮರಣೆ ಫೆ. ೧೪ ರಂದು ಆಲೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ನಮ್ಮೆಲ್ಲರಿಗೂ ಸಂತಸ ಎಂದಿದೆ. ನಿಮ್ಮೆಲ್ಲರಿಗೂ ನಮ್ಮ ಕುಟುಂಬ ಎಂದೆಂದಿಗೂ ಚಿರಋಣಿಯಾಗಿರುತ್ತದೆ ಎಂದರು.
ನಾಡು ಕಂಡ ಅಪರೂಪದ ರಾಜಕಾರಣಿಗಳಲ್ಲಿ ಬಿ.ರಾಚಯ್ಯ ಅವರು ಒಬ್ಬರು. ತಾವು ನಿರ್ವಹಿಸಿದಂಥ ಖಾತೆಗಳಿಗೆ ನ್ಯಾಯ ಕಲ್ಪಿಸುವ ಜೊತೆಗೆ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು. ಚಾಮರಾಜನಗರದಿಂದ ಬೀದರ್‌ವರೆಗೆ ಬಡವರಿಗೆ ಹಾಗೂ ಎಲ್ಲಾ ವರ್ಗದವರಿಗೂ ಜಮೀನು ಹಾಗೂ ಆಶ್ರಯ ಮನೆಗಳನ್ನು ಹಂಚಿಕೆ ಮಾಡುವ ಮೂಲಕ ಅವರ ಬದುಕಿಗೆ ದಾರಿ ದೀಪವಾಗಿದ್ದರು, ಅರಣ್ಯ ಹಾಗೂ ಕಂದಾಯ ಇಲಾಖೆಯ ಸಚಿವರಾಗಿ ಬಡವರು ಹಾಗೂ ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದ್ದರೂ ಸಹ ಅವರಿಗೆ ದೊರೆಯಲಿಲ್ಲ. ಆದರೆ, ರಾಜ್ಯಪಾಲರಾಗುವ ಯೋಗ ಕೂಡಿ ಬಂತು. ಅವರ ಮಕ್ಕಳಾಗಿ ಅವರು ಹಾಕಿ ಕೊಟ್ಟ ಮಾರ್ಗದಲ್ಲಿಯೇ ನಡೆಯುವ ಜೊತೆಗೆ ಅವರ ಹೆಸರಿಗೆ ಕಿಂಚಿತ್ತು ಕಳಂಕ ಬರದಂತೆ ನಡೆದುಕೊಂಡು ಹೋಗುತ್ತಿದ್ದೇವೆ. ಅವರ ಹಾದಿಯಲ್ಲಿಯೇ ರಾಜಕಾರಣ ಮಾಡುತ್ತಾ ಬಂದಿದ್ದು ನಿಮ್ಮೆಲ್ಲರ ಸಹಕಾರ ಕಾರಣವಾಗಿದೆ ಎಂದು ತಂದೆಯವರನ್ನು ನೆನೆದು ಕೃಷ್ಣಮೂರ್ತಿ ಭಾವುಕರಾದರು.ಕಾರ್ಯಕ್ರಮದಲ್ಲಿ ಕೊಳ್ಳೇಗಾಲದ ಚೇತವನದ ಬೋಧಿರತ್ನ ಬಂತೇಜಿ, ಬಿ. ರಾಚಯ್ಯ ಅವರ ಮಕ್ಕಳಾದ ಜಿಪಂ ಮಾಜಿ ಸದಸ್ಯ ಆರ್. ಬಾಲರಾಜು ಎ. ಆರ್. ಪ್ರಭಾ, ಎ.ಆರ್. ವೇದವತಿ, ತ್ರಿವೇಣಿ, ಅರತಿ, ವಿಜಯಲಕ್ಷ್ಮಿ ಬಾಲರಾಜು, ಡಾ. ರೋಷಿಣಿ, ಆರ್.ಕೆ. ಶ್ರೀವರ್ಧನ್, ನಿಖಿಲ್ ಚಕ್ರವರ್ತಿ, ಶರತ್ ಕುಮಾರ್, ವಿನಯ್, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚಾಮಲ್ ಅಧ್ಯಕ್ಷ ನಂಜುಂಡಸ್ವಾಮಿ, ದಲಿತ ಮುಖಂಡರಾದ ವೆಂಕಟರಮಣಸ್ವಾಮಿ(ಪಾಪು), ನಿರ್ದೇಶಕರಾದ ಕಮರವಾಡಿ ರೇವಣ್ಣ, ಮುಖಂಡರಾದ ಆರ್. ಮಹದೇವ್, ಅರಕಲವಾಡಿ ಗುರುಸ್ವಾಮಿ, ಅಲೂರು ಮಲ್ಲಣ್ಣ, ಬಿ.ಕೆ. ರವಿಕುಮಾರ್, ಅಲೂರು ಪ್ರದೀಪ್, ಸೋಮಣ್ಣ, ತೋಟೇಶ್, ಚಿನ್ನಮುತ್ತು, ಆಲೂರು ಬಾಬು, ತೋಟೇಶ್, ವಡ್ಡಗೆರೆ ದಾಸ್, ಪ್ರಭುಪ್ರಸಾದ್, ನಾಗರಾಜ ಕಮಾಲ್, ವೆಂಕಟರಮಣಸ್ವಾಮಿ, ಎಪಿಎಂಸಿ ನಾಗೇಂದ್ರ, ಶಿವಕುಮಾರ್ ಅಯ್ಯನಪುರ, ಎಸ್‌ಪಿಕೆ ಉಮೇಶ್, ಡಿ. ನಾಗೇಂದ್ರ, ಹೊನ್ನೂರು ಕೃಷ್ಣಮೂರ್ತಿ, ಆಲೂರು ಪ್ರವೀಣ್, ಯೋಗೇಶ್, ಎಸ್. ಲಕ್ಷ್ಮೀನರಸಿಂಹ, ಪು. ಶ್ರೀನಿವಾಸನಾಯಕ, ಸಿ.ಎ. ಮಹದೇವಶೆಟ್ಟಿ, ಹೊಂಗನೂರು ಪುಟ್ಟಸ್ವಾಮಿ, ಮಹದೇವ್, ಯೋಗೇಂದ್ರ ಗೌಡ, ಚೇತನ್ ದೊರೆರಾಜ್, ಅಲೂರು ರವಿಕುಮಾರ್ ಮೊದಲಾದವರು ಇದ್ದರು,