ಸಂಚಾರ ನಿಯಮ ಉಲ್ಲಂಘನೆ: 105 ಕೇಸ್‌, ₹52500 ದಂಡ

| Published : Jun 30 2024, 12:45 AM IST

ಸಾರಾಂಶ

ಸಂಚಾರ ನಿಯಮಗಳ ಉಲ್ಲಂಘನೆ ಮಾಡುವವರ ವಿರುದ್ಧ ಜಿಲ್ಲಾ ಕೇಂದ್ರದಲ್ಲಿ ಸಂಚಾರ ಪೊಲೀಸರಿಂದ ಶನಿವಾರವೂ ವಿಶೇಷ ಕಾರ್ಯಾಚರಣೆ ಮುಂದುವರಿಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿ ಮಲ್ಲೇಶ ದೊಡ್ಮನಿ ಮಾರ್ಗದರ್ಶನದಲ್ಲಿ ಸಂಚಾರ ಠಾಣೆ ವೃತ್ತ ನಿರೀಕ್ಷಕ ಮಂಜುನಾಥ ನೆಲವಾಗಲು ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

- ಜಿಲ್ಲಾ ಕೇಂದ್ರದಲ್ಲಿ ಎಸ್‌ಪಿ ನೇತೃತ್ವದಲ್ಲಿ ಮುಂದುವರಿದ ಕಾರ್ಯಾಚರಣೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಂಚಾರ ನಿಯಮಗಳ ಉಲ್ಲಂಘನೆ ಮಾಡುವವರ ವಿರುದ್ಧ ಜಿಲ್ಲಾ ಕೇಂದ್ರದಲ್ಲಿ ಸಂಚಾರ ಪೊಲೀಸರಿಂದ ಶನಿವಾರವೂ ವಿಶೇಷ ಕಾರ್ಯಾಚರಣೆ ಮುಂದುವರಿಯಿತು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿ ಮಲ್ಲೇಶ ದೊಡ್ಮನಿ ಮಾರ್ಗದರ್ಶನದಲ್ಲಿ ಸಂಚಾರ ಠಾಣೆ ವೃತ್ತ ನಿರೀಕ್ಷಕ ಮಂಜುನಾಥ ನೆಲವಾಗಲು ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ.

ಶಾಮನೂರು ಸಮುದಾಯ ಭವನದಿಂದ ಶ್ರೀ ಶಾರದಾಂದ ವೃತ್ತದವರೆಗಿನ ರಸ್ತೆ, ಎಂಬಿಎ ಕಾಲೇಜು ಭಾಗಗಳಲ್ಲಿ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಿಎಂಐಟಿವರೆಗೆ ಸಂಚಾರ ನಿಯಮಗಳ ಬಗ್ಗೆ ಅಧಿಕಾರಿ, ಸಿಬ್ಬಂದಿ ಜಾಗೃತಿ ಮೂಡಿಸಿದರು.

ಹೆಲ್ಮೆಟ್‌ರಹಿತ ಬೈಕ್‌ ಚಾಲನೆ, ಟ್ರಿಪಲ್ ರೈಡಿಂಗ್‌, ಅತಿ ವೇಗದ ಚಾಲನೆ, ರಸ್ತೆ ಅಡೆತಡೆ, ಕರ್ಕಶ ಧ್ವನಿ ಸೂಸುವ ಸೈಲೆನ್ಸರ್‌ (Defective Silencers), ಕರ್ಕಶ ದ್ವನಿ ಸೂಸುವ ಹಾರ್ನ್ (Shrill Horns)ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡು, ಸ್ಥಳದಲ್ಲೇ ಸವಾರರು, ಚಾಲಕರಿಗೆ ದಂಡ ವಿಧಿಸಲಾಗಿದೆ.

ಎಷ್ಟೆಷ್ಟು ದಂಡ ವಸೂಲು:

ಸಂಚಾರ ನಿಯಮ ಉಲ್ಲಂಘನೆಗಲಿಗೆ ಸಂಬಂಧಿಸಿದಂತೆ ಸ್ಥಳ ದಂಡವನ್ನು ಸಹ ವಿಧಿಸಿ, ಸಂಚಾರ ನಿಯಮ ಉಲ್ಲಂಘಿಸದಂತೆ ಎಚ್ಚರಿಸಲಾಯಿತು. ಕರ್ಕಶ ಧ್ವನಿ ಸೂಸುವ ಹಾರ್ನ್ (Shrill Horns)ನ ಒಟ್ಟು 10 ಪ್ರಕರಣಗಳಲ್ಲಿ ₹5000 ಸಾವಿರ ದಂಡ, ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಸಂಬಂಧಿಸದಂತೆ ಒಟ್ಟು 60 ಪ್ರಕರಣದಲ್ಲಿ ₹30,000, ಟ್ರಿಪಲ್ ರೈಡಿಂಗ್‌ನ 20 ಪ್ರಕರಣದಲ್ಲಿ ₹10 ಸಾವಿರ, ಕರ್ಕಶ ಧ್ವನಿ ಸೂಸುವ ಸೈಲೆನ್ಸರ್‌ಗೆ ಸಂಬಂಧಿಸಿದಂತೆ 10 ಪ್ರಕರಣದಲ್ಲಿ ₹5 ಸಾವಿರ ದಂಡ ವಸೂಲು ಮಾಡಲಾಗಿದೆ.

ಅತಿ ವೇಗ ಚಾಲನೆಯ 2 ಪ್ರಕರಣಗಳಲ್ಲಿ ₹1000, ರಸ್ತೆ ಅಡೆತಡೆಗೆ ಸಂಬಂಧಿಸಿದ 2 ಪ್ರಕರಣಗಳಲ್ಲಿ ₹1000 ದಂಡ, ಇತರೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿವೆ. ಒಟ್ಟು 105 ಪ್ರಕರಣಗಳಿಂದ ₹52,500 ದಂಡ ವಿಧಿಸಲಾಗಿದೆ. ಇಂದು ಮುಂದೆಯೂ ಸಂಚಾರ ಪೊಲೀಸರ ಕಾರ್ಯಾಚರಣೆ ನಗರ, ಜಿಲ್ಲಾದ್ಯಂತ ಮುಂದುವರಿಯಲಿದೆ.

- - - (ಸಾಂದರ್ಭಿಕ ಚಿತ್ರ)