ಡಿಸಿಎಂ ಡಿಕೆ ಶಿವಕುಮಾರ್‌ ಕ್ಷೇತ್ರದಲ್ಲಿ 108 ಸಮಸ್ಯೆ

| Published : Oct 07 2024, 01:33 AM IST

ಡಿಸಿಎಂ ಡಿಕೆ ಶಿವಕುಮಾರ್‌ ಕ್ಷೇತ್ರದಲ್ಲಿ 108 ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ನಗರಸಭೆಯ 10ನೇ ವಾರ್ಡ್‌ನ ಕೆಂಕೇರಮ್ಮ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಇಲ್ಲಿನ ನಿವಾಸಿಗಳು ಪ್ರತಿನಿತ್ಯ ನರಕದ ಜೀವನ ಅನುಭವಿಸುವಂತಾಗಿದೆ ಎಂದು ಜೆಡಿಎಸ್ ಮುಖಂಡ ಸುರೇಶ್ ಆರೋಪಿಸಿದ್ದಾರೆ.

ಕನಕಪುರ: ನಗರಸಭೆಯ 10ನೇ ವಾರ್ಡ್‌ನ ಕೆಂಕೇರಮ್ಮ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಇಲ್ಲಿನ ನಿವಾಸಿಗಳು ಪ್ರತಿನಿತ್ಯ ನರಕದ ಜೀವನ ಅನುಭವಿಸುವಂತಾಗಿದೆ ಎಂದು ಜೆಡಿಎಸ್ ಮುಖಂಡ ಸುರೇಶ್ ಆರೋಪಿಸಿದ್ದಾರೆ.

ವಾರ್ಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆ ನಿರ್ಮಿಸಿ ಕೊಡುವುದಾಗಿ ಹೇಳಿ ಮನೆಗಳ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು ಇದರಿಂದ ಬಡವರ ಬದುಕು ಬೀದಿಪಾಲಾಗಿದೆ. ಮನೆ ಕೆಲಸ ಪ್ರಾರಂಭಿಸಿ ನಾಲ್ಕು ವರ್ಷಗಳೇ ಕಳೆದರೂ ಮೇಲ್ಛಾವಣಿ ಕಾಣದೆ ಮಳೆನೀರು ನಿಂತು ತುಂಬಿ ಗೋಡೆಗಳು ಶಿಥಿಲ ಗೊಂಡಿದ್ದು, ಬಿರುಕು ಬಿಟ್ಟಿವೆ. ವಾಸಿಸಲು ಬೇರೆ ಸ್ಥಳಾವಕಾಶವಿಲ್ಲದೆ ಗೋಡೆಯ ಮೇಲಿನ ಮೇಲ್ಛಾವಣಿಗೆ ತೆಂಗಿನಗರಿ ಹಾಕಿ ವಾಸಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುಮಾರು ಮೂವತ್ತು ವರ್ಷಗಳಿಂದ ಮೋರಿ ದುರಸ್ಥಿಯಾಗದೆ, ಕೊಳಚೆ ನೀರು ನಡುರಸ್ತೆಯಲ್ಲಿ ತುಂಬಿ ಹರಿಯುತ್ತಿದೆ. ಶೌಚಾಲಯಗಳಿಲ್ಲದೆ ಬಯಲು ಶೌಚಾಲಯ ಅವಲಂಬಿಸುವಂತಹ ಪರಿಸ್ಥಿತಿ ನಿರ್ಮಾಣವಾದೆ. ಕೂಡಲೇ ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.ವಾರ್ಡಿನ ತಮ್ಮಯ್ಯ, ವೆಂಕಟೇಶ, ಮಹದೇವಮ್ಮ, ತಿಮ್ಮಯ್ಯ ಮಾತನಾಡಿ, ಈ ವಾರ್ಡಿನಲ್ಲಿ ವಿದ್ಯುತ್ ದೀಪ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವಾರ್ಡ್‌ ಸದಸ್ಯೆ ನೀಲಮ್ಮ ವಾರ್ಡ್‌ನಲ್ಲಿ ಕೆಲಸ ಮಾಡಿಸುತ್ತಿದ್ದಾರೆ. ಆದರೆ ಈಗ ಕಾಮಗಾರಿಯು ಅರ್ಧಕ್ಕೆ ನಿಂತಿರುವುದರಿಂದ ಸಾಲ ಸೋಲ ಮಾಡಿ ಬಡ್ಡಿಗೆ ಹಣತಂದು ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಎಂದು ತಾರತಮ್ಯ ಮಾಡಿಕೊಂಡು, ಮನೆಗಳಿಗೆ ಕಿಟಕಿ, ಬಾಗಿಲು, ವಿದ್ಯುತ್ ನೀಡದೆ ತೊಂದರೆ ನೀಡುತ್ತಿದ್ದಾರೆ. ಕಾಂಗ್ರೆಸ್ ಅನುಯಾಯಿಗಳಿಗೆ, ಅವರಿಗೆ ಬೇಕಾದವರಿಗೆ ಕೆಲಸ ಮಾಡಿಕೊಡುತ್ತಿದ್ದಾರೆ. ಜೆಡಿಎಸ್ ಮತ್ತು ಇತರ ಪಕ್ಷದ ವ್ಯಕ್ತಿಗಳಿಗೆ ಯಾವುದೇ ಕೆಲಸ ಮಾಡಿ ಕೊಡುತ್ತಿಲ್ಲ. ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ನಗರಸಭೆಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ನಿವಾಸಿಗಳಾದ ತಮ್ಮಯ್ಯ, ವೆಂಕಟೇಶ, ಮಹದೇವಮ್ಮ, ತಿಮ್ಮಯ್ಯ, ನಾಗಕ್ಕ, ದೇವಲಮ್ಮ ಹಾಜರಿದ್ದರು.ಕೊಳಚೆ ನಿರ್ಮೂಲನ ಮಂಡಳಿಯಿಂದ ಕೆಂಕೇರಮ್ಮ ಬಡಾವಣೆ ಅಭಿವೃದ್ಧಿಗಾಗಿ ಸುಮಾರು ಒಂದು ಕಾಲು ಕೋಟಿ ಹಣ ಬಿಡುಗಡೆಯಾಗಿದ್ದರೂ ಸಹ ಅಧಿಕಾರಿಗಳು ಅಭಿವೃದ್ಧಿ ಕಾರ್ಯ ಕೈಗೊಳ್ಳದೇ ಸುಮ್ಮನೆ ಕೈಕಟ್ಟಿ ಕುಳಿತಿದ್ದು ಕ್ಷೇತ್ರದ ಶಾಸಕರು,ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರು ಈ ವಾರ್ಡಿನ ಬಗ್ಗೆ ಹೆಚ್ಚಿನ ಗಮನ ಹರಿಸಿ ಅತಿ ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಬೇಕು.

ನೀಲಮ್ಮ ನಗರಸಭೆ ಸದಸ್ಯೆ ಕನಕಪುರ