ಸಾರಾಂಶ
ತೋನ್ಸೆ ಗ್ರಾಮದ ಬ್ಲೂ ಬಾಯ್ಸ್ ಫ್ರೆಂಡ್ಸ್ ತಂಡದ ದಶಮಾನೋತ್ಸವ ಸಮಾರಂಭವನ್ನು ನೇಜಾರಿನ ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಮಂಗಳವಾರ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಕಂಠ ವಹಿಸಿದ್ದರು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತೋನ್ಸೆ ಗ್ರಾಮದ ಬ್ಲೂ ಬಾಯ್ಸ್ ಫ್ರೆಂಡ್ಸ್ ತಂಡದ ದಶಮಾನೋತ್ಸವ ಸಮಾರಂಭವನ್ನು ನೇಜಾರಿನ ಸ್ಪಂದನ ವಿಶೇಷ ಮಕ್ಕಳ ಶಾಲೆಯಲ್ಲಿ ಮಂಗಳವಾರ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಕಂಠ ವಹಿಸಿದ್ದರು.ಈ ಸಂದರ್ಭ ಮುಖ್ಯ ಅತಿಥಿಯಾಗಿ ಮಾತನಾಡಿದ ಉಡುಪಿ ಪೂರ್ಣ ಪ್ರಜ್ಞಾ ಕಾಲೇಜಿನ ಉಪನ್ಯಾಸಕ ಮುರುಳಿ ಆಚಾರ್ಯ ಪಣಿಯೂರು, ಸಂಘಟನೆಯ ದಶಮಾನೋತ್ಸವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಇನ್ನೊಬ್ಬ ಅತಿಥಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ನಿಕಟಪೂರ್ವ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಮಾತನಾಡಿ, ಹೊಸ ವರ್ಷ ಎಂದು ಮೋಜು - ಮಸ್ತಿ ಮಾಡುವ ಯುವಕರ ನಡುವೆ ತಮ್ಮ ಸಂಸ್ಥೆಯ ಕಾರ್ಯಕ್ರಮವನ್ನು ವಿಶೇಷ ಮಕ್ಕಳೊಂದಿಗೆ ಆಚರಿಸಿ ಸಮಾಜಕ್ಕೆ ಮಾದರಿಯಾಗುವ ಕಾರ್ಯಕ್ರಮ ನೆಡೆಸಿರುವುದು ಶ್ಲಾಘನೀಯ ಎಂದರು.ಈ ಸಂದರ್ಭದಲ್ಲಿ ಸ್ಪಂದನ ಸಂಸ್ಥೆಯ ವಿಕಲಚೇತನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಯಿತು. ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಮುಖ್ಯಸ್ಥರಾದ ಉಮೇಶ್, ಸಾಮಾಜಿಕ ಕಾರ್ಯಕರ್ತರಾದ ರಮೇಶ್ ತಿಂಗಳಯಾ, ವತ್ಸಲಾ ಕೋಟಿಯನ್, ಹರೀಶ್ಚಂದ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಶಾಂತ್ ಆಚಾರ್ಯ, ತಂಡದ ನಿಯೋಜಿತ ಅಧ್ಯಕ್ಷರಾದ ವಿನೀತ್, ಸ್ಥಾಪಕ ಅಧ್ಯಕ್ಷರು ಜೆಸಿಐ ಕಲ್ಯಾಣಪುರದ ನಿಕಟಪೂರ್ವ ಅಧ್ಯಕ್ಷರಾದ ವಿವೇಕ್ ಗಾಣಿಗ ಹಾಗೂ ಕಾರ್ಯಕ್ರಮ ಸಂಚಾಲಕರಾದ ಸಹನ್ ಶೆಟ್ಟಿ, ಸೃಜನ್ ಮೊದಲಾದವರು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ನಿರೂಪಿಸಿದರು. ವರುಣ್ ನಾಯಕ್ ವಂದಿಸಿದರು.