ಸಾರಾಂಶ
ಪ್ರತಿವರ್ಷ ಇಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಬಡ ಕುಟುಂಬಗಳಿಗೆ ವರದಾನವಾಗಿದ್ದು, ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮದುವೆಯಾದ ದಂಪತಿಗಳು ಆದರ್ಶವಾಗಿ ಬದುಕಬೇಕು
ಹೂವಿನಹಡಗಲಿ: ತಾಲೂಕಿನ ಪುರ ಗ್ರಾಮದಲ್ಲಿ ವಿಶ್ವಾರಾಧ್ಯ ರಥೋತ್ಸವ ಅಂಗವಾಗಿ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 12 ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು.
ಶಾಸಕ ಕೃಷ್ಣನಾಯ್ಕ ಮಾತನಾಡಿ, ಸೋಗಿ ಪುರವರ್ಗ ಕಟ್ಟಿಮನಿ ಮಠದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಪ್ರತಿವರ್ಷ ಇಲ್ಲಿ ನಡೆಯುವ ಸಾಮೂಹಿಕ ವಿವಾಹಗಳು ಬಡ ಕುಟುಂಬಗಳಿಗೆ ವರದಾನವಾಗಿದ್ದು, ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮದುವೆಯಾದ ದಂಪತಿಗಳು ಆದರ್ಶವಾಗಿ ಬದುಕಬೇಕು ಎಂದರು.ಶ್ರೀಮಠದಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ಗಡ್ಡಿ ತೇರಿಗೆ ₹10 ಲಕ್ಷ ಅನುದಾನ ಮಂಜೂರು ಮಾಡುವ ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಅಭಿನವ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ನೆಗಳೂರಿನ ಗುರುಶಾಂತೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.ಲಿಂ.ಸಿದ್ಧವೀರ ಶಿವಾಚಾರ್ಯರ 47ನೇ ಸಂಸ್ಮರಣೆ, ಲಿಂ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು 9ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.
ಇದೇ ವೇಳೆ ಹೊಸಪೇಟೆಯ ಜವಳಿ ಮಹಾಂತಪ್ಪ ಅವರಿಗೆ ಮರಣೋತ್ತರವಾಗಿ ಶ್ರೀಪಟ್ಟದ ಚಂದ್ರಶೇಖರ ಶಿವಾಚಾರ್ಯಶ್ರೀ ಪ್ರಶಸ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪ್ರದಾನ ಮಾಡಲಾಯಿತು.ನಿವೃತ್ತ ಪ್ರಾಚಾರ್ಯ ಶಾಂತಮೂರ್ತಿ ಕುಲಕರ್ಣಿ ದಂಪತಿ ಹಾಗೂ ಸೇವಾರ್ಥಿಗಳಿಗೆ ಗುರುರಕ್ಷೆ ನೀಡಲಾಯಿತು.ಎ.ಎಂ.ಹಾಲಯ್ಯ ಶಾಸ್ತ್ರಿ, ಪಿ.ಕೆ.ಎಂ.ವಿಶ್ವಾನಂದಸ್ವಾಮಿ, ಅಂಗಡಿ ಗೌರೀಶ, ರೇವಣಸಿದ್ದಸ್ವಾಮಿ, ಪ್ರಭು ಸೊಪ್ಪಿನ, ಎನ್.ಸುಧಾಕರ, ವೈ.ಶಿವರಾಯನಗೌಡ, ಗಡ್ಡಿ ಗುಡ್ಡಪ್ಪ ಉಪಸ್ಥಿತರಿದ್ದರು.