ಸಾರಾಂಶ
ಔರಾದ್:
ಶಾಸಕ ಪ್ರಭು ಬಿ ಚವ್ಹಾಣ ಅವರ ಗ್ರಾಮ ಸಂಚಾರ ಕಾರ್ಯಕ್ರಮ ಮುಂದುವರೆದಿದ್ದು, ಫೆ.25ರಂದು ತಾಲೂಕಿನ ಮುಸ್ತಾಪೂರ, ಜಮಾಲಪೂರ, ಕಪ್ಪೆಕೇರಿ ಸೇರಿ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆ ಆಲಿಸಿ, ₹12 ಕೋಟಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.ಔರಾದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ₹157 ಲಕ್ಷ ಮೊತ್ತದ ಹೆಚ್ಚುವರಿ ತರಗತಿ ಕೋಣೆಗಳು, ₹220 ಲಕ್ಷದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ₹240 ಲಕ್ಷದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ಕಪ್ಪಿಕೇರಿ ಗ್ರಾಮದಲ್ಲಿ ಮುಖ್ಯರಸ್ತೆಯಿಂದ ಗ್ರಾಮದ ವರೆಗೆ ₹58 ಲಕ್ಷದ ರಸ್ತೆ ಹಾಗೂ ನಾಗನಪಲ್ಲಿಯಿಂದ ಚಿಂತಾಕಿವರೆಗೆ ₹160 ಲಕ್ಷದ ರಸ್ತೆ, ಪೋಮಾ ತಾಂಡಾ ಜಂಬಗಿ ಕ್ರಾಸ್ ನಿಂದ ಚಿಂತಾಮಣಿ ತಾಂಡಾವರೆಗೆ ₹100 ಲಕ್ಷ ಮೊತ್ತದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಯನಗುಂದಾ ಗ್ರಾಮದಲ್ಲಿ ₹9 ಲಕ್ಷ ಮೊತ್ತದ ಸಮುದಾಯ ಭವನ, ಜಮಾಲಪೂರನಲ್ಲಿ ₹133.90 ಲಕ್ಷ, ಲಾಲೂ ತಾಂಡಾದಲ್ಲಿ ₹45.24 ಲಕ್ಷ, ಮೋನಾಶಂಕರ ತಾಂಡಾದಲ್ಲಿ ₹28.79 ಲಕ್ಷ, ಮುಸ್ತಾಪೂರನಲ್ಲಿ ₹98.35 ಲಕ್ಷ ಮೊತ್ತದ ಜಲ ಜೀವನ್ ಮಿಷನ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಶಾಸಕರು, ಔರಾದ(ಬಿ) ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇನೆ. ಜನತೆಯ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಹಂತಹಂತವಾಗಿ ಪರಿಹಾರ ಒದಗಿಸುವ ಕೆಲಸ ನಿರಂತರ ಮಾಡುತ್ತಿದ್ದೇನೆ. ಗ್ರಾಮ ಸಂಚಾರದ ವೇಳೆ ಕುಡಿಯುವ ನೀರು, ರಸ್ತೆ ಸೇರಿ ಜನತೆಗೆ ತೀವ್ರ ಅವಶ್ಯಕತೆಯಿರುವ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.