ಕಾರ್ಕಳ: ಕಾರ್ಕಳ ತಾಲೂಕಿನ ಸೂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸಮರ್ಥ್‌, ಕಿರಿಯ ವಯಸ್ಸಿನಲ್ಲೇ ಭೂತ ಕೋಲ ಕಟ್ಟಿದ ಘಟನೆ ಸಾಮಾಜಿಕ ಜಾಣತಾಣದಲ್ಲಿ ವೈರಲ್ ಅಗಿದೆ. ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲಿ ಸಮರ್ಥ್‌ ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿದ್ದಾನೆ. ಮೂರು ತಲೆಮಾರುಗಳಿಂದ ಮುಂದುವರಿದ ಪರಂಪರೆಯ ಭಾಗವಾಗಿ, ಅಜ್ಜ ಮೋನು ಪಾಣರ ಮತ್ತು ತಂದೆ ಹರೀಶ ಅವರ ಹಾದಿಯಲ್ಲಿ ಸಮರ್ಥ್‌ ಕೂಡ ನಡೆದು ದೈವರಾಧನೆಗೆ ತನ್ನ ಕೊಡುಗೆ ನೀಡಿದ್ದಾನೆ.

ಅವಿವಾಹಿತರು ಮಾತ್ರ ಪಾಲ್ಗೊಳ್ಳುವ ವಿಶೇಷ ಆಚರಣೆಯ ಈ ಕೋಲದಲ್ಲಿ ಬಾಲಕನ ಭಾಗವಹಿಸುವಿಕೆ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಕಳೆದ ಬಾರಿ‌ ಶಿರ್ಲಾಲು ಸೂಡಿ ಪಂಗ್ಲಬೆಟ್ಟು ಮುಂಡ್ಲಿ ಮುಗೇರಕಲ ದೈವಸ್ಥಾನದ ವರ್ಧಂತಿ ಉತ್ಸವದಲ್ಲೂ ಕೂಡ ಗಗ್ಗರ ಕಟ್ಟಿದ್ದ ಯುವಪೀಳಿಗೆ ಸಂಸ್ಕೃತಿಯನ್ನು ಉಳಿಸುವ ದಿಶೆಯಲ್ಲಿ ಇದು ಒಳ್ಳೆಯ ಬೆಳವಣಿಗೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.