ಸಾರಾಂಶ
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡಲಾಗಿದ್ದು ಅವರಿಗೆ ಹಕ್ಕು ಪತ್ರವನ್ನು ನೀಡಿಲ್ಲ. ಹಕ್ಕುಪತ್ರ ನೀಡದೇ ಇರುವ ಕಾರಣ ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡಲು ಕಷ್ಟ ಸಾಧ್ಯವಾಗುತ್ತಿದೆ. ಸರ್ಕಾರ ತಕ್ಷಣ ವಿಲೇವಾರಿಯಾಗಿರುವ ಕಡತಗಳ ಹಕ್ಕುದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಸಚಿವರಿಗೆ ಮನವಿ ಮಾಡಿರುವುದಾಗಿ ಶಾಸಕರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಜಮೀನು ಫ್ಲಾಟಿಂಗ್ ಮಾಡುವಲ್ಲಿ ೧೨೫ (ಏಕವ್ಯಕ್ತಿ ಕೋರಿಕೆ) ಕಡತ ಸರಳೀಕರಣ ಮಾಡಿ ಫ್ಲಾಟಿಂಗ್ ಸಮಸ್ಯೆಯನ್ನು ಪರಿಹರಿಸಬೇಕು ಎಂದ ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಕಂದಾಯ ಇಲಾಖೆಯ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರಿಗೆ ಮನವಿ ಮಾಡಿ ಆಗ್ರಹಿಸಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಜಮೀನು ಫ್ಲಾಟಿಂಗ್ ಮಾಡುವಲ್ಲಿ ೧೨೪ ಕಡತ (ಏಕವ್ಯಕ್ತಿ ಕೋರಿಕೆ)ಯನ್ನು ಸಲ್ಲಿಸಬೇಕಾಗುತ್ತದೆ. ಫ್ಲಾಟಿಂಗ್ ಮಾಡುವಲ್ಲಿ ಈ ಕಡತಗಳನ್ನು ಸಿದ್ಧಪಡಿಸುವುದು ದೊಡ್ಡ ಸಮಸ್ಯೆಯನ್ನು ಸೃಷ್ಟಿಸಿದೆ. ಈ ನಿಯಮದಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ನಿಯಮದ ಕಾರಣದಿಂದಾಗಿ ಫ್ಲಾಟಿಂಗ್ ಮಾಡುವಲ್ಲಿ ಜನರು ಅಲೆದಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ನಿಯಮದಲ್ಲಿ ಸರಳೀಕರಣ ಮಾಡಿದಲ್ಲಿ ಫ್ಲಾಟಿಂಗ್ ಸಮಸ್ಯೆ ಬಹುತೇಕ ಇತ್ಯರ್ಥವಾಗಲಿದ್ದು, ನಿಯಮಾವಳಿಯ ಕಾರಣದಿಂದಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಫ್ಲಾಟಿಂಗ್ ಕಡತಗಳು ಕಳೆದ ಹಲವು ವರ್ಷಗಳಿಂದ ಕಚೇರಿಯಲ್ಲೇ ಕೊಳೆಯುತ್ತಿದೆ. ಫ್ಲಾಟಿಂಗ್ ಆಗದೆ ಇರುವ ಕಾರಣ ಜನರು ಮನೆ ಕಟ್ಟಲು, ಮಾರಾಟ ನಡೆಸಲು ಮತ್ತು ಪಾಲು ಪಟ್ಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸಚಿವರ ಮತ್ತು ಆಯುಕ್ತರ ಗಮನಕ್ಕೆ ತರಲಾಗಿದೆ.