ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜುಲೈ 30ರಿಂದ ಆರಂಭವಾಗಿದ್ದ ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್ ಐಆರ್) ಅ. 27ರಂದು ಮುಕ್ತಾಯವಾಗಿದ್ದು, ಅಂತಿಮವಾಗಿ ಜಿಲ್ಲೆಯ ಏಳು ವಿಧಾನಸಭಾ ವ್ಯಾಪ್ತಿಯಲ್ಲಿ 6,87,819 ಪುರುಷರು, 6,90,031 ಮಹಿಳೆಯರು, 66 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 13,78,016 ಮತದಾರರು ಇದ್ದಾರೆ. ಈ ನಡುವೆ ಎಸ್ಐಆರ್ನಲ್ಲಿ 6305 ಮತದಾರರ ಹೆಸರು ಡಿಲಿಟ್ ಆಗಿವೆ.
ಧಾರವಾಡ:
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜುಲೈ 30ರಿಂದ ಆರಂಭವಾಗಿದ್ದ ಮತಪಟ್ಟಿ ವಿಶೇಷ ಪರಿಷ್ಕರಣೆ (ಎಸ್ ಐಆರ್) ಅ. 27ರಂದು ಮುಕ್ತಾಯವಾಗಿದ್ದು, ಅಂತಿಮವಾಗಿ ಜಿಲ್ಲೆಯ ಏಳು ವಿಧಾನಸಭಾ ವ್ಯಾಪ್ತಿಯಲ್ಲಿ 6,87,819 ಪುರುಷರು, 6,90,031 ಮಹಿಳೆಯರು, 66 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 13,78,016 ಮತದಾರರು ಇದ್ದಾರೆ. ಈ ನಡುವೆ ಎಸ್ಐಆರ್ನಲ್ಲಿ 6305 ಮತದಾರರ ಹೆಸರು ಡಿಲಿಟ್ ಆಗಿವೆ. ಹೊಸದಾಗಿ 24 ಸಾವಿರಕ್ಕೂ ಅಧಿಕ ಮತದಾರರನ್ನು ಸೇರ್ಪಡೆ ಮಾಡಲಾಗಿದೆ.ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಕಳೆದ ಆಗಸ್ಟ್ 24ರಂದು ಕರಡು ಮತಪಟ್ಟಿ ಬಿಡುಗಡೆ ಮಾಡಿ, ಆ. 24ರಿಂದ ಅ.22ರ ವರೆಗೂ ಆಕ್ಷೇಪಣೆಗಳ ಅವಕಾಶ ಸಹ ಕಲ್ಪಿಸಿತ್ತು. ಹೀಗೆ ಬಂದ ಆಕ್ಷೇಪಣೆ ಪರಿಶೀಲಿಸಿ ವಿಲೇವಾರಿ ಮಾಡಿ ಅ.27ರಂದು ಅಂತೀಮ ಪಟ್ಟಿ ಪ್ರಕಟಿಸಲಾಗಿದೆ ಎಂದು ವಿವರಿಸಿದರು.
ಒಟ್ಟು ಮತದಾರ ಪೈಕಿ 20,807 ದಿವ್ಯಾಂಗ ಮತದಾರರು, 15,151 ಯುವ ಮತದಾರರು ಇದ್ದಾರೆ ಎಂದ ಅವರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಲೂ ಈಗಲೂ ಅವಕಾಶವಿದೆ. ಅವರು ಫಾರ್ಮ್ 6 ಭರ್ತಿ ಮಾಡಬೇಕು. ಪರಿಷ್ಕೃತ ಈ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗದ ವೆಬ್ಸೈಟ್ ಹಾಗೂ ಜಿಲ್ಲಾ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದ್ದು, ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.6000 ಮತ ಡಿಲಿಟ್:
ಎಸ್ಐಆರ್ ಪ್ರಕ್ರಿಯೆಯಲ್ಲಿ 9 ಜನರು ನಿಧನರಾಗಿದ್ದರಿಂದ ಅವರನ್ನು ಕೈ ಬಿಡಲಾಗಿದ್ದರೆ, 4494 ಶಾಶ್ವತ ವಲಸೆ ಹೋಗಿದ್ದಾರೆ. 14 ಗೈರು, ಇತರೆ ಕಾರಣಗಳಿಂದ 1783 ಸೇರಿದಂತೆ ಜಿಲ್ಲೆಯಲ್ಲಿ 6305 ಮತದಾರರ ಹೆಸರು ಪಟ್ಟಿಯಿಂದ ಕೈಬಿಡಲಾಗಿದೆ. ಇನ್ನು ಅಗತ್ಯ ದಾಖಲೆ ನೀಡದ 47,978 ಮತದಾರರಿಗೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ಪೈಕಿ 44525 ಮತದಾರರ ದಾಖಲೆ ಪರಿಶೀಲಿಸಿದ್ದು 2450 ಮತದಾರರ ಪರಿಶೀಲನೆ ಪ್ರಗತಿಯಲ್ಲಿದೆ ಎಂದರು.ಮಹಿಳೆಯರೇ ಹೆಚ್ಚು:
ಈ ನಡುವೆ ಜಿಲ್ಲೆಯಲ್ಲಿ ಮತದಾರರ ಪೈಕಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಪುರುಷರು- 6,87,019 ಜನರಿದ್ದರೆ, ಮಹಿಳಾ ಮತದಾರರ ಸಂಖ್ಯೆ 6,90,931 ಇದೆ. ಇದರಿಂದಾಗಿ 3912 ಮಹಿಳಾ ಮತದಾರರ ಹೆಚ್ಚಿದ್ದಾರೆ. ಇದರೊಂದಿಗೆ ಎಸ್ಐಆರ್ಗಿಂತ ಮುಂಚೆ ಜಿಲ್ಲೆಯಲ್ಲಿ 13,53,946 ಮತದಾರರಿದ್ದರು. 6305 ಮತದಾರರು ಡಿಲಿಟ್ ಆದರೆ, 24,070 ಮತದಾರರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಇದರಿಂದಾಗಿ ಮತದಾರರ ಸಂಖ್ಯೆ ಕಳೆದ ಬಾರಿಗಿಂತ ಹೆಚ್ಚಾಗಿದೆ. ಒಟ್ಟು ಇದೀಗ ಜಿಲ್ಲೆಯಲ್ಲಿ 13,78,016 ಮತದಾರರಿದ್ದಂತಾಗಿದೆ.