ಸರ್ಕಾರದ ವತಿಯಿಂದ ಮೃತಪಟ್ಟ ಪ್ರತಿ ಕುರಿಗೆ ೭,೫೦೦ ರಂತೆ ನಿಯಮಾನುಸರ ಪರಿಹಾರ ಧನ ದೂರಕಿಸಿಕೊಡುವುದಾಗಿ ಭರವಸೆ ನೀಡಿದ ಶಾಸಕರು.
ಮಾಲೂರು: ತಾಲೂಕಿನ ಅರಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಲಕಂಠ ಅಗ್ರಹಾರ ಗ್ರಾಮದಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿ ೧೩ ಕುರಿಗಳನ್ನು ಕೊಂದಿರುವ ಘಟನೆ ದುರ್ಘಟನೆ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಕೆ.ವೈ.ನಂಜೇಗೌಡ ಅವರು ತಹಸೀಲ್ದಾರ್, ಇಓ ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳೂಂದಿಗೆ ಸ್ಥಳಕ್ಕೆ ಧಾವಿಸಿ ಕುರಿಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಸ್ವಾಂತನ ಹೇಳಿದರು.ಗ್ರಾಮದ ಬಹುತೇಕ ಕುಟುಂಬಗಳು ಹೈನುಗಾರಿಕೆ ಹಾಗೂ ಕುರಿಮೇಕೆ ಸಾಕಣಿಗೆಯನ್ನೇ ನಂಬಿ ಜೀವನ ನಡೆಸುತ್ತಿವೆ. ಈ ಘಟನೆಯಿಂದಾಗಿ ರೈತರಿಗೆ ಹೆಚ್ಚು ತೊಂದರೆಯಾಗಬಾರದು ಎಂದು ತಮ್ಮ ವೈಯಕ್ತಿಕ ವಾಗಿ ಹತ್ತು ಕುರಿ ಕಳೆದುಕೊಂಡ ರೈತನಿಗೆ ೪ ಕುರಿಗಳನ್ನು ಹಾಗೂ ಮೂರು ಕುರಿಗಳನ್ನು ಕಳೆದುಕೊಂಡ ರೈತರಿಗೆ ೧ ಕುರಿಯನ್ನು ತಕ್ಷಣವೇ ವಿತರಿಸಿದರು.
ಇನ್ನೂ ಸರ್ಕಾರದ ವತಿಯಿಂದ ಮೃತಪಟ್ಟ ಪ್ರತಿ ಕುರಿಗೆ ೭,೫೦೦ ರಂತೆ ನಿಯಮಾನುಸರ ಪರಿಹಾರ ಧನ ದೂರಕಿಸಿಕೊಡುವುದಾಗಿ ಭರವಸೆ ನೀಡಿದ ಶಾಸಕರು ಇಲಾಖೆ ಅಧಿಕಾರಿ ಡಾ.ವೀಣಾ ಅವರಿಗೆ ವಿಳಂಬವಿಲ್ಲದೆ ಪರಿಹಾರ ಮೊತ್ತವನ್ನು ಸಂತ್ರಸ್ತ ರೈತರ ಕೈ ಸೇರಿವಂತೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು.ಜತೆಗೆ ಗ್ರಾಮ ಪಂಚಾಯಿತಿ ವತಿಯಿಂದಲೂ ನಿಯಮಾವಳಿಗಳಿಗೆ ಅನುಗುಣವಾಗಿ ಸಾಧ್ಯವಿರುವಷ್ಠು ಹೆಚ್ಚುವರಿ ಪರಿಹಾರ ಒದಗಿಸುವಂತೆ ತಾಲೂಕು ಪಂಚಾಯಿತಿ ಇಒ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರೂಪ, ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಕೃಷ್ಣಪ್ಪ, ಪಶುಪಾಲನಾ ಇಲಾಖೆಯ ಡಾ.ವೀಣಾ ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳಿದ್ದರು.