ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಅಂಗಸಂಸ್ಥೆಯಾಗಿರುವ ಜಮ್‌ಷೆಡ್‌ಪುರದ ಬಾರಿಡಿಹ್ನ ಕ್ಯಾಂಪಸ್‌ನಲ್ಲಿರುವ ಮಣಿಪಾಲ್-ಟಾಟಾ ವೈದ್ಯಕೀಯ ಕಾಲೇಜು (ಎಂಟಿಎಂಸಿ) ಇದರ ತನ್ನ ಪ್ರಥಮ ಘಟಿಕೋತ್ಸವವನ್ನು ಆಚರಿಸಲಾಯಿತು.
2020-2021ರ ಶೈಕ್ಷಣಿಕ ಸಾಲಿನ 133 ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರಥಮ ಬ್ಯಾಚ್ ಯಶಸ್ವಿಯಾಗಿ ಪದವಿ ಪೂರೈಸಿದ್ದು, ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಅವರು ಪದವಿ ಪ್ರದಾನ ಮಾಡಿದರು. ಅವರು ಪ್ರಥಮ ಬ್ಯಾಚ್‌ನ ವೈದ್ಯರು ಬದಲಾಗುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಕೌಶಲ, ಆತ್ಮವಿಶ್ವಾಸ ಮತ್ತು ನೈತಿಕ ಮೌಲ್ಯಗಳನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡಿದ್ದಾರೆ ಎಂಬ ದೃಢ ನಂಬಿಕೆ ನಮಗಿದೆ. ದೇಶ ಹಾಗೂ ವಿದೇಶಗಳ ಆರೋಗ್ಯ ವ್ಯವಸ್ಥೆಗೆ ಮಹತ್ತರವಾದ ಕೊಡುಗೆ ನೀಡಬಲ್ಲ ಸಮರ್ಥ ವೈದ್ಯರನ್ನು ಸಿದ್ಧಪಡಿಸುವುದೇ ನಮ್ಮ ನಿರಂತರ ಗುರಿಯಾಗಿದೆʼ ಎಂದರು.ಸಮಾರಂಭದ ಮುಖ್ಯ ಅತಿಥಿಯಾಗಿ ಜಾರ್ಖಂಡ್‌ನ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು, ‘ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸಾಮಾಜಿಕ ಬದಲಾವಣೆಯ ಶಕ್ತಿಯುತ ಸಾಧನಗಳಾಗಿವೆ. ವೈದ್ಯಕೀಯ ಎಂಬುದು ಕೇವಲ ವೃತ್ತಿಯಲ್ಲ, ಬದಲಿಗೆ ಅದು ಮಾನವ ಕುಲದ ಸೇವೆಯ ದೀಕ್ಷೆ. ಇಂದು ಎಐ, ರೊಬೊಟಿಕ್ಸ್ ಮತ್ತು ಆಧುನಿಕ ಆರೋಗ್ಯ ತಂತ್ರಜ್ಞಾನಗಳು ವೈದ್ಯಕೀಯ ಕ್ಷೇತ್ರವನ್ನು ಸಂಪೂರ್ಣವಾಗಿ ಬದಲಾಯಿಸುತ್ತಿವೆ. ಆದರೆ, ಆರೋಗ್ಯ ರಕ್ಷಣೆಯ ನಿಜವಾದ ಜೀವಾಳ ಇರುವುದು ಸಹಾನುಭೂತಿ, ಪರಸ್ಪರ ನಂಬಿಕೆ ಮತ್ತು ಮಾನವೀಯ ಸಂಬಂಧಗಳಲ್ಲಿ ಮಾತ್ರ ಎಂದು ಅವರು ಅಭಿಪ್ರಾಯಪಟ್ಟರು.ಗೌರವ ಅತಿಥಿಯಾಗಿ ಕೇಂದ್ರ ಗೃಹ ಸಚಿವಾಲಯದ ಹಿರಿಯ ಭದ್ರತಾ ಸಲಹೆಗಾರ ಕೆ. ವಿಜಯ್ ಕುಮಾರ್ ಉಪಸ್ಥಿತರಿದ್ದರು. ಜತೆಗೆ ಟಾಟಾ ಸ್ಟೀಲ್‌ನ ಕಾರ್ಪೊರೇಟ್ ಸೇವೆಗಳ ಉಪಾಧ್ಯಕ್ಷ ಸುಂದರ ರಾಮನ್, ಮಾಹೆ ವಿಶೇಷ ಯೋಜನೆಗಳ ಸಮೂಹ ಅಧ್ಯಕ್ಷ ಹಾಗೂ ವಿಶೇಷ ಕರ್ತವ್ಯಾಧಿಕಾರಿ ಸೋಮನಾಥ್ ದಾಸ್ ಘಟಿಕೋತ್ಸವದಲ್ಲಿ ಭಾಗಿಯಾಗಿದ್ದರು.ಆನ್‌ಲೈನ್ ಮೂಲಕ ವರ್ಚುವಲ್ ಆಗಿ ಜಾರ್ಖಂಡ್ ಸರ್ಕಾರದ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಸಚಿವ ಇರ್ಫಾನ್ ಅನ್ಸಾರಿ ಭಾಗಿಯಾದರು.
ಎಂಟಿಎಂಸಿ ಡೀನ್ ಬ್ರಿಗೇಡಿಯರ್ ಡಾ. ಹರೀಶ್ ಚಂದರ್ ಬಂಧು ಸ್ವಾಗತಿಸಿ, ಮಾಹೆ ಕುಲಸಚಿವ ಡಾ. ಗಿರಿಧರ್ ಕಿಣಿ ವಂದಿಸಿದರು.