ಸಾರಾಂಶ
ಕುವೆಂಪು ವಿವಿಯು ವಿವಿಧ ಮೂಲಗಳಿಂದ ₹135.88 ಕೋಟಿಗಳ ಸ್ವೀಕೃತಿ ನಿರೀಕ್ಷಿಸುತ್ತಿದೆ ಹಾಗೂ 137.74 ಕೋಟಿ ರು.ಗಳ ವೆಚ್ಚಕ್ಕಾಗಿ ನಿಗದಿಗೊಳಿಸಲಾಗಿದೆ. ಸ್ವೀಕೃತಿಯನ್ನು ವೇತನ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವೆಚ್ಚಗಳು ಪರೀಕ್ಷಾ ವೆಚ್ಚಗಳು ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಳಸಲು ಉದ್ದೇಶಿಸಲಾಗಿದೆ. ಒಟ್ಟು 1.85 ಕೋಟಿ ರು.ಗಳ ಕೊರತೆ ಬಜೆಟ್ ಸಿದ್ಧಪಡಿಸಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರವನ್ನು ಕೋರಲು ತೀರ್ಮಾನಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯವು 2024-25 ನೇ ಸಾಲಿಗೆ 137.7 ಕೋಟಿ ರುಪಾಯಿಗಳ ಬಜೆಟ್ ಮಂಡನೆ ಮಾಡಿದೆ.ಕುವೆಂಪು ವಿವಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾ ವಿಷಯಕ ಪರಿಷತ್ ಸಭೆಯಲ್ಲಿ 2024-25 ನೇ ಸಾಲಿನ ಆಯವ್ಯಯ ಮಂಡಿಸಲಾಗಿತ್ತು ₹1.85 ಕೋಟಿಗಳ ಕೊರತೆ ಬಜೆಟ್ ಸಿದ್ಧಪಡಿಸಲಾಗಿದೆ. ಹೊಸ ಯೋಜನೆಗಳ ಬದಲು ಪ್ರಸ್ತುತ ಜಾರಿಯಲ್ಲಿರುವ ಕಾಮಗಾರಿಗಳ ಪೂರ್ಣಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹಣಕಾಸು ಅಧಿಕಾರಿ ಜಿ. ಬಂಗಾರಪ್ಪ ಮಾಹಿತಿ ನೀಡಿದ್ದಾರೆ.
ಕುವೆಂಪು ವಿವಿಯು ವಿವಿಧ ಮೂಲಗಳಿಂದ ₹135.88 ಕೋಟಿಗಳ ಸ್ವೀಕೃತಿ ನಿರೀಕ್ಷಿಸುತ್ತಿದೆ ಹಾಗೂ 137.74 ಕೋಟಿ ರು.ಗಳ ವೆಚ್ಚಕ್ಕಾಗಿ ನಿಗದಿಗೊಳಿಸಲಾಗಿದೆ. ಸ್ವೀಕೃತಿಯನ್ನು ವೇತನ ಶೈಕ್ಷಣಿಕ ಮತ್ತು ಆಡಳಿತಾತ್ಮಕ ವೆಚ್ಚಗಳು ಪರೀಕ್ಷಾ ವೆಚ್ಚಗಳು ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಳಸಲು ಉದ್ದೇಶಿಸಲಾಗಿದೆ. ಒಟ್ಟು 1.85 ಕೋಟಿ ರು.ಗಳ ಕೊರತೆ ಬಜೆಟ್ ಸಿದ್ಧಪಡಿಸಿದ್ದು, ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರವನ್ನು ಕೋರಲು ತೀರ್ಮಾನಿಸಲಾಗಿದೆ.ಸಹ್ಯಾದ್ರಿ ಕಾಲೇಜಿನಲ್ಲಿ 22 ತರಗತಿ ಕೊಠಡಿಗಳ ಪೂರ್ಣಗೊಳಿಸಿದ್ದು ಶೀಘ್ರವೇ ಪಾಠ ಪ್ರವಚನಕ್ಕೆ ಮುಕ್ತಗೊಳಿಸಲಾಗುವುದು. ರೂಸ ಯೋಜನೆ ಅಡಿ ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯ ಪೂರ್ಣಗೊಳಿಸಿದ್ದು ಸದ್ಯದಲ್ಲೇ ಬಳಕೆಗೆ ನೀಡಲಾಗುವುದು. ಈ ವರ್ಷ ನ್ಯಾಕ್ ಸಮಿತಿಯ ನಾಲ್ಕನೇ ಆವೃತ್ತಿಯ ಮೌಲ್ಯಮಾಪನ ಇರುವುದರಿಂದ ಬೋಧನೆ ಮತ್ತು ಸಂಶೋಧನೆಗೆ ಹೆಚ್ಚು ಹೊತ್ತು ನೀಡಲು ವಿವಿ ಶ್ರಮಿಸುತ್ತಿದೆ ಎಂದು ತಿಳಿಸಿದೆ.ಈ ಸಂದರ್ಭ ಸಭೆಯಲ್ಲಿ ವಿವಿಯ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಕುಲಸಚಿವ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್ ಎಂ ಗೋಪಿನಾಥ್ ಹಾಗೂ ವಿದ್ಯಾವಿಷಯಕ ಪರಿಷತ್‌ನ ಸದಸ್ಯರಿದ್ದರು.