ಸಾರಾಂಶ
ಬಿ. ಶೇಖರ್ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರು2025ನೇ ದಸರಾ ಮಹೋತ್ಸವದಲ್ಲೂ ಕ್ಯಾಪ್ಟನ್ ಅಭಿಮನ್ಯು ಆನೆಯೇ ಅಂಬಾರಿ ಹೊರುವುದು ಖಚಿತವಾಗಿದೆ. ಸತತ 5 ಬಾರಿ ಅಂಬಾರಿ ಹೊತ್ತು ತನ್ನ ಸಾಮರ್ಥ್ಯ ಸಾಬೀತುಪಡಿಸಿರುವ ಅಭಿಮನ್ಯು ಆನೆಯು 6ನೇ ಬಾರಿಗೆ ಅಂಬಾರಿ ಹೊರಲು ಸಜ್ಜಾಗಿ ಬರುತ್ತಿದೆ.ಈ ಬಾರಿಯ ದಸರಾ ಮಹೋತ್ಸವಕ್ಕೆ 14 ಆನೆಗಳು ಆಯ್ಕೆಯಾಗಿದ್ದು, ಇದರಲ್ಲಿ ಮೊದಲ ತಂಡದಲ್ಲಿ ಆಗಮಿಸಲಿರುವ 9 ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆಯು ಬಿಡುಗಡೆಗೊಳಿಸಿದೆ. ಮೊದಲ ತಂಡದಲ್ಲಿ 7 ಗಂಡಾನೆ ಮತ್ತು 2 ಹೆಣ್ಣಾನೆಗಳು ಇವೆ. ಮೊದಲ ತಂಡದಲ್ಲಿ ನಾಗರಹೊಳೆಯ ಮತ್ತಿಗೋಡು ಶಿಬಿರದಲ್ಲಿರುವ 59 ವರ್ಷದ ಅಭಿಮನ್ಯು, 25 ವರ್ಷದ ಭೀಮ, ದುಬಾರೆ ಶಿಬಿರದ 53 ವರ್ಷದ ಪ್ರಶಾಂತ್, 44 ವರ್ಷದ ಧನಂಜಯ ಮತ್ತು 24 ವರ್ಷದ ಕಂಜನ್, ಬಳ್ಳೆ ಶಿಬಿರದ 42 ವರ್ಷದ ಮಹೇಂದ್ರ, ದೊಡ್ಡಹರವೆ ಶಿಬಿರದ 40 ವರ್ಷದ ಏಕಲವ್ಯ ಹಾಗೂ ದುಬಾರೆ ಶಿಬಿರದ 45 ವರ್ಷದ ಕಾವೇರಿ (45) ಮತ್ತು ಬಳ್ಳೆ ಶಿಬಿರ 53 ವರ್ಷದ ಲಕ್ಷ್ಮೀ ಆನೆಗಳು ಮೈಸೂರಿಗೆ ಆಗಮಿಸಲಿವೆ.ಎರಡನೇ ತಂಡದಲ್ಲಿ 5 ಆನೆಗಳನ್ನು ಕಾಡಿನಿಂದ ನಾಡಿಗೆ ತಡವಾಗಿ ಬರಲಿದ್ದು, ಆ ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆಯು ಇನ್ನೂ ಪ್ರಕಟಿಸಿಲ್ಲ.ಮೊದಲ ತಂಡಕ್ಕೆ ಆಯ್ಕೆಯಾಗಿರುವ ಬಹುತೇಕ ಆನೆಗಳು ಈ ಹಿಂದೆಯೂ ದಸರಾ ಮಹೋತ್ಸದಲ್ಲಿ ಪಾಲ್ಗೊಂಡಿರುವ ಅನುಭವ ಹೊಂದಿವೆ. ಹೊಸ ಆನೆಗಳು ಯಾವುದೂ ಆಯ್ಕೆಯಾಗಿಲ್ಲ. 2ನೇ ತಂಡಕ್ಕೆ ಹೊಸ ಆನೆಗಳು ಆಯ್ಕೆಯಾಗಿರುವ ಸಾಧ್ಯತೆ ಇದೆ. ಆ.4 ರಂದು ಗಜಪಯಣಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಆ.4 ರಂದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನಹೊಸಳ್ಳಿಯಿಂದ ಗಜಪಯಣ ಆರಂಭಿಸಲಿವೆ. ಗಜಪಯಣಕ್ಕೆ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಚಾಲನೆ ದೊರೆಯಲಿದ್ದು, ನಂತರ ಆನೆಗಳನ್ನು ಮೈಸೂರಿಗೆ ಲಾರಿಗಳ ಮೂಲಕ ಕರೆ ತರಲಾಗುತ್ತದೆ. ಆರೋಗ್ಯ ಪರೀಕ್ಷೆ ಬಳಿಕ ಆಯ್ಕೆಈ ಬಾರಿ ವಿವಿಧ ಆನೆ ಶಿಬಿರಗಳಿಂದ ಆನೆಗಳನ್ನು ಆಯ್ಕೆ ಮಾಡಲು ಆನೆಗಳ ಆರೋಗ್ಯ ತಪಾಸಣೆ ಮಾಡಲಾಯಿತು. ವಿವಿಧ ಆನೆ ಶಿಬಿರಗಳಲ್ಲಿರುವ ಹೆಣ್ಣು ಆನೆಗಳ ಗರ್ಭಾಧಾರಣೆಯ ಪರೀಕ್ಷೆಗಾಗಿ ರಕ್ತಗಳ ಮಾದರಿ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಹಾಗೂ ಫೆಕಲ್ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ನಲ್ಲಿ ಪರೀಕ್ಷೆಗೆ ಒಳವಡಿಸಲಾಯಿತು.ಆನೆಗಳ ಆರೋಗ್ಯ ವರದಿ ಮತ್ತು ಲ್ಯಾಬ್ ವರದಿ ಆಧಾರದ ಮೇಲೆ 14 ಆನೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಮೊದಲ ತಂಡದ 9 ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 2ನೇ ತಂಡದಲ್ಲಿ ಬರಲಿರುವ 5 ಆನೆಗಳ ಪಟ್ಟಿ ಬಿಡುಗಡೆ ಆಗಬೇಕಿದೆ.----ಬಾಕ್ಸ್... ಆನೆಗಳ ಪಟ್ಟಿ1. ಅಭಿಮನ್ಯು, 2. ಪ್ರಶಾಂತ, 3. ಭೀಮ, 4. ಮಹೇಂದ್ರ, 5. ಧನಂಜಯ, 6. ಕಂಜನ್, 7. ಏಕಲವ್ಯ, 8. ಕಾವೇರಿ ಮತ್ತು 9. ಲಕ್ಷ್ಮಿ