ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುರಿಯಾಯಿತಿ ದರದಲ್ಲಿ ಕಬ್ಬಿಣ ಪೂರೈಸುವುದಾಗಿ ವ್ಯಕ್ತಿಯನ್ನು ನಂಬಿಸಿ ಬರೋಬ್ಬರಿ 14 ಲಕ್ಷ 12 ಸಾವಿರ ರುಪಾಯಿಗಳನ್ನು ವಂಚಿಸಿರುವ ಘಟನೆ ನಡೆದಿದೆ.ತುಮಕೂರಿನ ಶಿರಾ ಗೇಟ್ ವಾಸಿ ವಿ.ಆರ್. ರಾಜಣ್ಣ ಎಂಬಾತನೇ ಹಣ ಕಳೆದುಕೊಂಡ ವ್ಯಕ್ತಿ. ಈತ ನಿರ್ಮಿಸುತ್ತಿರುವ ಮನೆಗೆ ಕಬ್ಬಿಣದ ಅಗತ್ಯತೆ ಇತ್ತು. ಹೀಗಾಗಿ ಗೂಗಲ್ ನಲ್ಲಿ ಹುಡುಕಿದಾಗ ಕಂಪನಿ ಹೆಸರೊಂದು ರಿಯಾಯಿತಿ ದರದಲ್ಲಿ ಕಬ್ಬಿಣ ಪೂರೈಸುವ ವಿಷಯ ತಿಳಿಯಿತು. ಅಲ್ಲಿದ್ದ ಮೊಬೈಲ್ ಅನ್ನು ಸಂಪರ್ಕಿಸಿ ಕಬ್ಬಿಣದ ಅಗತ್ಯತೆ ಬಗ್ಗೆ ಹೇಳಿಕೊಂಡಿದ್ದಾರೆ. ಕೂಡಲೇ ಕಂಪನಿಯವರು ಕೊಟೇಶನ್ ಕಳಿಸಿ ಮೊದಲು ಹಣ ಪಾವತಿಸುವಂತೆ ಕೇಳಿದ್ದಾರೆ. ಈತ ಅವರ ಬ್ಯಾಂಕ್ ಖಾತೆಗೆ 14 ಲಕ್ಷ 12 ಸಾವಿರದ 866 ರುಪಾಯಿಯನ್ನು ಕಳುಹಿಸಿದ್ದಾರೆ. ಆದರೆ ಕಬ್ಬಿಣ ಬಾರದಿದ್ದಾಗ ಕಂಪನಿಯವರಿಗೆ ಕರೆ ಮಾಡಿದಾಗ ಅವರು ಟ್ರಾನ್ಸ್ ಫೋರ್ಟ್ ಕಂಪನಿಯ ವಿಳಾಸ ಕೊಟ್ಟಿದ್ದಾರೆ. ಆದರೆ ಅಲ್ಲೂ ಕೂಡ ಸಮರ್ಪಕವಾದ ಮಾಹಿತಿ ದೊರೆಯದ ಕಾರಣ ಮೋಸ ಮಾಡಿದವರನ್ನು ಪತ್ತೆ ಹಚ್ಚುವಂತೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.