ಸಾರಾಂಶ
ಎಸ್ಸಿ 6, ಎಸ್ಟಿ 1, ಹಿಂದುಳಿದ ವರ್ಗ ‘ಅ’ 6, ಹಿಂದುಳಿದ ವರ್ಗ ‘ಬ’ 1, ಸಾಮಾನ್ಯರಿಗೆ 14 ಮೀಸಲು । 5 ತಾಲೂಕು ಪಂಚಾಯಿತಿಯ 81 ಕ್ಷೇತ್ರಗಳ ಪೈಕಿ 42 ಸ್ಥಾನಗಳು ಮಹಿಳೆಯರಿಗೆ ಮೀಸಲು
ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾಯಿತ ಸದಸ್ಯ ಸ್ಥಾನಗಳಿಗೆ ಮೀಸಲು ನಿಗದಿ ಪಡಿಸಿ ರಾಜ್ಯಸರ್ಕಾರ ಅಧಿಸೂಚನೆ ಹೊರಡಿಸಿದ್ದು, ರಾಮನಗರ ಜಿಪಂ,ಯ 28 ಕ್ಷೇತ್ರಗಳ ಪೈಕಿ 14 ಹಾಗೂ ತಾಪಂಯ 81 ಕ್ಷೇತ್ರಗಳ ಪೈಕಿ 42 ಸ್ಥಾನಗಳು ಮಹಿಳೆಯರಿಗೆ ಮೀಸಲಿರಿಸಿ ಆದೇಶಿಸಿದೆ.ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಕ್ಷೇತ್ರಗಳ ಸೀಮಾ / ಗಡಿ ಹಾಗೂ ಚುನಾಯಿತರಾಗಬೇಕಾದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಶಿಫಾರಸ್ಸು ಮಾಡಿರುವ ವರದಿಯನ್ನು ಅಂಗೀಕರಿಸಿರುವ ರಾಜ್ಯ ಸರ್ಕಾರ ಮೀಸಲು ನಿಗದಿಪಡಿಸಿ ಈ ಅಧಿಸೂಚನೆ ಹೊರಡಿಸಿದೆ.
ಜಿಲ್ಲಾ ಪಂಚಾಯಿತಿಯ 28 ಕ್ಷೇತ್ರಗಳ ಪೈಕಿ 14 ಸ್ಥಾನಗಳು ಮಹಿಳೆಯರಿಗೆ ನಿಗದಿ ಮಾಡಲಾಗಿದೆ. ಈ ಪೈಕಿ ಅನುಸೂಚಿತ ಜಾತಿಗೆ ಮೀಸಲಿಟ್ಟಿರುವ 6 ಸ್ಥಾನಗಳಲ್ಲಿ 3 ಮಹಿಳೆಯರಿಗೆ, ಅನುಸೂಚಿತ ಪಂಗಡಕ್ಕೆ ನಿಗದಿಪಡಿಸಿರುವ 1 ಸ್ಥಾನ ಮಹಿಳೆ, ಹಿಂದುಳಿದ ವರ್ಗ ‘ಅ’ ಗೆ ಮೀಸಲಿಟ್ಟಿರುವ 6 ಸ್ಥಾನಗಳಲ್ಲಿ 3 ಮಹಿಳೆ, ಹಿಂದುಳಿದ ವರ್ಗ ‘ಬ’ ಗೆ ನಿಗದಿಪಡಿಸಿರುವ 1 ಸ್ಥಾನ ಮಹಿಳೆಗೆ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿರುವ 14ರಲ್ಲಿ 6 ಸ್ಥಾನ ಮಹಿಳೆಯರಿಗೆ ನಿಗದಿ ಮಾಡಲಾಗಿದೆ.ಅದರಂತೆಯೇ ತಾಪಂ ಕ್ಷೇತ್ರಗಳಿಗೂ ಮೀಸಲಿಗೆ ಅಧಿಸೂಚನೆ ಹೊರಬಿದ್ದಿದ್ದು, ಜಿಲ್ಲೆಯ ಹೊಸ ತಾಲೂಕಾದ ಹಾರೋಹಳ್ಳಿಯ 9 ಕ್ಷೇತ್ರಗಳಲ್ಲಿ 5 ಸ್ಥಾನಗಳನ್ನು ಮಹಿಳೆಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಅನುಸೂಚಿತ ಜಾತಿಗೆ 2, ಇದರಲ್ಲಿ 1 ಮಹಿಳೆ , ಅನುಸೂಚಿತ ಪಂಗಡಕ್ಕೆ 1 ಮಹಿಳೆ , ಹಿಂದುಳಿದ ವರ್ಗ ‘ಅ’ 1 ಮಹಿಳೆ ಹಾಗೂ ಸಾಮಾನ್ಯ ವರ್ಗಕ್ಕೆ ನಿಗದಿ ಪಡಿಸಿರುವ 5ರಲ್ಲಿ 2 ಮಹಿಳೆಗೆ ಮೀಸಲಿಡಲಾಗಿದೆ.
ರಾಮನಗರ ತಾಪಂ.ಗಳ 14 ಕ್ಷೇತ್ರಗಳ ಪೈಕಿ 7 ಸ್ಥಾನಗಳನ್ನು ಮಹಿಳೆಗೆ ನಿಗದಿಪಡಿಸಲಾಗಿದೆ. ಅನುಸೂಚಿತ ಜಾತಿಗೆ 3, ಇದರಲ್ಲಿ 2 ಮಹಿಳೆ , ಅನುಸೂಚಿತ ಪಂಗಡಕ್ಕೆ 1 ಮಹಿಳೆ , ಹಿಂದುಳಿದ ವರ್ಗ ‘ಅ’ 2, ಇದರಲ್ಲಿ 1 ಮಹಿಳೆ, ಹಿಂದುಳಿದ ವರ್ಗ ‘ಬ’ 1 ಮಹಿಳೆ ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿರುವ 7 ಸ್ಥಾನಗಳಲ್ಲಿ 2 ಸ್ಥಾನ ಮಹಿಳೆಗೆ ನಿಗದಿ ಮಾಡಲಾಗಿದೆ.ಮಾಗಡಿ ತಾಲೂಕು ಪಂಚಾಯಿತಿಗಳ 18 ಸ್ಥಾನಗಳ ಪೈಕಿ 9 ಕ್ಷೇತ್ರಗಳು ಮಹಿಳೆಗೆ ಮೀಸಲಿರಿಸಲಾಗಿದೆ. ಅನುಸೂಚಿತ ಜಾತಿಗೆ ನಿಗದಿ ಪಡಿಸಿರುವ 4ರಲ್ಲಿ 2 ಮಹಿಳೆ,ಅನುಸೂಚಿತ ಪಂಗಡಕ್ಕೆ 1 ಮಹಿಳೆ, ಹಿಂದುಳಿದ ವರ್ಗ ‘ಅ’ ಗೆ 3ರಲ್ಲಿ 2 ಮಹಿಳೆ, ಹಿಂದುಳಿದ ವರ್ಗ ‘ಬ’ 1 ಹಾಗೂ ಸಾಮಾನ್ಯ ವರ್ಗಕ್ಕೆ 9ರಲ್ಲಿ 4 ಮಹಿಳೆಯರಿಗೆ ಮೀಸಲಿಡಲಾಗಿದೆ.
ಚನ್ನಪಟ್ಟಣ ತಾಪಂ.ಯ 19ರಲ್ಲಿ 10 ಕ್ಷೇತ್ರಗಳು ಮಹಿಳೆಗೆ ನಿಗದಿಯಾಗಿದೆ. ಅನುಸೂಚಿತ ಜಾತಿಗೆ 4ರಲ್ಲಿ 2 ಮಹಿಳೆ, ಅನುಸೂಚಿತ ಪಂಗಡ 1 ಮಹಿಳೆ , ಹಿಂದುಳಿದ ವರ್ಗ ‘ಅ’ ಗೆ 3 ರಲ್ಲಿ 2 ಮಹಿಳೆ, ಹಿಂದುಳಿದ ವರ್ಗ ‘ಬ’ ಗೆ 1 ಹಾಗೂ ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿರುವ 10 ಕ್ಷೇತ್ರಗಳಲ್ಲಿ 5 ಸ್ಥಾನಗಳನ್ನು ಮಹಿಳೆಗೆ ನಿಗದಿ ಮಾಡಲಾಗಿದೆ.ಕನಕಪುರ ತಾಪಂ.ಯ 21 ಕ್ಷೇತ್ರಗಳ ಪೈಕಿ 11 ಸ್ಥಾನ ಮಹಿಳೆಗೆ ಮೀಸಲಿರಿಸಲಾಗಿದೆ. ಅನುಸೂಚಿತ ಜಾತಿಗೆ 4 ರಲ್ಲಿ 2 ಮಹಿಳೆ , ಅನುಸೂಚಿತ ಪಂಗಡ 1 ಮಹಿಳೆ , ಹಿಂದುಳಿದ ವರ್ಗ ‘ಅ’ ಗೆ 4 ರಲ್ಲಿ 2 ಮಹಿಳೆ, ಹಿಂದುಳಿದ ವರ್ಗ ‘ಬ’ 1 ಮಹಿಳೆ ಹಾಗೂ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿರುವ 11ರಲ್ಲಿ 5 ಸ್ಥಾನ ಮಹಿಳೆಗೆ ಮೀಸಲಿಡಲಾಗಿದೆ.
ಈ ಮೊದಲು ರಾಜ್ಯ ಚುನಾವಣಾ ಆಯೋಗದ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆಯ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ 2 ಜಿಪಂ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾದರೆ, 16 ತಾಪಂ ಕ್ಷೇತ್ರಗಳ ಸಂಖ್ಯೆ ಕಡಿತಗೊಳಿಸಿತ್ತು. ಅಲ್ಲದೆ, ಆಯೋಗ ಕ್ಷೇತ್ರಗಳ ಕರಡು ಮೀಸಲಾತಿಯನ್ನು ಪ್ರಕಟಿಸಿತ್ತು.ಜಿಪಂ ಮತ್ತು ತಾಪಂ ಚುನಾವಣೆಗೆ ಪೂರಕವಾಗಿ ಆಯೋಗವು ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಕ್ಷೇತ್ರದ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಮಾಡಿತ್ತು. ಆದರೆ, ಈ ಪುನರ್ ವಿಂಗಡಣೆ ಕಾರ್ಯ ಸರಿಯಾಗಿ ನಡೆದಿಲ್ಲ ಎಂದು ರಾಜ್ಯ ಸರ್ಕಾರವೇ ಆಕ್ಷೇಪ ವ್ಯಕ್ತಪಡಿಸಿತ್ತು.
ಆನಂತರ ಕಾನೂನು ತಿದ್ದುಪಡಿ ತಂದ ರಾಜ್ಯಸರ್ಕಾರ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆಗೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚನೆ ಮಾಡಿತು.ಈ ಆಯೋಗವು ಹಿಂದಿನ ಜನಗಣತಿಯಲ್ಲಿ ಖಚಿತಪಡಿಸಿದ ಜನಸಂಖ್ಯೆಯ ಆಧಾರದ ಮೇಲೆ ಜಿಪಂ ಮತ್ತು ತಾಪಂಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆ, ಕ್ಷೇತ್ರಗಳ ವಿಂಗಡಣೆ ಹಾಗೂ ಕ್ಷೇತ್ರದ ಗಡಿಗಳನ್ನು ನಿರ್ಧರಿಸಿ ಶಿಫಾರಸ್ಸು ಮಾಡಿತು. ಈ ವರದಿಯನ್ನು ರಾಜ್ಯಸರ್ಕಾರ ಅಂಗೀಕರಿಸಿ ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.ಯಾವ ತಾಲೂಕಿನಲ್ಲಿ ಎಷ್ಟು ಕ್ಷೇತ್ರಗಳು?
ರಾಮನಗರ ಜಿಪಂ.ನಲ್ಲಿ ಮೊದಲು 22 ಕ್ಷೇತ್ರಗಳಿದ್ದವು. ಈಗ ಅದರ ಸಂಖ್ಯೆ 28ಕ್ಕೆ ಹೆಚ್ಚಳವಾಗಿದೆ. ಸೀಮಾ ನಿರ್ಣಯ ಆಯೋಗದ ಮಾರ್ಗದರ್ಶನದಂತೆ ಜಿಲ್ಲಾಡಳಿತ ಜನಸಂಖ್ಯೆಯನ್ನು ಆಧರಿಸಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದೆ. ಅಂದರೆ ಆಯೋಗದ ಸೂಚನೆಯನ್ವಯ ಜಿಲ್ಲಾಡಳಿತ ಹೆಚ್ಚುವರಿ 6 ಕ್ಷೇತ್ರಗಳನ್ನು ಸೇರಿಸಿದೆ. ಹಾರೋಹಳ್ಳಿ, ರಾಮನಗರ, ಮಾಗಡಿ, ಕನಕಪುರ ತಾಲೂಕಿನಲ್ಲಿ ತಲಾ 1 ಹಾಗೂ ಚನ್ನಪಟ್ಟಣ ತಾಲೂಕಿನಲ್ಲಿ 2 ಜಿಪಂ ಕ್ಷೇತ್ರಗಳು ಹೆಚ್ಚಳ ಆಗಿವೆ.ಹಾರೋಹಳ್ಳಿ ತಾಲೂಕಿನಲ್ಲಿ 2 ಜಿಪಂ ಬದಲು 3, ರಾಮನಗರ ತಾಲೂಕಿನಲ್ಲಿ 4 ರಿಂದ 5, ಮಾಗಡಿ ತಾಲೂಕಿನಲ್ಲಿ 5 ರಿಂದ 6, ಚನ್ನಪಟ್ಟಣ ತಾಲೂಕಿನಲ್ಲಿ 5 ರಿಂದ 7 ಹಾಗೂ ಕನಕಪುರ ತಾಲೂಕಿನಲ್ಲಿ 6 ರಿಂದ 7 ಕ್ಷೇತ್ರಗಳ ಗಡಿ ಗುರುತಿಸಲಾಗಿದೆ.
ಇನ್ನು ತಾಪಂ ವಿಚಾರದಲ್ಲಿ ಹಾರೋಹಳ್ಳಿ -9, ರಾಮನಗರ - 14, ಮಾಗಡಿ - 18, ಚನ್ನಪಟ್ಟಣ - 19 ಕ್ಷೇತ್ರ ಹಾಗೂ ಕನಕಪುರದಲ್ಲಿ 21 ಕ್ಷೇತ್ರಗಳನ್ನು ನಿಗದಿ ಪಡಿಸಲಾಗಿದೆ. ರಾಮನಗರ ಜಿಲ್ಲೆಯ ತಾಪಂ ಸದಸ್ಯರ ಹಾಗೂ ()ಆವರಣದಲ್ಲಿರುವುದು ಮಹಿಳೆ ನಿಗದಿ ಸಂಖ್ಯೆತಾಪಂ ಸದಸ್ಯರ ಸಂಖ್ಯೆ, ಜಿಪಂ ಸದಸ್ಯರ ಸಂಖ್ಯೆ.
ಹಾರೋಹಳ್ಳಿ 09(5) 03ರಾಮನಗರ 14 (7) 05
ಮಾಗಡಿ 18 (9) 06ಚನ್ನಪಟ್ಟಣ 19 (10) 07
ಕನಕಪುರ 21 (11) 07----
ಒಟ್ಟು 81 (42) 28 (14)--