ಸಾರಾಂಶ
ಕೊರಟಗೆರೆ: ವಿದ್ಯುತ್ ಸುರಕ್ಷತೆ ಮತ್ತು ಸಂರಕ್ಷಣೆ ಬಗ್ಗೆ ಶಾಲಾ ಮಕ್ಕಳು ತಿಳಿದುಕೊಂಡು ಷೋಷಕರಿಗೂ ಅರಿವು ಮೂಡಿಸುವ ಅಗತ್ಯವಿದೆ ಎಂದು ಬೆಸ್ಕಾಂ ಎಇಇ ಪ್ರಸನ್ನಕುಮಾರ್ ತಿಳಿಸಿದರು.
ಕೊರಟಗೆರೆ: ವಿದ್ಯುತ್ ಸುರಕ್ಷತೆ ಮತ್ತು ಸಂರಕ್ಷಣೆ ಬಗ್ಗೆ ಶಾಲಾ ಮಕ್ಕಳು ತಿಳಿದುಕೊಂಡು ಷೋಷಕರಿಗೂ ಅರಿವು ಮೂಡಿಸುವ ಅಗತ್ಯವಿದೆ ಎಂದು ಬೆಸ್ಕಾಂ ಎಇಇ ಪ್ರಸನ್ನಕುಮಾರ್ ತಿಳಿಸಿದರು.
ತಾಲೂಕಿನ ಕಾಶಾಪುರ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಬೆಸ್ಕಾಂ ಸಿಬ್ಬಂದಿಗಳಿಂದ ವಿದ್ಯುತ್ ಸುಕ್ಷತೆಯ ಬಗ್ಗೆ ಅರಿವು ಹಾಗೂ ಸರ್ಕಾರಿ ಶಾಲೆಯ ೬೦ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿ ವಿತರಣೆ ಮಾಡಿ ಮಾತನಾಡಿದರು. ಇತ್ತೀಚಿಗೆ ವಿದ್ಯುತ್ ಅವಘಡದಲ್ಲಿ ಶಾಲಾ ಮಕ್ಕಳೇ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ವಿದ್ಯುತ್ ಕಂಬ ಹಾಗೂ ತಂತಿಗಳು ಇರುವ ಜಾಗದಲ್ಲಿ ಎಚ್ಚರದಿಂದ ಓಡಾಡಬೇಕು ಎಂದರು. ಬೆಸ್ಕಾಂ ಸಹಾಯಕ ಇಂಜಿನಿಯರ್ ಯೋಗೀಶ್ ಮಾತನಾಡಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಕ್ರಮ ವಿದ್ಯುತ್ ಸಂರ್ಪಕ ತೆಗೆದುಕೊಂಡರೆ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಯಾರಾದರೂ ಅಕ್ರಮ ವಿದ್ಯುತ್ ಸಂರ್ಪಕ ಪಡೆದುಕೊಂಡರೆ ಅಂತರ ಬಗ್ಗೆ ಮಾಹಿತಿ ನೀಡಿ ಎಂದರು. ಈ ವೇಳೆ ಸಂದರ್ಭದಲ್ಲಿ ಬೆಸ್ಕಾಂ ಸಹಾಯಕ ಇಂಜಿನಿಯರ್ ಸುಹಾಸ್, ಜಿಬಿವೂಲ್ಲಾ, ನಾಗರಾಜು, ಮಂಜಣ್ಣ, ಹೇಮಂತ್, ಸೈಯದ್ ಜಮೀಲ್ ಅಹಮದ್, ಮಹಮದ್ ಪಾಷ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ದೇವರಾಜು, ಚಂದ್ರಶೇಖರ್, ಮಲ್ಲಿಕಾರ್ಜುನಯ್ಯ, ರವಿ, ಅನಂದ್, ಕಾಮತರಾಜು, ರಂಗರಾಜು, ಮಂಜುನಾಥ್, ಕೆಂಪರಾಜು, ಜಯಚಂದ್ರ, ಸಂತೋಷ್, ಗಂಗಾಧರ್, ನಾಗರಾಜು, ನರಸೇಗೌಡ, ಆರಾಧ್ಯ, ಚೆನ್ನಕೇಶವ ರೆಡ್ಡಿ, ರಘು, ನರಸಿಂಹಮೂರ್ತಿ ಸೇರಿದಂತೆ ಇತರರು ಇದ್ದರು.ಸಹಾಯಕ ಇಂಜಿನಿಯರ್ ಯೋಗೀಶ್ ಮತ್ತು ಮೀನಾಕ್ಷಿ ಅವರು ಇತ್ತೀಚಿಗೆ ದುಂದು ವೆಚ್ಚ ಇಲ್ಲದೆ ಸರಳವಾಗಿ ಮದುವೆಯಾಗಿ ಸತ್ಯಮಂಗಲದಿಂದ ಬೀರಿನಕಲ್ಲು ಗ್ರಾಮದವರೆಗೂ ಸುಮಾರು ೧೪೦ ಸಸಿ ನೆಟ್ಟಿದ್ದಾರೆ. ಬೆಸ್ಕಾಂ ಸಿಬ್ಬಂದಿಗಳು ಅವರ ಮದುವೆಯ ನೆನಪಿಗಾಗಿ ಕಾಶಾಪುರ ಗ್ರಾಮದ ಸರ್ಕಾರಿ ಶಾಲೆಯ ೬೦ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿ ನೀಡಿ ಮಾದರಿಯಾಗಿದ್ದಾರೆ.- ಪ್ರಸನ್ನಕುಮಾರ್ ಬೆಸ್ಕಾಂ ಎಇಇ ಕೊರಟಗೆರೆ.