ಪತ್ತೆಯಾದ 4.23 ಕೋಟಿ ರು. ಕಳವು ಮಾಲನ್ನು ಹಿಂದಿರುಗಿಸಿದ ನಗರ ಪೊಲೀಸರು

| Published : May 07 2025, 12:45 AM IST

ಪತ್ತೆಯಾದ 4.23 ಕೋಟಿ ರು. ಕಳವು ಮಾಲನ್ನು ಹಿಂದಿರುಗಿಸಿದ ನಗರ ಪೊಲೀಸರು
Share this Article
  • FB
  • TW
  • Linkdin
  • Email

ಸಾರಾಂಶ

ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಡೆದ ಪ್ರಾಪರ್ಟಿ ರಿಟರ್ನ್ ಪೆರೇಡ್‌ನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರುನಗರದ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ದರೋಡೆ ಸೇರಿದಂತೆ 149 ಪ್ರಕರಣಗಳನ್ನು ಪತ್ತೆ ಹಚ್ಚಿರುವ ನಗರ ಪೊಲೀಸರು 4.23 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮಂಗಳವಾರ ಮಾಲೀಕರಿಗೆ ಹಿಂದಿರುಗಿಸಿದರು.ಕಳೆದ 8 ತಿಂಗಳಲ್ಲಿ ಮೈಸೂರಿನ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳನ್ನು ಪತ್ತೆ ಪೊಲೀಸರು ಪತ್ತೆ ಹಚ್ಚಿದರು. ನಗರ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದರು.ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಡೆದ ಪ್ರಾಪರ್ಟಿ ರಿಟರ್ನ್ ಪೆರೇಡ್‌ನಲ್ಲಿ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು. ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಚಿನ್ನಾಭರಣ, ನಗದು ಹಾಗೂ ಇನ್ನಿತರ ವಸ್ತುಗಳನ್ನು ಕಳೆದುಕೊಂಡವರಿಗೆ, ಸ್ವತ್ತುಗಳನ್ನು ಹಸ್ತಾಂತರಿಸಲಾಯಿತು. ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದ ಸೀಮಾ ಲಾಟ್ಕರ್, ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಪ್ರಶಂಸನಾ ಪತ್ರ ವಿತರಿಸಿದರು. ಮೈಸೂರು ನಗರ ಡಿಸಿಪಿಗಳಾದ ಎಂ. ಮುತ್ತುರಾಜ್, ಸುಂದರ್ ರಾಜ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತದ್ದರು.4 ಸುಲಿಗೆ, 2 ದರೋಡೆ, 21 ಸರಗಳ್ಳತನ ಪ್ರಕರಣ, 24 ಕಳ್ಳತನ, 6 ಮನೆಗಳ್ಳತನ ಹಾಗೂ 69 ವಾಹನ ಕಳವು ಸೇರಿದಂತೆ ಒಟ್ಟು 149 ಪ್ರಕರಣಗಳನ್ನು ಪತ್ತೆ ಹಚ್ಚಿದರೆ. ಈ ಎಲ್ಲಾ ಪ್ರಕರಣಗಳಿಂದ ಒಟ್ಟು 4,23,60,000 ಕೋಟಿ ರೂ. ಮೌಲ್ಯದ 5 ಕೆಜಿ 320 ಗ್ರಾಂ ಚಿನ್ನಾಭರಣ, 6 ಕೆಜಿ 246 ಗ್ರಾಂ ಬೆಳ್ಳಿ ಪದಾರ್ಥಗಳು, 52 ದ್ವಿಚಕ್ರ ವಾಹನಗಳು, 9 ಕಾರುಗಳು, 8 ಗೂಡ್ಸ್‌ ವಾಹನ ಸೇರಿದಂತೆ 13,54,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಪ್ರಕರಣಗಳಿಂದ ಪ್ರಮುಖ 20 ಆರೋಪಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಇಬ್ಬರು ಆರೋಪಿಗಳು ಅಂತಾರಾಜ್ಯ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ವಿವರಿಸಿದರು.ಪ್ರಮುಖ ಪ್ರಕರಣಗಳಲ್ಲಿ ಸಿಸಿಬಿ ಘಟಕದಿಂದ ನಾಲ್ವರು ಆರೋಪಿಗಳನ್ನುವಿಚಾರಣೆನಡೆಸಿ, 22 ವಿವಿಧ ಸ್ವತ್ತು ಕಳುವು ಪ್ರಕರಣವನ್ನು ಪತ್ತೆ ಮಾಡಲಾಗಿದ್ದು, ಈ ಪೈಕಿ 62,17,500 ರೂ. ಮೌಲ್ಯದ 802.576 ಗ್ರಾಂ ಚಿನ್ನದ ಆಭರಣಗಳು, 1,520 ಗ್ರಾಂ. ಬೆಳ್ಳಿ ಪದಾರ್ಥ, 5 ವಾಹನ, 1 ಪಿಸ್ತೂಲ್ ಮತ್ತು 2 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.ಸರಸ್ವತಿಪುರಂ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ 5 ಕನ್ನಕಳುವು ಪ್ರಕರಣಗಳನ್ನು ಪತ್ತೆ ಮಾಡಿದ್ದು, 38,82,024 ರೂ. ಮೌಲ್ಯದ 539.17 ಗ್ರಾಂ. ತೂಕದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.ಆಲನಹಳ್ಳಿ ಪೊಲೀಸರು 4 ಆರೋಪಿಗಳು, ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ವಶಕ್ಕೆ ಪಡೆದು 7 ಸರಗಳ್ಳನ ಪ್ರಕರಣ ಪತ್ತೆ ಮಾಡಿ 15 ಲಕ್ಷ ರೂ. ಮೌಲ್ಯದ 190 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ನಜರ್‌ಬಾದ್ ಪೊಲೀಸರು ಓರ್ವ ಆರೋಪಿ ಬಂಧಿಸಿ 11 ವಾಹನ ಕಳುವು ಪ್ರಕರಣ ಪತ್ತೆ ಮಾಡಿದ್ದು 7 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.ಬಾಕ್ಸ್ ಸುದ್ದಿ 25 ಎನ್‌.ಡಿ.ಪಿ.ಎಸ್ ಪ್ರಕರಣಮೈಸೂರು ನಗರ ವ್ಯಾಪ್ತಿಯಲ್ಲಿ ಎನ್‌.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಒಟ್ಟು 25 ಪ್ರಕರಣಗಳು ದಾಖಲಾಗಿದ್ದು, ಒಟ್ಟು 52 ಆರೋಪಿಗಳನ್ನು ಬಂಧಿಸಿ, 57,47,850 ರೂ. ಮೌಲ್ಯದ 224 ಕೆಜಿ 375 ಗ್ರಾಂ. ಗಾಂಜಾ, 96 ಗ್ರಾಂ. 16 ಮಿ.ಗ್ರಾಂ ಸಿಂಥೆಟಿಕ್‌ ಡ್ರಗ್‌ ವಶಕ್ಕೆ ಪಡೆದಿದ್ದಾರೆ. ಜತೆಗೆ ಆನ್‌ ಲೈನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಆನ್‌ ಲೈನ್ ಇನ್ವೆಸ್ಟ್‌ ಮೆಂಟ್ ಫ್ರಾಡ್, ಶೇರ್ ಮಾರ್ಕೆಟ್ 4, ಕೆಲಸ ಕೊಡಿಸುವ ಹಾಗೂ ವಂಚನೆಗೆ ಸಂಬಂಧಿಸಿದಂತೆ 1, ಡಿಜಿಟಲ್ ಅರೆ 1, ಟಿಪ್ಲೈನ್ 1 ಪ್ರಕರಣ ಪತ್ತೆ ಮಾಡಿ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.