ಇಲ್ಲಿನ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್‌ನ ಹಾಸ್ಟೆಲ್‌ನಲ್ಲಿ ಊಟ ಸೇವಿಸಿದ್ದ 15ಕ್ಕೂ ಅಧಿಕ ವಿದ್ಯಾರ್ಥಿನಿಯರು ಭಾನುವಾರ ಅಸ್ವಸ್ಥಗೊಂಡಿದ್ದಾರೆ.
ಹಾವೇರಿ: ಇಲ್ಲಿನ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್‌ನ ಹಾಸ್ಟೆಲ್‌ನಲ್ಲಿ ಊಟ ಸೇವಿಸಿದ್ದ 15ಕ್ಕೂ ಅಧಿಕ ವಿದ್ಯಾರ್ಥಿನಿಯರು ಭಾನುವಾರ ಅಸ್ವಸ್ಥಗೊಂಡಿದ್ದಾರೆ.ಶನಿವಾರ ರಾತ್ರಿ ಹೋಳಿಗೆ, ಅನ್ನ, ಸಾಂಬಾರು ಊಟ ಮಾಡಿದ್ದ ವಿದ್ಯಾರ್ಥಿಗಳು. ಬೆಳಗ್ಗೆಯಿಂದ ಹೊಟ್ಟೆ ನೋವು, ವಾಂತಿ, ಭೇದಿಯಿಂದ ಬಳಲುತ್ತಿದ್ದರು.ಕೂಡಲೇ ಕೆಲ ವಿದ್ಯಾರ್ಥಿಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಒಬ್ಬರ ನಂತರ ಒಬ್ಬರಿಗೆ ಆರೋಗ್ಯ ಸಮಸ್ಯೆ ಉಂಟಾದ ಪರಿಣಾಮ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು.ಹಾಸ್ಟೆಲ್ ಸಿಬ್ಬಂದಿ ನಿರ್ಲಕ್ಷ್ಯ ದಿಂದ ಹೀಗಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.ಕಾಲೇಜು ಪ್ರಾಂಶುಪಾಲ ಎಂ. ಮುನಿರಾಜು ಹಾಗೂ ಇತರ ಸಿಬ್ಬಂದಿ ಆಗಮಿಸಿ, ವಿದ್ಯಾರ್ಥಿಗಳ ಆರೋಗ್ಯ ಪರಿಶೀಲಿಸಿದರು.