ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿ ಗಣೇಶನ ಪ್ರತಿಷ್ಠಾಪಿಸಿ ನೈವೇದ್ಯಕ್ಕೆ 15 ಕೇಜಿ ಲಡ್ಡು ಇಟ್ಟು ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಲಡ್ಡು ಹರಾಜು ಮಾಡುವುದು ಪದ್ಧತಿಯಾಗಿದೆ. ಈ ಹಿನ್ನೆಲೆಯಲ್ಲಿ ಹರಾಜಿನ ಮೂಲಕ ಲಡ್ಡು ಪಡೆದ ಕುಟುಂಬಸ್ಥರೇ ಧನ್ಯರು ಹಾಗೂ ಪುಣ್ಯವಂತರು ಎಂದು ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿ ಗಣೇಶನ ಪ್ರತಿಷ್ಠಾಪಿಸಿ ನೈವೇದ್ಯಕ್ಕೆ 15 ಕೇಜಿ ಲಡ್ಡು ಇಟ್ಟು ವಿಸರ್ಜನೆಯ ಶೋಭಾಯಾತ್ರೆಯಲ್ಲಿ ಲಡ್ಡು ಹರಾಜು ಮಾಡುವುದು ಪದ್ಧತಿಯಾಗಿದೆ. ಈ ಹಿನ್ನೆಲೆಯಲ್ಲಿ ಹರಾಜಿನ ಮೂಲಕ ಲಡ್ಡು ಪಡೆದ ಕುಟುಂಬಸ್ಥರೇ ಧನ್ಯರು ಹಾಗೂ ಪುಣ್ಯವಂತರು ಎಂದು ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಹೇಳಿದ್ದಾರೆ. ಪೀಣ್ಯ ಎರಡನೇ ಹಂತದ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿ ವತಿಯಿಂದ 18 ಅಡಿ ಎತ್ತರದ ಗಣೇಶ ಮೂರ್ತಿಯ ಪ್ರಸಾದವಾದ 15 ಕೇಜಿ ಲಡ್ದು ಜೊತೆಗೆ ಕಾಲು ಕೇಜಿ ಬೆಳ್ಳಿಯ ಗಣೇಶ ವಿಗ್ರಹವನ್ನು ಉದ್ಯಮಿ ಮತ್ತು ಚೊಕ್ಕಸಂದ್ರ ವಾರ್ಡ್ ಬಿಜೆಪಿ ಮುಖಂಡರಾದ ಮುನಿರತ್ನಮ್ಮ ಲಾರಿ ಮುನಿರಾಜು 15 ಲಕ್ಷದ ಹರಾಜಿನಲ್ಲಿ ಖರೀದಿಸಿದರು. ಬಳಿಕ ಮಾತನಾಡಿದ ಅವರು, ಎಷ್ಟೇ ಲಕ್ಷವಾದರೂ ಲಡ್ಡು ಪಡೆಯಲೆಬೇಕೆಂದು ಸಂಕಲ್ಪ ಮಾಡಿದ್ದೆ. ಗಣೇಶನ ಮೇಲೆ ಇಟ್ಟಿರುವ ಶ್ರದ್ಧೆ, ಭಕ್ತಿಗೋಸ್ಕರ ಮತ್ತು ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಹಾಗೂ ಕ್ಷೇತ್ರದ ಜನತೆಯ ಶ್ರೇಯಸ್ಸಿಗಾಗಿ ಲಡ್ಡು ಖರೀದಿಸಿದ್ದೇನೆ ಎಂದರು.

ಶೋಭಾಯಾತ್ರೆಯು ಜಿ.ಕೆ.ಡಬ್ಲ್ಯು ಲೇಔಟ್‌ನ ಆಟದ ಮೈದಾನದಿಂದ ಪ್ರಾರಂಭವಾಗಿ ಪೀಣ್ಯ ಎರಡನೇ ಹಂತ, ರಾಜಗೋಪಲನಗರ, ಎನ್.ಟಿ.ಟಿ.ಎಫ್ ನೆಲಗದರಹಳ್ಳಿ ಮೂಲಕ ಚೊಕ್ಕಸಂದ್ರದ ಕೆರೆ ಹತ್ತಿರ ವಿಸರ್ಜಿಸಲಾಯಿತು. ಈ ವೇಳೆ ಸೂರಜ್ ಪೌಂಡೇಷನ್ ಸಂಸ್ಥಾಪಕಿ ಸುಜಾತ ಮುನಿರಾಜು, ಅನಿಲ್ ಕುಮಾರ್ ಗುರುನಿಶ್ಚಲ್, ಸ್ವಪ್ನ ಅನಿಲ್, ರೇಷ್ಮಾ ಮುನಿರಾಜು, ಲಕ್ಷಣ್ ಗೌಡ್ರು, ಬಿಜೆಪಿ ಮಂಡಲ ಅಧ್ಯಕ್ಷ ಸೋಮಶೇಖರ್, ಯುವ ಮೋರ್ಚಾ ಅಧ್ಯಕ್ಷ ಸೌಂದರ್ಯ ಭರತ್‌, ಬಿಜೆಪಿ ಮುಖಂಡರಾದ ಜಿ.ಗುರುಪ್ರಸಾದ್, ಬಿ.ಆರ್.ಸತೀಶ್, ದಯಾನಂದ್, ಲಕ್ಷ್ಮಿವೆಂಕಟೇಶ್, ಜೆ.ವಿ.ಎಸ್.ಸತೀಶ್, ಬೆಲ್ಮಾರ್ ಸುರೇಶ್, ವಿಜಯ್ ಕುಮಾರ್, ರಾಧಾಕೃಷ್ಣ ಡಿ ವೆಂಕಿ, ವಿನೋದ್ ಗೌಡ , ಎಚ್.ಎನ್. ಗಂಗಾದರ್, ಸಪ್ತಗಿರಿ ಅನಂದ್, ದಿನೇಶ್, ನಾಗೇಶ್, ಸಪ್ತಗಿರಿ ಮಂಜುನಾಥ್ ಇದ್ದರು.