ಸನ್ಮಾನ ಸ್ವೀಕರಿಸುವ ವೃದ್ಧೆಯರಿಗೆ ಸೀರೆ, ಕುಪ್ಪಸ ಮತ್ತು ವೃದ್ಧರಿಗೆ ಧೋತರ, ಪಟಗಾ ವಿತರಿಸಿ ಗೌರವಿಸಲಾಗುವುದು.
ರೋಣ: ಶ್ರೀ ಗುರು ಬಸವೇಶ್ವರ ಸರಳ ಸಜ್ಜನಿಕೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಮಿಟಿ ವತಿಯಿಂದ ಶಾಸಕ ಜಿ.ಎಸ್.ಪಾಟೀಲ ಅವರ 79ನೇ ಜನ್ಮದಿನದ ಅಂಗವಾಗಿ 70 ವರ್ಷ ಮೇಲ್ಪಟ್ಟ 150 ವೃದ್ಧರಿಗೆ ಸನ್ಮಾನ ಸಮಾರಂಭ ಏ. 4ರಂದು ಸಾಯಂಕಾಲ 4 ಗಂಟೆಗೆ ಸಿದ್ಧಾರೂಢ ಮಠದ ಆವರಣದಲ್ಲಿ ಜರುಗಲಿದೆ ಎಂದು ಶ್ರೀಗುರು ಬಸವೇಶ್ವರ ಸರಳ ಸಜ್ಜನಿಕೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಲ್ಲಯ್ಯ ಗುರುಬಸಪ್ಪನಮಠ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸನ್ಮಾನ ಸ್ವೀಕರಿಸುವ ವೃದ್ಧೆಯರಿಗೆ ಸೀರೆ, ಕುಪ್ಪಸ ಮತ್ತು ವೃದ್ಧರಿಗೆ ಧೋತರ, ಪಟಗಾ ವಿತರಿಸಿ ಗೌರವಿಸಲಾಗುವುದು.ಬಾಗಲಕೋಟೆ ಜಿಲ್ಲೆಯ ಅಮ್ಮಿನಗಡದಿಂದ ಆಂಧ್ರದ ಶ್ರೀಶೈಲದವರೆಗೆ ಮರಗಾಲು ಕಟ್ಟಿಕೊಂಡು ಪಾದಯಾತ್ರೆ ಕೈಗೊಂಡ ಬಸವಪ್ರಿಯಾ, ಚಿನ್ಮಯ, ತತ್ವಪದಗಳನ್ನು ಜೀವಂತವಾಗಿರುವಲ್ಲಿ ಶ್ರಮಿಸುತ್ತಿರುವ 75 ವಯಸ್ಸಿನ ಹಿರಿಯ ಕಲಾವಿದ ಹನುಮಂತಪ್ಪ ಚನ್ನದಾಸರ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಕೊತಬಾಳ ಅಂಕಲಗಿ ಅಡವಿಸಿದ್ದೇಶ್ವರ ಮಠದ ಗಂಗಾಧರ ಸ್ವಾಮೀಜಿ, ಖಾದ್ರಿ ದರ್ಗಾದ ಹಜರತ್ ಸೈಯದ್ ಶಾ ಸುಲೇಮಾಮ ಶಾವಲಿ ಅವರು ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ರಾಜ್ಯ ಖನಿಜ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ವಹಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀಗುರು ಬಸವೇಶ್ವರ ಸರಳ ಸಜ್ಜನಿಕೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮುಂದುವರಿದ ಸಿಲಿಂಡರ್‌ಗಾಗಿ ಪರದಾಟನರಗುಂದ: ಪಟ್ಟಣದಲ್ಲಿ ಹಲವು ದಿನಗಳಿಂದ ಗ್ರಾಹಕರು ಸಿಲಿಂಡರಗಳನ್ನು ಪಡೆದುಕೊಳ್ಳಲು ಹರಸಾಹಸ ಪಡಬೇಕಾದ ಸ್ಥಿತಿ ಮುಂದುವರಿದಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾದಾಗಿನಿಂದ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.ತಾಲೂಕಿನ ಜನರು ಶುಕ್ರವಾರ ಬೆಳಗ್ಗೆ ಅನಿಲ ಸಿಲಿಂಡರ್ ಪಡೆಯಲು ಪಟ್ಟಣದ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿ ಮುಂದೆ ಸರದಿ ಸಾಲಿನಲ್ಲಿ ಬಿಸಿಲನ್ನು ಲೆಕ್ಕಿಸದೆ ನಿಂತಿದ್ದರು.ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿಗೆ ಶುಕ್ರವಾರ 500 ಸಿಲಿಂಡರಗಳು ಪೂರೈಕೆಯಾಗಿದ್ದವು. ಅದರಲ್ಲಿ 400 ಸಿಲಿಂಡರಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ ಎಂದು ಗ್ಯಾಸ್ ಏಜೆನ್ಸಿ ಮಾಲೀಕರು ತಿಳಿಸಿದರು.
ಕೊಣ್ಣೂರಿನ ಭಾರತ ಗ್ಯಾಸ್ ಏಜೆನ್ಸಿಯಲ್ಲಿ 165 ಸಿಲಿಂಡರಗಳನ್ನು ಗ್ರಾಹಕರಿಗೆ ವಿತರಣೆ ಮಾಡಲಾಗಿದೆ ಎಂದು ಮಾಲೀಕರು ಮಾಹಿತಿ ನೀಡಿದರು.