ಧರ್ಮಸ್ಥಳ ಯೋಗ, ನೈತಿಕ ಶಿಕ್ಷಣ ಯೋಜನೆಯಿಂದ 16 ಲಕ್ಷ ಪುಸ್ತಕ ವಿತರಣೆ

| Published : Dec 04 2024, 12:33 AM IST

ಧರ್ಮಸ್ಥಳ ಯೋಗ, ನೈತಿಕ ಶಿಕ್ಷಣ ಯೋಜನೆಯಿಂದ 16 ಲಕ್ಷ ಪುಸ್ತಕ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಧರ್ಮಸ್ಥಳದ ಯೋಗ ಮತ್ತು ನೈತಕ ಶಿಕ್ಷಣ ಯೋಜನೆಯಡಿ ಶಾಂತಿ ವನ ಟ್ರಸ್ಟ್‌ನಿಂದ ಕಳೆದ 30 ವರ್ಷದಿಂದ 16 ಲಕ್ಷ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಧರ್ಮಸ್ಥಳ ಶಾಂತಿವನ ಟ್ರಸ್ಟ್‌ ನ ಮುಖ್ಯಸ್ಥ ಶಶಿಕಾಂತ್ ಜೈನ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಧರ್ಮಸ್ಥಳದ ಯೋಗ ಮತ್ತು ನೈತಕ ಶಿಕ್ಷಣ ಯೋಜನೆಯಡಿ ಶಾಂತಿ ವನ ಟ್ರಸ್ಟ್‌ನಿಂದ ಕಳೆದ 30 ವರ್ಷದಿಂದ 16 ಲಕ್ಷ ಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಧರ್ಮಸ್ಥಳ ಶಾಂತಿವನ ಟ್ರಸ್ಟ್‌ ನ ಮುಖ್ಯಸ್ಥ ಶಶಿಕಾಂತ್ ಜೈನ್‌ ತಿಳಿಸಿದರು.

ಸೋಮವಾರ ಸಿಂಹನಗದ್ದೆ ಬಸ್ತಿಮಠದಲ್ಲಿ ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಶಾಂತಿವನ ಟ್ರಸ್ಠ್‌ ನಿಂದ ಜಿಲ್ಲಾ ಮಟ್ಟದ 5 ರಿಂದ 10 ನೇ ತರಗತಿ ಮಕ್ಕಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಮಕ್ಕಳಿಗೂ ಸಂಸ್ಕಾರ ನೀಡಬೇಕು ಎಂಬುದೇ ಈ ಸ್ಪರ್ಧೆಗಳ ಉದ್ದೇಶ. ಮನುಷ್ಯ ಜನ್ಮಕ್ಕೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ಜ್ಞಾನ ದರ್ಶನಿ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಜ್ಞಾನ ವರ್ಷಿಣಿ ಎಂಬ ಪುಸ್ತಕಗಳನ್ನು ಮೊದಲೇ ನೀಡಿರುತ್ತೇವೆ ಎಂದರು.

ಪುಸ್ತಕದಲ್ಲಿ ಇರುವ ವಿಷಯಗಳ ಬಗ್ಗೆ ಪ್ರಬಂಧ , ಶ್ಲೋಕ ವಾಚನ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆ ನಡೆಸಲಾಗುತ್ತದೆ. ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸ್ಪರ್ಧೆ ಮುಗಿಸಿದ್ದೇವೆ. ಅಲ್ಲಿ ಗೆದ್ದವರು ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಎಲ್ಲಾ ಸ್ಪರ್ಧೆಗಳಿಗೆ ಶಿಕ್ಷಣ ಇಲಾಖೆಯರು ಸಹಕಾರ ನೀಡುತ್ತಿದ್ದಾರೆ. ಬಸ್ತಿಮಠದಲ್ಲಿ ಕಳೆದ 10 ವರ್ಷದಿಂದಲೂ ಕಾರ್ಯ ಕ್ರಮ ನಡೆಸುತ್ತಿದ್ದೇವೆ ಎಂದರು.

ಅತಿಥಿಯಾಗಿದ್ದ ತಾಲೂಕು ಭಡ್ತಿ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅಶೋಕ್‌ ಮಾತನಾಡಿ, ಇಂದಿನ ಶಿಕ್ಷಣದಲ್ಲಿ ನೈತಿಕತೆ ಅಗತ್ಯವಾಗಿದೆ. ಆತ್ಮ ತೃಪ್ತಿಗಾಗಿ, ಸಮಾಜಕ್ಕೆ ಉಪಯೋಗವಾಗುವ ರೀತಿಯಲ್ಲಿ ಬದುಕಲು ನೈತಿಕತೆ ಬೇಕಾಗಿದೆ ಎಂದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಮಾತನಾಡಿ, ನಮ್ಮ ಪೂರ್ವಜನರು ಸಂಸ್ಕಾರವಂತರಾಗಿ ಬದುಕುತ್ತಿದ್ದರು. ಆದರೆ, ಈಗಿನ ಪೀಳಿಗೆ ಕೇವಲ ಹಣ, ಅಂತಸ್ಥಿಗಾಗಿ ಮಾನವೀಯತೆ ಮರೆತು ಬದುಕುತ್ತಿದ್ದಾರೆ. ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಜಾನಾಯಕ್‌, ಇಸಿಒ ರಂಗಪ್ಪ ಇದ್ದರು. ಆರ್‌.ನಾಗರಾಜ್‌, ಗುಣಪಾಲ್‌ ಜೈನ್‌ , ತಿಮ್ಮೇಶಪ್ಪ ಇದ್ದರು.