ಇಂದಿನಿಂದ ಶ್ರೀ ವಿದ್ಯಾನಿಧಿ ತೀರ್ಥರ ೧೬೦ನೇ ಆರಾಧನಾ ಮಹೋತ್ಸವ

| Published : Mar 30 2024, 12:46 AM IST

ಇಂದಿನಿಂದ ಶ್ರೀ ವಿದ್ಯಾನಿಧಿ ತೀರ್ಥರ ೧೬೦ನೇ ಆರಾಧನಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹುಣಶಿಹೊಳೆಯ ಕಣ್ವಮಠದ ಪೀಠಾಧಿಕಾರಿ ಶ್ರೀಶ್ರೀಶ್ರೀ ೧೦೦೮ ಶ್ರೀ ವಿದ್ಯಾಕಣ್ವವಿರಾಜ ತೀರ್ಥ ಶ್ರೀ ಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರೀಮನ್ ಮಾಧವತೀರ್ಥ ಮೂಲ ಮಹಾ ಸಂಸ್ಥಾನಮ್ ಶ್ರೀಮತ್ ಕಣ್ವಮಠ(ವೀರಘಟ್ಟ) ಮಹಾ ಸಂಸ್ಥಾನ ಹುಣಸಿಹೊಳೆ ಇವರ ಪರಂಪರೆಯಲ್ಲಿ ೪ನೇ ಪೀಠಸ್ಥರಾದ ಶ್ರೀವಿದ್ಯಾನಿಧಿ ತೀರ್ಥರ ೧೬೦ನೇ ಆರಾಧನಾ ಮಹೋತ್ಸವ ತಾಲೂಕಿನ ಬಿಳೇಭಾವಿ ಗ್ರಾಮದಲ್ಲಿ ಮಾ.೩೦ರಿಂದ ಏ.೧ರವರೆಗೆ ಜರುಗಲಿದೆ.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಮಾ.೩೦ರಂದು ಪೂರ್ವಾರಾಧನೆ ನಿಮಿತ್ತ ಬೆಳಿಗ್ಗೆ ೫ ಗಂಟೆಗೆ ಸುಪ್ರಭಾತ ಧರ್ಮ ದ್ವಜಾರೋಹಣ ವೇದಘೋಷ ಯತಿಗಳ ವೃಂದಾವನಗಳಿಗೆ ಅಭಿಷೇಕ ಅಲಂಕಾರ, ತೀರ್ಥ ಪ್ರಸಾದ ಹಾಗೂ ಮಂಗಳಾರತಿ ಜರುಗುವುದು. ಮಾ.೩೧ರಂದು ಮಧ್ಯಾರಾಧನೆ ನಿಮಿತ್ತ ಸುಪ್ರಭಾತ, ವೇದಘೋಷ, ವೃಂದಾವನಗಳಿಗೆ ಅಭಿಷೇಕ ಅಲಂಕಾರ, ಲಕ್ಷ ಪುಷ್ಪಾರ್ಚನೆ, ಶ್ರೀಮತಿ ಅನುಪಮಾ ಅಂಬಾದಾಸ ಜೋಶಿ ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ. ನಂತರ ಧರ್ಮಾಚರಣೆ ಕುರಿತು ಶ್ರೀ ನೀಲಕಂಠರಾವ್ ತಲೇಖಾನ ಇವರಿಂದ ಅನಿಸಿಕೆ, ಶ್ರೀ ಶುಕ್ಲ ಯಜುರ್ವೇದ ಪರಂಪರೆಯ ಶ್ರೀಮತ್ ಕಣ್ವಮಠದ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ ೧೦೦೮ ಶ್ರೀ ವಿದ್ಯಾಕಣ್ವ ವಿರಾಜತೀರ್ಥರಿಂದ ಸಂಸ್ಥಾನಪೂಜೆ, ಶ್ರೀಗಳಿಂದ ಅನುಗ್ರಹ ಸಂದೇಶ, ಮಹಾ ಮಂಗಳಾರತಿ ತೀರ್ಥ ಪ್ರಸಾದ ಜರುಗಲಿದೆ. ಅಲ್ಲದೇ ತಾಳಿಕೋಟೆಯ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ, ಶ್ರೀ ಗಾಯತ್ರಿ ಭಜನಾ ಮಂಡಳಿ ಇವರಿಂದ ನಾಮ ಸಂಕೀರ್ತನೆ, ಮಹಾ ಮಂಗಳಾರತಿ ಜರುಗಲಿದೆ.

ಏ.೧ರಂದು ಉತ್ತರಾರಾಧನೆ ನಿಮಿತ್ತವಾಗಿ ಸುಪ್ರಭಾತ, ವೇದಘೋಷ, ವೃಂದಾವನಗಳಿಗೆ ಅಭಿಷೇಕ ಅಲಂಕಾರ, ತೀರ್ಥ ಪ್ರಸಾದ ಜರುಗಲಿದೆ ಎಂದು ಶ್ರೀ ಅಕ್ಷೆಭ್ಯತೀರ್ಥರು ಹಾಗೂ ಶ್ರೀ ವಿದ್ಯಾನಿಧಿ ತೀರ್ಥರ ಸೇವಾ ಸಮಿತಿ ಪ್ರಕಟನೆ ಮೂಲಕ ತಿಳಿಸಿದೆ.