ಸಾರಾಂಶ
ರಾಮನಗರ: ಕೇಂದ್ರ ಸರ್ಕಾರದ ನೆರವಿನೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ಜಿಲ್ಲೆಯಲ್ಲಿ ಹೊಸದಾಗಿ 163 ''''''''ಗ್ರಾಮ ಗ್ರಂಥಾಲಯ''''''''ಗಳನ್ನು ತೆರೆಯಲು ಮುಂದಾಗಿದೆ.
ಈಗಾಗಲೇ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗೆ ಒಂದರಂತೆ ಗ್ರಂಥಾಲಯ ಸ್ಥಾಪಿಸಿದೆ. ಅವುಗಳ ಜತೆಗೆಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ನೀಡುವ ಹಣಕಾಸು ನೆರವು ಯೋಜನೆಯ (ಎಸ್‌ಎಎಸ್‌ಸಿಐ) ''''''''ಮಕ್ಕಳು ಮತ್ತು ಹದಿಹರೆಯದವರಿಗಾಗಿ ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ'''''''' ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ''''''''ಗ್ರಾಮ ಗ್ರಂಥಾಲಯ''''''''ಗಳನ್ನು ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಪ್ರತಿ ಗ್ರಂಥಾಲಯಕ್ಕೆ ತಲಾ 2 ಲಕ್ಷ ಮೊತ್ತದ ಪುಸ್ತಕಗಳನ್ನು ''''''''ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ''''''''ದಿಂದ ಖರೀದಿಸಲಾಗಿದ್ದು, ಜಿಲ್ಲಾ ಪಂಚಾಯಿತಿಗೆ ಪುಸ್ತಕಗಳು ಸರಬರಾಜಾಗಿವೆ. 2,040 ಕನ್ನಡ, 627 ಇಂಗ್ಲಿಷ್ ಹಾಗೂ 20 ಕಲಿಕಾ ವಿಜ್ಞಾನ ಪುಸ್ತಕಗಳು ಸೇರಿ ಒಟ್ಟು 2,687 ಕೃತಿಗಳು ಪ್ರತಿ ಗ್ರಂಥಾಲಯಕ್ಕೆ ಶೀಘ್ರದಲ್ಲೇ ಹಂಚಿಕೆಯಾಗಲಿವೆ.ಮಕ್ಕಳ ಕತೆ, ವಿಜ್ಞಾನ ಮತ್ತು ವೈಜ್ಞಾನಿಕ ಚಟುವಟಿಕೆ, ಜೀವನ ಚರಿತ್ರೆ, ಮಕ್ಕಳು ಮತ್ತು ಸಮುದಾಯಕ್ಕಾಗಿ ಚಟುವಟಿಕೆಗಳು ಸೇರಿದಂತೆ ವೈವಿಧ್ಯಮಯ ವಿಷಯಗಳ ಪುಸ್ತಕಗಳು ಗ್ರಂಥಾಲಯಗಳಿಗೆ ಸಿಗಲಿವೆ. ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಮತ್ತು ಡಿಜಿಟಲ್ ಕೌಶಲ ಬೆಳೆಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಗ್ರಂಥಾಲಯಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಒದಗಿಸುತ್ತದೆ.
ಮಕ್ಕಳು ಮತ್ತು ಹದಿಹರೆಯದವರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಗ್ರಂಥಾಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಡಿಜಿಟಲೀಕರಣ ಹಾಗೂ ಮೂಲಸೌಲಭ್ಯಕ್ಕೆ ಕೇಂದ್ರ ಸರ್ಕಾರ ನೆರವು ನೀಡಲಿದ್ದು, ಈಗಾಗಲೇ ಯಾವ ಗ್ರಾಮಗಳಲ್ಲಿ ಈ ಗ್ರಂಥಾಲಯಗಳು ಆರಂಭವಾಗಬೇಕು ಎನ್ನುವ ಪಟ್ಟಿಗೆ ಅನುಮೋದನೆ ಸಹ ದೊರೆತಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.ಕಂಪ್ಯೂಟರ್, ಪೀಠೋಪಕರಣ:
ನೂತನ ಗ್ರಾಮ ಗ್ರಂಥಾಲಯಗಳಿಗೆ 1 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಮತ್ತು ಯುಪಿಎಸ್ ಹಾಗೂ 1 ಲಕ್ಷ ವೆಚ್ಚದಲ್ಲಿ ಪಿಠೋಪಕರಣಗಳ ಸೌಲಭ್ಯಗಳು ದೊರಕಲಿವೆ. ಪೀಠೋಪಕರಣಗಳನ್ನು ಖರೀದಿಸಲು ಪಂಚಾಯತ್ ರಾಜ್ ಆಯುಕ್ತಾಲಯದಿಂದ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಆಗಲಿದೆ.ಕಟ್ಟಡಗಳ ನವೀಕರಣ:
ಹೊಸ ಗ್ರಂಥಾಲಯಗಳಿಗೆ ಗುರುತಿಸಲಾದ ಕಟ್ಟಡಗಳಿಗೆ ಅಗತ್ಯವಿರುವ ದುರಸ್ತಿ, ನವೀಕರಣ, ವಿದ್ಯುತ್ ಮತ್ತು ಇಂಟರ್‌ನೆಟ್ ಸಂಪರ್ಕ, ಕುಡಿಯುವ ನೀರು, ಫ್ಯಾನ್ ಸೇರಿ ಮೂಲಸೌಲಭ್ಯಗಳನ್ನು ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲದಿಂದ ಅಥವಾ ಲಭ್ಯವಿರುವ ಇತರೆ ಅನುದಾನಗಳನ್ನು ಬಳಸಿ ಕಲ್ಪಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶಿಸಿದೆ.ಬಾಕ್ಸ್.....
ಎರಡು ದಿನ 4 ಗಂಟೆ ಕಾರ್ಯನಿರ್ವಹಣೆ:ವಸತಿ ಪ್ರದೇಶಗಳ ಹತ್ತಿರದಲ್ಲಿ ಕಟ್ಟಡ ಗುರುತಿಸಲು ಸೂಚಿಸಲಾಗಿದೆ. ಹೊಸದಾಗಿ ಪ್ರಾರಂಭಿಸಲಾಗುವ ಗ್ರಂಥಾಲಯವು ಪ್ರತಿ ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಕನಿಷ್ಟ 4 ಗಂಟೆ ಅವಧಿಗೆ ಕಾರ್ಯನಿರ್ವಹಿಸಬೇಕು. ಈ ಗ್ರಂಥಾಲಯಗಳನ್ನು ಜಿಪಿಎಲ್ ಎಫ್ ಅಡಿಯ ಸ್ವ ಸಹಾಯ ಸಂಘ ನಿರ್ವಹಿಸಬೇಕು. ಯಾವುದೇ ಹೊಸ ಸಿಬ್ಬಂದಿ ನೇಮಕಕ್ಕೆ ಅವಕಾಶವಿಲ್ಲ. ಉಸ್ತುವಾರಿ ನೋಡಿಕೊಳ್ಳುವ ಈ ಸ್ವ ಸಹಾಯ ಸಂಘಕ್ಕೆ ದಿನವೊಂದಕ್ಕೆ 350 ರು.ಗಳಂತೆ ಗ್ರಾಮ ಪಂಚಾಯಿತಿಯ ಸ್ವಂತ ಸಂಪನ್ಮೂಲದಿಂದ ಪಾವತಿಸಲು ಸೂಚಿಸಲಾಗಿದೆ.
ಮುಖ್ಯ ಶಿಕ್ಷಕರಿಗೆ ಕೀಲಿಕೈ:ಶಾಲಾ ಕಟ್ಟಡದಲ್ಲಿ ಗ್ರಂಥಾಲಯಕ್ಕೆ ಕಟ್ಟಡ ಗುರುತಿಸಿದ್ದರೆ ಎಸ್‌ಡಿಎಂಸಿ ಮೂಲಕ ಒಪ್ಪಿಗೆ ಪತ್ರವನ್ನು ಗ್ರಾಮ ಪಂಚಾಯಿತಿ ಪಡೆಯಬೇಕು. ಅಲ್ಲದೆ ಗ್ರಂಥಾಲಯ ಶಾಲಾ ಕೊಠಡಿಯಲ್ಲಿ ಪ್ರಾರಂಭಿಸಿದರೆ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಶಾಲಾ ಮಕ್ಕಳು ಗ್ರಂಥಾಲಯ ಬಳಸಲು ಅನುಕೂಲವಾಗುವಂತೆ ಗ್ರಂಥಾಲಯದ ಕೀಲಿಕೈಯನ್ನು ಶಾಲೆ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಬೇಕು.
ಸಮುದಾಯ ಭವನ ಅಥವಾ ಇತರೆ ಯಾವುದೇ ಸರ್ಕಾರಿ/ಸಾರ್ವಜನಿಕ ಕಟ್ಟಡ ಗುರುತಿಸಿದ್ದಲ್ಲಿ ಮತ್ತು ಗ್ರಾಮ ಪಂಚಾಯಿತಿಯು ಸದರಿ ಕಟ್ಟಡದ ಮಾಲೀಕತ್ವ ಹೊಂದಿಲ್ಲದೇ ಇದ್ದಲ್ಲಿ ಅಂತಹ ಕಟ್ಟಡದ ಮಾಲೀಕತ್ವ ಹೊಂದಿರುವ ವ್ಯಕ್ತಿ/ಸಂಸ್ಥೆಯಿಂದ ಗ್ರಂಥಾಲಯ ಪ್ರಾರಂಭಿಸಲು ಲಿಖಿತ ಅನುಮತಿಪಡೆಯಬೇಕು. ಕಟ್ಟಡಕ್ಕೆ ಅಗತ್ಯವಿರುವ ದುರಸ್ತಿ, ನವೀಕರಣ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಮ್ಯಾನ್ ವೆಚ್ಚಗಳನ್ನು ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲದಿಂದ ಭರಿಸುವಂತೆ ನಿರ್ದೇಶನ ನೀಡಲಾಗಿದೆ.ಕೋಟ್ ................
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 163 ಗ್ರಾಮ ಗ್ರಂಥಾಲಯಗಳು ಮಂಜೂರಾಗಿದ್ದು, ಈಗಾಗಲೇ ಕಟ್ಟಡಗಳನ್ನು ಗುರುತಿಸುವ ಕಾರ್ಯ ಮಾಡಿದ್ದೇವೆ. ಪುಸ್ತಕ ಮತ್ತು ಪೀಠೋಪಕರಣಗಳನ್ನು ಶೀಘ್ರದಲ್ಲೇ ಗ್ರಾಮ ಗ್ರಂಥಾಲಯಗಳಿಗೆ ಹಂಚಿಕೆ ಮಾಡುತ್ತೇವೆ.-ಅನ್ಮೋಲ್ ಜೈನ್ , ಸಿಇಒ, ಜಿಪಂ, ಬೆಂಗಳೂರು ದಕ್ಷಿಣ ಜಿಲ್ಲೆ
ಬಾಕ್ಸ್ .................ತಾಲೂಕು ಗ್ರಾಪಂಗಳು ಗ್ರಂಥಾಲಯಗಳ ಸಂಖ್ಯೆ
ಚನ್ನಪಟ್ಟಣ47ಕನಕಪುರ65
ಮಾಗಡಿ28ರಾಮನಗರ23
----------------------------------------------ಒಟ್ಟು163
----------------------------------------------------------------------------23ಕೆಆರ್ ಎಂಎನ್ 2,3.ಜೆಪಿಜಿ
2.ಜಿಪಂ ಕಟ್ಟಡ3.ಅನ್ಮೋಲ್ ಜೈನ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಪಂ, ಬೆಂಗಳೂರು ದಕ್ಷಿಣ ಜಿಲ್ಲೆ.
---------------------------------