ಶಿರಸಂಗಿಯಲ್ಲಿ ತ್ಯಾಗವೀರ ಲಿಂಗರಾಜರ ೧೬೪ನೇ ಜಯಂತಿ

| Published : Jan 11 2025, 12:47 AM IST

ಸಾರಾಂಶ

ಸವದತ್ತಿ ತಾಲೂಕಿನ ಶಿರಸಂಗಿಯ ಲಿಂಗರಾಜ್ ಹೈಸ್ಕೂಲ್‌ನ ಮೈದಾನದಲ್ಲಿ ತ್ಯಾಗವೀರ ಲಿಂಗರಾಜರ ೧೬೪ನೇ ಜಯಂತಿ ಆಚರಿಸಲಾಯಿತು. ಮೈದಾನದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳದೊಂದಿಗೆ ಲಿಂಗರಾಜರ ಭಾವಚಿತ್ರದ ಭವ್ಯ ಮೆರವಣಿಗೆ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸವದತ್ತಿ ತಾಲೂಕಿನ ಶಿರಸಂಗಿಯ ಲಿಂಗರಾಜ್ ಹೈಸ್ಕೂಲ್‌ನ ಮೈದಾನದಲ್ಲಿ ತ್ಯಾಗವೀರ ಲಿಂಗರಾಜರ ೧೬೪ನೇ ಜಯಂತಿ ಆಚರಿಸಲಾಯಿತು. ಮೈದಾನದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳದೊಂದಿಗೆ ಲಿಂಗರಾಜರ ಭಾವಚಿತ್ರದ ಭವ್ಯ ಮೆರವಣಿಗೆ ಆಚರಿಸಲಾಯಿತು.

ವಿದ್ಯಾರ್ಥಿಗಳ ಲೇಜಿಮ್ ಮೇಳ ಗಮನ ಸೆಳೆಯಿತು. ತ್ರಿವಳಿ ಗ್ರಾಮಗಳ ಗುರು-ಹಿರಿಯರು ಎಸ್‌ಟಿಎಲ್‌ಎಸ್‌ಎಸ್ ಸಮಿತಿಯ ಚೇರಮನ್‌, ಆಡಳಿತ ಮಂಡಳಿಯ ಸರ್ವ ಸದಸ್ಯರು ಸೇರಿದಂತೆ ಶಾಲೆಯ ಸಿಬ್ಬಂದಿ, ಕಾನ್ಪೆಂಟ್ ಶಾಲೆಯ ಮಕ್ಕಳು, ಶಿಕ್ಷಕಿಯರ ಬಳಗ ಉಪಸ್ಥಿತರಿದ್ದರು.ಶಾಲೆಯ ಆವರಣದಲ್ಲಿ ಕಾರ್ಯಕ್ರಮ ನೆರವೇರಿತು. ಚೇರ್‌ಮನ್ ವಿ.ಎ.ಅದೃಶಪ್ಪನವರ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಲಿಂಗರಾಜರ ಜೀವನ ಸಮಾಜಮುಖಿ ಕಾರ್ಯಕ್ರಮಗಳು ಕುರಿತು ಮಾತನಾಡಿದರು. ಎಸ್.ಎಚ್.ಶಿಂಧೆ. ಕೆ.ಐ.ಕಲಾಲ್, ಅಶೋಕ ಕುಲಕರ್ಣಿ, ಎಂ.ಎ.ತೋರಣಗಟ್ಟಿ, ಐ.ಎಫ್.ಈರನಗೌಡ, ಎಸ್.ಎಂ.ಪಾಟೀಲ್, ಶಿವಾನಂದ ತೋರಗಲ್ಲ, ಬಿ.ಪಿ.ಗಾಣಿಗೇರ, ಎಚ್.ಕೆ.ಗುರ್ಲಕಟ್ಟಿ ಉಪಸ್ಥಿತರಿದ್ದರು. ಶಿಕ್ಷಕ ಎನ್‌.ಎಸ್.ಗುಡಿಸಾಗರ ಕಾರ್ಯಕ್ರಮ ನಿರೂಪಿಸಿದರು. ಮೇಘಾ ಪೂಜಾರಿ ವಂದಿಸಿದರು.ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನು ಬಡ ಮಕ್ಕಳ ಶಿಕ್ಷಣಕ್ಕೆ ದಿನದಲಿತರ ಏಳ್ಗೆಗೆ ದಾನ ಮಾಡಿದರು. ಅಂದ ದಾನಿಗಳು ಸಮಾಜದಲ್ಲಿ ಸಿಗುವುದು ವಿರಳ. ಅವರ ಆದರ್ಶಮಯ ಜೀವನ ನಮಗೆಲ್ಲರಿಗೂ ದಾರಿದೀಪವಾಗಿದೆ. ಕೆಎಲ್‌ಇ ಮಹಾಸಂಸ್ಥೆ ಹೆಮ್ಮರವಾಗಿ ಬೆಳೆಯಲಿಕ್ಕೆ ಶಿರಸಂಗಿ ದೇಸಾಯಿಯವರ ದಾನ ಅವಿಸ್ಮರಣೀಯವಾದದ್ದು, ಕೃಷಿ ಸುಧಾರಣೆಗಾಗಿ ಅವರು ಕೈಗೊಂಡ ಕಾರ್ಯಕ್ರಮಗಳು ದೂರದೃಷ್ಟಿಗೆ ಹಿಡಿದ ಕನ್ನಡಿ. ಆದರ್ಶಮಯ ಜೀವನ ನಡೆಸಿದ ಲಿಂಗರಾಜರು ಸದಾಸ್ಮರಣಿಯರು.

-ವಿ.ಎ.ಅದೃಶಪ್ಪನವರ, ಚೇರ್‌ಮನ್.