16 ರಿಂದ 18ರ ವರೆಗೆ ಕರ್ನಾಟಕ ವಿವಿ ಅಥ್ಲೆಟಿಕ್‌ ಕ್ರೀಡಾಕೂಟ

| Published : Dec 14 2023, 01:30 AM IST

16 ರಿಂದ 18ರ ವರೆಗೆ ಕರ್ನಾಟಕ ವಿವಿ ಅಥ್ಲೆಟಿಕ್‌ ಕ್ರೀಡಾಕೂಟ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಧಾರವಾಡಸುಮಾರು ಎರಡು ದಶಕಗಳ ನಂತರ ಇಲ್ಲಿಯ ಕರ್ನಾಟಕ ಕಲಾ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯದ 70ನೇ ಅಂತರ್‌ ಕಾಲೇಜುಗಳ ಅಥ್ಲೆಟಿಕ್‌ ಕ್ರೀಡಾಕೂಟದ ಆತಿಥ್ಯ ವಹಿಸಿದೆ.ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಕರ್ನಾಟಕ ವಿವಿ ಕುಲಸಚಿವ ಡಾ. ಎ.ಚೆನ್ನಪ್ಪ, ಕರ್ನಾಟಕ ವಿವಿ 70ನೇ ಅಂತರ್‌ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟವನ್ನು ನಗರದ ಆರ್.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಡಿ. 16 ರಿಂದ 18 ರ ವರೆಗೆ ಆಯೋಜಿಸಲಾಗಿದೆ.

ಧಾರವಾಡ

ಸುಮಾರು ಎರಡು ದಶಕಗಳ ನಂತರ ಇಲ್ಲಿಯ ಕರ್ನಾಟಕ ಕಲಾ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯದ 70ನೇ ಅಂತರ್‌ ಕಾಲೇಜುಗಳ ಅಥ್ಲೆಟಿಕ್‌ ಕ್ರೀಡಾಕೂಟದ ಆತಿಥ್ಯ ವಹಿಸಿದೆ.

ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಕರ್ನಾಟಕ ವಿವಿ ಕುಲಸಚಿವ ಡಾ. ಎ.ಚೆನ್ನಪ್ಪ, ಕರ್ನಾಟಕ ವಿವಿ 70ನೇ ಅಂತರ್‌ ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟವನ್ನು ನಗರದ ಆರ್.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಡಿ. 16 ರಿಂದ 18 ರ ವರೆಗೆ ಆಯೋಜಿಸಲಾಗಿದೆ. ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕವಿವಿ ವ್ಯಾಪ್ತಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಕ್ರೀಡಾ ಸಂಭ್ರಮ ಎಂಬ ಮಾಹಿತಿ ಪುಸ್ತಕ ಬಿಡುಗಡೆ ಮಾಡಲಾಗುವುದು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಆರವಿಂದ ಬೆಲ್ಲದ ಭಾಗವಹಿಸಲಿದ್ದಾರೆ ಎಂದರು.

70ನೇ ಅಥ್ಲೆಟಿಕ್ ಕ್ರೀಡಾಕೂಟದ ಅಧ್ಯಕ್ಷ ಡಾ. ಜಗದೀಶ ಕೆ, ಮಾತನಾಡಿ, ಕ್ರೀಡಾಪಟುಗಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕರ್ನಾಟಕ ಕಾಲೇಜಿನ ವಿವಿಧ ವಸತಿ ನಿಲಯಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಪುರುಷ ಮತ್ತು ಮಹಿಳೆಯರು ಒಟ್ಟು 60 ವಿವಿಧ ರೀತಿಯ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ 70 ಕಾಲೇಜುಗಳ ಒಟ್ಟು 600 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಪುರುಷ ಮತ್ತು ಮಹಿಳಾ ಓಟ, ಅಥ್ಲೆಟಿಕ್‌ ಸೇರಿದಂತೆ ಪುರುಷರ ಡೆಕತ್ಲಾನ್, ಮಹಿಳೆಯರ ಹೆಪ್ಟಾಥ್ಲಾನ್ 3 ಸಾವಿರ ಸ್ಟೀಪಲ್ ಚೇಸ್, ಪೋಲ್ ವಾಲ್ಟ್ ಕ್ರೀಡೆಗಳನ್ನು ಆಯೋಜಿಸುತ್ತಿರುವುದು ವಿಶೇಷವಾಗಿದೆ ಎಂದರು.

ಇಲ್ಲಿಯವರೆಗೆ ಧಾರವಾಡದ 29 ಕಾಲೇಜಿನಿಂದ 180 ಪುರುಷ ಹಾಗೂ 101 ಮಹಿಳಾ ಕ್ರೀಡಾಪಟುಗಳು, ಗದಗ ಜಿಲ್ಲೆಯ ಏ‍ಳು ಕಾಲೇಜಿನ 25 ಪುರುಷ ಮತ್ತು 11 ಮಹಿಳಾ ಕ್ರೀಡಾಪಟುಗಳು, ಹಾವೇರಿಯ ಎರಡು ಕಾಲೇಜುಗಳಿಂದ ಏಳು ಪುರುಷ ಮತ್ತು ಇಬ್ಬರು ಮಹಿಳಾ ಕ್ರೀಡಾಪಟುಗಳು ಹಾಗೂ ಕಾರವಾರದ 20 ಕಾಲೇಜಿನಿಂದ 182 ಪುರುಷ ಮತ್ತು 78 ಮಹಿಳಾ ಕ್ರೀಡಾಪಟುಗಳು ನೋಂದಣಿ ಮಾಡಿಕೊಂಡಿದ್ದಾರೆ. ವಿಜೇತರಾದ ಕ್ರೀಡಾ ಸ್ಪರ್ಧಿಗಳಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಕಲಾ ಕಾಲೇಜು ಪ್ರಾಚಾರ್ಯ ಡಾ. ಡಿ.ಬಿ.ಕರಡೋಣಿ ಮಾತನಾಡಿ, ಡಿ.18 ರಂದು ಸಮಾರೋಪ ನಡೆಯಲಿದ್ದು, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಚಿವ ಬಿ.ನಾಗೇಂದ್ರ ಸಮಾರೋಪ ಭಾಷಣ ಮಾಡಲಿದ್ದಾರೆ. ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಭಾಗವಹಿಸಲಿದ್ದಾರೆ. ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಪ್ರಭಾರ ಕುಲಪತಿ ಪ್ರೊ.ರಾಜೇಂದ್ರ ನಾಯಕ, ಡಾ.ಮಂಜುಳಾ ಚಲುವಾದಿ, ಕಾಲೇಜಿನ ದೈಹಿಕ ನಿರ್ದೇಶಕ ಡಾ. ಮಂಜುನಾಥ ಅಸುಂಡಿ, ವಿಶ್ರಾಂತ ದೈಹಿಕ ವಿ. ಎಚ್.ಕಲಾದಗಿ, ವಿಜ್ಞಾನ ಕಾಲೇಜಿನ ದೈಹಿಕ ನಿರ್ದೇಶಕ ಡಾ. ಡಿ.ಬಿ.ಗೋವಿಂದಪ್ಪ ಇದ್ದರು.