ಸಾರಾಂಶ
ಪುರಸಭಾ ವ್ಯಾಪ್ತಿಯ ಬೊಮ್ಮತನಹಳ್ಳಿ ರಸ್ತೆಯಲ್ಲಿನ ಪೌರ ಕಾರ್ಮಿಕರಿಗಾಗಿ ಅಂದಾಜು ರು1.35 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 17 ಗೃಹಭಾಗ್ಯ ಯೋಜನೆಯ ಮನೆಗಳನ್ನು ಗುರುವಾರ ಶಾಸಕ, ತುಮುಲ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ. ವೆಂಕಟೇಶ್ ಹಾಗೂ ಮಾಜಿ ಸಚಿವರಾದ ವೆಂಕಟರಮಣಪ್ಪ ಉದ್ಘಾಟಿಸಿ ಪಲಾನುಭವಿಗಳಿಗೆ ಹಸ್ತಾಂತರಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಪುರಸಭಾ ವ್ಯಾಪ್ತಿಯ ಬೊಮ್ಮತನಹಳ್ಳಿ ರಸ್ತೆಯಲ್ಲಿನ ಪೌರ ಕಾರ್ಮಿಕರಿಗಾಗಿ ಅಂದಾಜು ರು1.35 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 17 ಗೃಹಭಾಗ್ಯ ಯೋಜನೆಯ ಮನೆಗಳನ್ನು ಗುರುವಾರ ಶಾಸಕ, ತುಮುಲ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ವಿ. ವೆಂಕಟೇಶ್ ಹಾಗೂ ಮಾಜಿ ಸಚಿವರಾದ ವೆಂಕಟರಮಣಪ್ಪ ಉದ್ಘಾಟಿಸಿ ಪಲಾನುಭವಿಗಳಿಗೆ ಹಸ್ತಾಂತರಿಸಿದರು.ಈ ವೇಳೆ ಶಾಸಕ ಎಚ್ ವಿವಿ ಮಾತನಾಡಿ ಮಾಜಿ ಸಚಿವ ವೆಂಕಟರಮಣಪ್ಪ, ಹಾಗೂ ತಾವು ಶಾಸಕರಾದ ನಂತರ ಗ್ರಾಮೀಣ ಪ್ರಗತಿಗೆ ಸರ್ಕಾರದ ವಿವಿಧ ಯೋಜನೆ ಅಡಿ ಕೊಡುಗೆ ಬಗ್ಗೆ ವಿವರಿಸಿ, ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಬಳಿಕ ಪುರಸಭಾ ವ್ಯಾಪ್ತಿಯ ಕಾವಲಗೆರಿ ವಾರ್ಡಿನಲ್ಲಿ ಅಂದಾಜು ರು.94 ಲಕ್ಷ ರು.ಗಳ ವೆಚ್ಚದ ನೂತನ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಇದೇ ವೇಳೆ ಪುರಸಭಾ ಅಧ್ಯಕ್ಷರಾದ ಸುದೇಶ್ ಬಾಬು, ಉಪಾಧ್ಯಕ್ಷರಾದ ಮಾಲೀನ್ ತಾಜ್, ಪಿ ಎಚ್ ರಾಜೇಶ್, ಗುರ್ರಪ್ಪ, ಶಂಕರ್ ರೆಡ್ಡಿ, ರಾಮಾಂಜಿನಪ್ಪ, ವೇಲುರಾಜು, ಸದಸ್ಯರಾದ ಕಲ್ಪವೃಕ್ಷ ರವಿ,ವೆಂಕಟರವಣಪ್ಪ,ವಿಜಯ್ ಕುಮಾರ್, ಮೊಹಮ್ಮದ್ ಇಮ್ರಾನ್,ಗೊರ್ತಿ ನಾಗರಾಜ್ ವೆಂಕಟರಾಮರೆಡ್ಡಿ, ಆರ್ .ಎ. ಹನುಮಂತರಾಯಪ್ಪ,ಗುಟ್ಟಹಳ್ಳಿ ಅಂಜಪ್ಪ ರವರು ಇತರರಿದ್ದರು.;Resize=(128,128))
;Resize=(128,128))
;Resize=(128,128))