ಸಾರಾಂಶ
ಅಮರದೇವರಗುಡ್ಡ ಗೊಲ್ಲರಹಟ್ಟಿಯ ಈರಮ್ಮ, ನಿಂಗಮ್ಮ, ಸುಷ್ಮಾ, ಮಂಜಮ್ಮ, ವಿಜಯಲಕ್ಷ್ಮಿ, ಮಂಜುಳಾ, ನಾಗಮ್ಮ, ಚಿತ್ತಪ್ಪ, ಕೃಷ್ಣಮೂರ್ತಿ, ರಾಧಿಕಾ, ಸಾವಿತ್ರಮ್ಮ, ಚಿತ್ತಪ್ಪ ಸೇರಿ ಇತರರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಕೂಡ್ಲಿಗಿ: ಪಪಂ ವ್ಯಾಪ್ತಿಯ 19ನೇ ವಾರ್ಡ್‌ನ ಅಮರದೇವರಗುಡ್ಡ ಗೊಲ್ಲರಹಟ್ಟಿಯಲ್ಲಿ ಬುಧವಾರ 18ಕ್ಕೂ ಹೆಚ್ಚಿನ ಜನರಿಗೆ ವಾಂತಿ-ಭೇದಿಯಾಗಿದ್ದು, ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಮರದೇವರಗುಡ್ಡ ಗೊಲ್ಲರಹಟ್ಟಿಯ ಈರಮ್ಮ, ನಿಂಗಮ್ಮ, ಸುಷ್ಮಾ, ಮಂಜಮ್ಮ, ವಿಜಯಲಕ್ಷ್ಮಿ, ಮಂಜುಳಾ, ನಾಗಮ್ಮ, ಚಿತ್ತಪ್ಪ, ಕೃಷ್ಣಮೂರ್ತಿ, ರಾಧಿಕಾ, ಸಾವಿತ್ರಮ್ಮ, ಚಿತ್ತಪ್ಪ ಸೇರಿ ಇತರರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.ಈ ಪೈಕಿ 8-10 ವರ್ಷದವರು ಚಿಕ್ಕಮಕ್ಕಳು ಸೇರಿ ವೃದ್ಧರು ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಂತಿ-ಭೇದಿ ಹರಡಲು ನಿಖರ ಕಾರಣ ತಿಳಿದುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆ ಅಮರದೇವರಗುಡ್ಡ ಗೊಲ್ಲರಹಟ್ಟಿ ಗ್ರಾಮಕ್ಕೆ ವೈದ್ಯರು, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಕಳುಹಿಸಿದ್ದು, ಸರ್ವೆ ಮಾಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.