ದೇಶಾಭಿವೃದ್ಧಿಗೆ ಮೋದಿಯಿಂದ 18 ಗಂಟೆ ಕಾರ್ಯ: ಕರಡಿ

| Published : Jan 03 2024, 01:45 AM IST

ದೇಶಾಭಿವೃದ್ಧಿಗೆ ಮೋದಿಯಿಂದ 18 ಗಂಟೆ ಕಾರ್ಯ: ಕರಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ಮೋದಿ ಆಶಯದಂತೆ ಹಲವು ಜನಪರ ಯೋಜನೆಗಳಿಂದ ಭಾರತ ವಿಕಾಸದತ್ತ ಸಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ-ಮನಗಳನ್ನು ತಲಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ

ಕನಕಗಿರಿ: ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗಾಗಿ ದಿನಕ್ಕೆ ೧೮ ಗಂಟೆ ಸಮಯ ನೀಡುತ್ತಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಅವರು ತಾಲೂಕಿನ ಚಿಕ್ಕಮಾದಿನಾಳ ಹಾಗೂ ಬಸರಿಹಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ನಮ್ಮ ಸರ್ಕಾರ ೧೦ ವರ್ಷಗಳಲ್ಲಿ ರೈತರಿಗೆ, ಕಾರ್ಮಿಕರಿಗೆ, ದುಡಿಯುವ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದೆ. ಬಡ ಹಾಗೂ ಮಧ್ಯಮ ವರ್ಗಕ್ಕೆ ಬಡ್ಡಿ ರಹಿತ ಸಾಲ, ಈ ಹಿಂದೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸುಸ್ತಿ ಸಾಲ ಮನ್ನಾ, ಉಜ್ವಲ, ಸುಕನ್ಯಾ ಸಮೃದ್ಧಿ, ಗ್ರಾಮೀಣ ಭಾಗದ ಜನರ ಉದ್ಧಾರಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಪ್ರಧಾನಿ ಮೋದಿ ಆಶಯದಂತೆ ಹಲವು ಜನಪರ ಯೋಜನೆಗಳಿಂದ ಭಾರತ ವಿಕಾಸದತ್ತ ಸಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ-ಮನಗಳನ್ನು ತಲಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಪ್ರಮುಖರಾದ ಶ್ರೀಧರ ಕೇಸರಹಟ್ಟಿ, ನರಸಿಂಗರಾವ್ ಕುಲಕರ್ಣಿ, ವಾಗೀಶ ಹಿರೇಮಠ, ತಿಪ್ಪಣ್ಣ ಗಿಡ್ಡಿ, ವೆಂಕಟೇಶ ಉಪ್ಪಾರ, ಮರಿಯಪ್ಪ ತಿದಿ, ಗುರುಶಾಂತಪ್ಪ ಉಪ್ಪಾರ, ಹುಲುಗಪ್ಪ ಹಿರೇಮಾದಿನಾಳ, ಶಿವಪ್ಪ ಸುಳೇಕಲ್, ಹುಲಿಗೆಮ್ಮ ನಾಯಕ ಇತರರು ಇದ್ದರು.

ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ೨೫ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ರಾಜ್ಯ ಸರ್ಕಾರದ ಪುಕ್ಕಟೆ ಯೋಜನೆಗಳಿಗೆ ಜನ ಬೇಸತ್ತು ಹೋಗಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ಬೆಂಬಲಿಸಲಿದ್ದು, ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿದ್ದಾರೆ ಎಂದು ಮಾಜಿ ಶಾಸಕ ಬಸವರಾಜ ದಡೇಸ್ಗೂರು ತಿಳಿಸಿದ್ದಾರೆ.