ಸಾರಾಂಶ
ಮುಂಡಗೋಡ: ಹಾಸನ ಮೂಲದ ಯುವತಿಯೊಬ್ಬಳಿಂದ ₹೧೮ ಲಕ್ಷ ಪಡೆದು ವಂಚನೆ ಮಾಡಿದ ಕುರಿತು ಮುಂಡಗೋಡ ಪೊಲೀಸ್ ಠಾಣೆಯ ಪೇದೆಯೊಬ್ಬರ ಮೇಲೆ ದೂರು ದಾಖಲಾಗಿದೆ.
ಗಿರೀಶ ಎಂಬ ಪೇದೆಯೇ ವಂಚನೆ ಮಾಡಿದ ಆರೋಪಿ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ಗಿರೀಶ ಅದೇ ಜಿಲ್ಲೆಯ ಖಾಸಗಿ ಕಂಪನಿ ಉದ್ಯೋಗಿ ಯುವತಿಯೊಂದಿಗೆ ೨೦೧೮ರಲ್ಲಿ ಸ್ನೇಹ ಬೆಳೆಸಿದ್ದ. ಅಲ್ಲದೇ ಮನೆ ಕಟ್ಟುವುದಿದೆ, ಅದಕ್ಕಾಗಿ ಆಕೆಯಿಂದ ಸುಮಾರು ₹೧೮ ಲಕ್ಷ ಲಕ್ಷ ಪಡೆದು ಆನ್‌ಲೈನ್ ಗೇಮಿಂಗ್‌ಗೆ ಹೂಡಿ ಹಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಹಣ ವಾಪಸ್ ನೀಡದೆ ವಂಚನೆ ಮಾಡಿದ ಬಗ್ಗೆ ಯುವತಿ ಕಳೆದ ವರ್ಷವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.ಆದರೆ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಇಲಾಖೆ ಗೌರವದ ಪ್ರಶ್ನೆ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸದೆ ಸಂಧಾನ ಮಾಡಿಸಿ ಆರೋಪಿಯಿಂದ ಬ್ಲ್ಯಾಂಕ್ ಚೆಕ್ ಕೊಡಿಸಿದ್ದರು. ಆದರೆ ವರ್ಷವಾದರೂ ಹಣ ಮರುಪಾವತಿಸದ ಕಾರಣ ಈಗ ಮತ್ತೆ ಮುಂಡಗೋಡ ಪೊಲೀಸ್ ಠಾಣೆಗೆ ಆಗಮಿಸಿದ ಯುವತಿಯು ಪೇದೆ ಗಿರೀಶ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಯುವತಿ ಪ್ರಕರಣ ದಾಖಲಿಸುತ್ತಿದ್ದಂತೆ ಆರೋಪಿ ಗಿರೀಶ ನಾಪತ್ತೆಯಾಗಿದ್ದಾರೆ.
ಅಪಘಾತ, ಬೈಕ್ ಸವಾರನಿಗೆ ಗಾಯಶಿರಸಿ: ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ದೇವನಳ್ಳಿ- ಕರೂರ ರಸ್ತೆಯಲ್ಲಿ ನಡೆದಿದೆ.ತಾಲೂಕಿನ ದೇವನಳ್ಳಿಯ ಮೇಲಿನಕೇರಿಯ ತಿರುಮಲ ಕೇಶವ ಮರಾಠಿ(೨೬) ಗಾಯಗೊಂಡ ಬೈಕ್ ಸವಾರ. ಆರೋಪಿತ ಸ್ವಿಫ್ಟ್ ಕಾರಿನ ಹಳಿಯಾಳದ ಡೋಮಗೆರಾದ ಕಿರಣ ಮಾರುತಿ ಕಮರೆಕರ್(೩೦) ಕರೂರ ಕಡೆಯಿಂದ ದೇವನಳ್ಳಿ ಕಡೆಗೆ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಬೈಕ್‌ಗೆ ಡಿಕ್ಕಿಪಡಿಸಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸಮೇತ ಬಿದ್ದ ತಿರುಮಲ ಕೇಶವ ಮರಾಠಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.