ಬ್ಯಾಡಗಿ ಎಪಿಎಂಸಿಗೆ 1.84 ಲಕ್ಷ ಮೆಣಸಿನಕಾಯಿ ಚೀಲ ಮಾರಾಟಕ್ಕೆ

| Published : Feb 04 2025, 12:30 AM IST

ಬ್ಯಾಡಗಿ ಎಪಿಎಂಸಿಗೆ 1.84 ಲಕ್ಷ ಮೆಣಸಿನಕಾಯಿ ಚೀಲ ಮಾರಾಟಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ (ಫೆ.3) ಆವಕ ಎರಡು ಲಕ್ಷ ಸಮೀಪಿಸಿದ್ದು, ಒಂದೇ ವಾರದಲ್ಲಿ 50 ಸಾವಿರಕ್ಕೂ ಅಧಿಕ ಚೀಲಗಳಷ್ಟು ಆವಕಿನಲ್ಲಿ ಏರಿಕೆಯಾಗಿದೆ.

ಬ್ಯಾಡಗಿ:ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ (ಫೆ.3) ಆವಕ ಎರಡು ಲಕ್ಷ ಸಮೀಪಿಸಿದ್ದು, ಒಂದೇ ವಾರದಲ್ಲಿ 50 ಸಾವಿರಕ್ಕೂ ಅಧಿಕ ಚೀಲಗಳಷ್ಟು ಆವಕಿನಲ್ಲಿ ಏರಿಕೆಯಾಗಿದೆ.

ಕಳೆದೊಂದು ತಿಂಗಳಿನಿಂದ ಮೆಣಸಿನಕಾಯಿ ಆವಕದ ಕೊರತೆ ಎದುರಿಸುತ್ತಿದ್ದ ಬ್ಯಾಡಗಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಸ್ವಲ್ಪಮಟ್ಟಿನ ನಿರಾಳತೆ ಕಂಡುಕೊಂಡಿದ್ದಾರೆ. ನಾಲ್ಕನೇ ಬಾರಿ 1 ಲಕ್ಷಕ್ಕೂ ಅಧಿಕ: ವಾರದಲ್ಲಿ ಎರಡು ದಿವಸ ಮಾತ್ರ ಅತ್ಯಧಿಕ ಆವಕವಾಗುತ್ತಿದೆ, ಕಳೆದ ಗುರುವಾರ 1.71 ಲಕ್ಷ, ಸೋಮವಾರ 1.55 ಲಕ್ಷ ಮೆಣಸಿನಕಾಯಿ ಚೀಲ ಆವಕವಾಗಿತ್ತು, ಇಂದು ಮತ್ತೆ 1,84.219 ಮೆಣಸಿನಕಾಯಿ ಚೀಲಗಳು ಹರಿದು ಬಂದಿದ್ದು, ಮಾರುಕಟ್ಟೆ ಪ್ರಾಂಗಣ ಚೀಲಗಳಿಂದ ಭರ್ತಿಯಾಗಿತ್ತು, ಮುಂಬರುವ ದಿನಗಳಲ್ಲಿ ಆವಕಿನಲ್ಲಿ ಏರಿಕೆಯಾಗುವ ಲಕ್ಷಣಗಳಿದ್ದು 2.5 ಲಕ್ಷವನ್ನು ದಾಟುವ ನಿರೀಕ್ಷೆಯಿದೆ.ಸೋಮವಾರದ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ ದರದಲ್ಲಿ ಸ್ಥಿರತೆ ಕಂಡು ಬಂದಿದೆ. ಕಡ್ಡಿ ತಳಿ ಮೆಣಸಿನಕಾಯಿ ಕನಿಷ್ಠ 2809, ಗರಿಷ್ಠ 33009, ಸರಾಸರಿ 28209, ಡಬ್ಬಿತಳಿ ಕನಿಷ್ಠ 3169, ಗರಿಷ್ಠ 35599, ಸರಾಸರಿ 29659, ಗುಂಟೂರು ಕನಿಷ್ಠ 1029 ಗರಿಷ್ಟ 16409, ಸರಾಸರಿ 14209 ರು.ಗಳಿಗೆ ಮಾರಾಟವಾಗಿವೆ.