ಮೈಸೂರು : ಫೆಂಗಾಲ್ ಚಂಡಮಾರುತ ಹಿನ್ನೆಲೆ ಮಳೆಗೆ 188 ವರ್ಷದ ಗರಡಿ ಮನೆ ಗೋಡೆ ಕುಸಿತ

| Published : Dec 05 2024, 12:35 AM IST / Updated: Dec 05 2024, 12:46 PM IST

ಮೈಸೂರು : ಫೆಂಗಾಲ್ ಚಂಡಮಾರುತ ಹಿನ್ನೆಲೆ ಮಳೆಗೆ 188 ವರ್ಷದ ಗರಡಿ ಮನೆ ಗೋಡೆ ಕುಸಿತ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಮಹಾರಾಜರ ಸಹಾಯದಿಂದ 1836 ರಲ್ಲಿ ಈ ಗರಡಿ ಮನೆ ನಿರ್ಮಿಸಲಾಗಿತ್ತು. ಮಳೆಯಿಂದಾಗಿ ಗರಡಿ ಮನೆಯ ಗೋಡೆ ಶಿಥಿಲವಾಗಿತ್ತು.

 ಮೈಸೂರು  : ಬಂಗಾಳಕೊಲ್ಲಿಯಲ್ಲಿ ಎದ್ದಿದ್ದ ಫೆಂಗಾಲ್ ಚಂಡಮಾರುತ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದಾಗಿ ನಗರದ ಗತಕಾಲದ ಗರಡಿ ಮನೆಯ ಗೋಡೆ ಕುಸಿದಿದೆ.ನಗರದ ಲಷ್ಕರ್ ಮೊಹಲ್ಲಾದಲ್ಲಿನ ಬರೋಬ್ಬರಿ 188 ವರ್ಷಗಳ ಇತಿಹಾಸವುಳ್ಳ ಗರಡಿ ಮನೆಯ ಗೋಡೆ ಭಾರಿ ಮಳೆಗೆ ಕುಸಿದಿದೆ. 

ಇದು ಉಸ್ತಾದ್ ಶ್ರೀನಿವಾಸಣ್ಣ ಅವರಿಗೆ ಸೇರಿದ ಗರಡಿ ಮನೆ. ಮೈಸೂರು ಮಹಾರಾಜರ ಸಹಾಯದಿಂದ 1836 ರಲ್ಲಿ ಈ ಗರಡಿ ಮನೆ ನಿರ್ಮಿಸಲಾಗಿತ್ತು. ಮಳೆಯಿಂದಾಗಿ ಗರಡಿ ಮನೆಯ ಗೋಡೆ ಶಿಥಿಲವಾಗಿತ್ತು. ಎಡೆ ಬಿಡದೆ ಮಳೆ ಸುರಿದ ಪರಿಣಾಮ ಇದೀಗ ಗೋಡೆ ಕುಸಿದಿದೆ. ಈಗಲೂ ಕೂಡ ಯುವಕರು ಗರಡಿ ಮನೆಯಲ್ಲಿ ಪ್ರತಿದಿನ ಕಸರತ್ತು ನಡೆಸುತ್ತಿದ್ದಾರೆ. ಪಾರಂಪರಿಕ ಕಟ್ಟಡ ಹಿನ್ನೆಲೆ ಗರಡಿ ಸಂರಕ್ಷಣೆಗೆ ಸ್ಥಳೀಯರು ಮನವಿ ಮಾಡಿದ್ದಾರೆ.